ರಾಜ್ಯ

ಜ. 14ಕ್ಕೆ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ

ಧಾರವಾಡ prajakiran.com : ಪಂಚಮಸಾಲಿ ಸಮಾಜದ 2ಎ ಮೀಸಲಾತಿಗಾಗಿ ವೀರಪ್ಪ ಮೋಯ್ಲಿಯಿಂದ ಯಡಿಯೂರಪ್ಪವರೆಗೆ ಮನವಿ ಮಾಡಿಕೊಂಡಿದ್ದೇವೆ‌ 

ಇವರಿಗೆಲ್ಲ ಮನವಿ ಕೊಟ್ಟು, ಶಾಲು ಹಾಕಿ ಸನ್ಮಾನ ಮಾಡಿ ವಿನಂತಿ ಮಾಡಿದ್ದೆಲ್ಲ ಸಾಕಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಅವರು ಧಾರವಾಡದಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ,
ನಮ್ಮ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷ ಆಗಿವೆ.

ರಾಜ್ಯವನ್ನು
ಸ್ವತಂತ್ರ ಬಂದಾಗಿನಿಂದ 8 ಜನ ಲಿಂಗಾಯತ ಸಿಎಂಗಳಾಗಿದ್ದಾರೆ.
ಆದರೆ ರಾಜಕೀಯ ಜಾಗೃತಿಗೆ ಮಾತ್ರ ಲಿಂಗಾಯತ ಸಮುದಾಯ ಬಳಕೆಯಾಗಿದೆ ಎಂದು ದೂರಿದರು.

ಈ ಎಲ್ಲ 8 ಜನ ಸಿಎಂಗಳಿಗೂ ಮೀಸಲಾತಿ ಕಲ್ಪಿಸುವ ಸುವರ್ಣ ಅವಕಾಶ ಇತ್ತು‌
ಆದರೆ ಯಾವ ಸಿಎಂ ಕೂಡ ಲಿಂಗಾಯತ ಸಮಾಜದ ಬೇಡಿಕೆ ಈಡೇರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಡಿಯೂರಪ್ಪ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಆಗಿ ಬಿಂಬಿಸಿಕೊಂಡಿದ್ದಾರೆ.
ಅವರ ಮೇಲೆ ಪಂಚಮಸಾಲಿ ಋಣಭಾರ ಬಹಳ ಇದೆ.ಯಡಿಯೂರಪ್ಪ ಅವಧಿಯಲ್ಲೇ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದರು.

ಆರ್.ಎಸ್.ಎಸ್ ಸಹ ಇದನ್ನು ಮನವರಿಕೆ ಮಾಡಿಕೊಳ್ಳಬೇಕು.
ಕರ್ನಾಟಕದಲ್ಲಿ ಬಿಜೆಪಿ ಬರಲು ಲಿಂಗಾಯತರ ಪಾತ್ರ ಬಹಳ ಇದೆ.
ಈ ಸತ್ಯ ಆರ್.ಎಸ್.ಎಸ್.ಗೂ ಗೊತ್ತಿದೆ.

ಮಹಾರಾಷ್ಟ್ರದಲ್ಲಿ ಸಂಘದ ಸಲಹೆ ಮೇರೆಗೆ ಮರಾಠರಿಗೆ ಶೇ. 16ರ ಮೀಸಲಾತಿ ಕೊಟ್ಟಿದ್ದಾರೆ. ಮಹಾರಾಷ್ಟ್ರ ಸಂಘ ಪರಿವಾರದಂತೆ ಕರ್ನಾಟಕ ಸಂಘ ಪರಿವಾರ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಚಮಸಾಲಿ ಸಮಾಜದ ಹಕ್ಕು ಈಡೇರಿಸಲು ಸಂಘ ಪರಿವಾರ ಸಲಹೆ ನೀಡಬೇಕು.
ಈ ಕಾರಣಕ್ಕಾಗಿಯೇ ನಾವು ಜನೆವರಿ 14ರಿಂದ ಪಾದಯಾತ್ರೆ ಮಾಡುತ್ತಿದ್ದೇವೆ.

ಜ. 14ಕ್ಕೆ ಕೂಡಲ ಸಂಗಮದಿಂದ ಪಾದಯಾತ್ರೆ ಹೊರಟು ಬೆಂಗಳೂರಿಗೆ ತೆರಳಲಿದೆ. ಉತ್ತರ ಕರ್ನಾಟಕ ಭಾಗದ ವಿವಿಧ ಮಠಾಧೀಶರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವರು.ಅಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅಷ್ಟರೊಳಗೆ ಯಡಿಯೂರಪ್ಪ ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ‌ ಹಾಗೂ ಲಿಂಗಾಯತ ಸಮಾಜದ ಇತರರಿಗೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಹೇಳಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *