prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
ರಾಜ್ಯ

ಖಾಸಗಿ ಆಸ್ಪತ್ರೆಗಳ ಶೇ.೫೦ ರಷ್ಟು ಹಾಸಿಗೆ ಕೋವಿಡ್ ಚಿಕಿತ್ಸೆಗೆ  ಮೀಸಲು  

ಧಾರವಾಡ prajakiran.com : ಅಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಣಿಯಾಗಿರುವ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ.೫೦ ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳಿಗೆ ಎಲ್ಲ ರೀತಿಯ ಸಹಕಾರ, ಮಾರ್ಗದರ್ಶನ ನೀಡಲಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯ […]

ರಾಜ್ಯ

ಧಾರವಾಡ ಜಿಲ್ಲೆಗೆ ಕೋವಿಡ್ ತಪಾಣೆಗಾಗಿ ೨,೩೦೦ ಆ್ಯಂಟಿಜೆನ್ ಕಿಟ್

 ಧಾರವಾಡ prajakiran.com : ಕೋವಿಡ್ ತಪಾಣೆಗಾಗಿ ಧಾರವಾಡ ಜಿಲ್ಲೆಗೆ ಒಟ್ಟು ೨,೩೦೦ ಆ್ಯಂಟಿಜೆನ್ ಕಿಟ್ ಪೂರೈಕೆಯಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಆ್ಯಂಟಿಜನ್ ಪರೀಕ್ಷೆ ವಾಹನಕ್ಕೆ ಚಾಲನೆ ನೀಡಿದರು. ಆ್ಯಂಟಿಜೆನ್ ಕಿಟ್ ಹೊಂದಿರುವ ವಾಹನ ಆಸ್ಪತ್ರೆ ಬಳಿ ಇದ್ದು, ಅಲ್ಲಿಗೆ ಆಗಮಿಸುವ ಕೋವಿಡ್-೧೯ ಲಕ್ಷಣ ಹೊಂದಿರುವ ಜನರಿಂದ ಸ್ಥಳದಲ್ಲಿಯೇ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರ್ಧ ಗಂಟೆಯಲ್ಲಿ ಫಲಿತಾಂಶ ತಿಳಿಯಲಿದೆ. ಈ ಸಂದರ್ಭದಲ್ಲಿ […]

ರಾಜ್ಯ

ಮುಖ್ಯಮಂತ್ರಿಗಳ ವಿಡಿಯೋ ಸಂವಾದ : ಸಚಿವರು, ಜಿಲ್ಲಾಧಿಕಾರಿಗಳು ಭಾಗಿ

ಧಾರವಾಡ prajakiran.com : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು  ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗಿನ ವಿಡಿಯೋ ಸಂವಾದ ಕೈಗೊಂಡರು. ಸಂವಾದದಲ್ಲಿ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ, ಧಾರವಾಡ ಸೇರಿದಂತೆ ವಿವಿಧ ೧೧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ   ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಜಿಲ್ಲೆಯ ಕೋವಿಡ್ ನಿಯಂತ್ರಣ ಕ್ರಮಗಳು, ಮಳೆ ಪ್ರಮಾಣ, ಬಿತ್ತನೆ ಬೀಜ, ರಸಗೊಬ್ಬರ […]

ರಾಜ್ಯ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೇಷರತ್ ಕ್ಷಮೆ ಕೋರಲಿ ಎಂದ ಪಿ.ಎಚ್. ನೀರಲಕೇರಿ

ಧಾರವಾಡ prajakiran.com : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಹಾಗೂ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಹೀಗಾಗಿ ಸಚಿವರು ಬೇಷರತ್ ಕ್ಷಮೆ ಕೋರಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ಆಗ್ರಹಿಸಿದರು. ಅವರು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಕೆಲವರಿಗೆ ಕರೊನಾ ಬಂದಿರುವುದು ನಿಜ. ಈ […]

ರಾಜ್ಯ

ಧಾರವಾಡ ಜಿಲ್ಲೆಯಾದ್ಯಂತ ಜುಲೈ 15ರಿಂದ 24ರವರೆಗೆ  ಲಾಕ್ ಡೌನ್

ಧಾರವಾಡ prajakiran.com : ಧಾರವಾಡ: ಜಿಲ್ಲೆಯಾದ್ಯಂತ ಜುಲೈ 15 ರ ಬೆಳಿಗ್ಗೆ 10 ಗಂಟೆಯಿಂದ ಜುಲೈ 24 ರ ರಾತ್ರಿ 8 ಗಂಟೆಯವರೆಗೆ ಲಾಕ್ ಡೌನ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್  ಘೋಷಣೆ ಮಾಡಿದ್ದಾರೆ. ಅವರು ಸೋಮವಾರ ಧಾರವಾಡ ಜಿಲ್ಲಾಧಿಕಾರಿ ನೂತನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿವರಿಸಿದರು. ನಿರ್ಮಾಣ ಕಾಮಗಾರಿ, ಕೈಗಾರಿಕೆ ಚಟುವಟಿಕೆಗಳು, ಜೀವನಾವಶ್ಯಕ ವಸ್ತುಗಳ ಪೂರೈಕೆ ಗೆ ವಿನಾಯಿತಿ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ವಿವರ ಆದೇಶ ಹೊರಡಿಸುವರು ಎಂದು […]

ರಾಜ್ಯ

ವಿಜಯಪುರದಲ್ಲಿ ಪಿಪಿಇ ಕಿಟ್ ಧರಿಸಿ ಓಡಾಡಿದ ಮಾನಸಿಕ ಅಸ್ವಸ್ಥ…!

ವಿಜಯಪುರ prajakiran.com : ಪಿಪಿಇ ಕಿಟ್ ಧರಿಸಿ  ಮಾನಸಿಕ ಅಸ್ವಸ್ಥನೊಬ್ಬ ಓಡಾಡಿದ ಘಟನೆ ಗುಮ್ಮಟನಗರಿ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ಈ  ಘಟನೆ ಬೆಳಕಿಗೆ ಬಂದಿದ್ದು, ಈತ ಸ್ಮಶಾನದಲ್ಲಿ ಬಿಸಾಡಿರುವ ಪಿಪಿಇ ಕಿಟ್ ಧರಿಸಿ ಓಡಾಡಿದ್ದರಿಂದ ಸ್ಥಳೀಯರು ಕೆಲ ಕಾಲ ಆತಂಕಗೊಂಡಿದ್ದಾರೆ. ಇತನ ವರ್ತನೆಯಿಂದ ಬೆಚ್ಚಿಬಿದ್ದ ಸ್ಥಳೀಯರು ಈ ಕುರಿತು ಆರೋಗ್ಯ ಸಹಾಯವಾಣಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯಪುರದ ಜಲನಗರ, ಕೀರ್ತಿನಗರ ಬಡಾವಣೆಗಳ ಜನರಲ್ಲಿ ಆತಂಕ ಮನೆ ಮಾಡಿದ್ದು, ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು […]

ಅಪರಾಧ

ಕೃಷ್ಣಾನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ…..!

ವಿಜಯಪುರ prajakiran.com :  ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದು ಮಾನಸಿಕ ಅಸ್ವಸ್ಥ ಮಗಳೊಂದಿಗೆ ತಾಯಿಕೂಡ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳೂಕಿ ಜಾಕ್ ವೆಲ್ ನಲ್ಲಿ ಭಾನುವಾರ ಈ ರ್ದುಘಟನೆ ನಡೆದಿದೆ ಮೃತರನ್ನು ಶಕುಂತಲಾ ಖೇಡ್ ( 50) ಹಾಗೂ ಗಂಗಾ ( 22 ) ಎಂದು ಗುರುತಿಸಲಾಗಿದೆ. ಶಕುಂತಲಾ ಅವರ ಪತಿ ಸಿದ್ದಣ್ಣ ಖೇಡ್ ಕಳೆದ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ […]

ರಾಜ್ಯ

ಧಾರವಾಡ ಕೋವಿಡ್ ಆಸ್ಪತ್ರೆಯಲ್ಲಿ ರಾತ್ರಿಯಿಡಿ ಹೇಳುರಿಲ್ಲ…ಕೇಳುರಿಲ್ಲ…..!

ಧಾರವಾಡ prajakiran.com : ರಾಜ್ಯಾದ್ಯಂತ ಕರೋನಾ ಅವಾಂತರಗಳು ಬೆಳಕಿಗೆ ಬರುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಈವರೆಗೆ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.ಅದರಲ್ಲೂ ಆರೋಗ್ಯ ಇಲಾಖೆಯ ಯಡವಟ್ಟುಗಳು ಒಂದರ ನಂತರ ಒಂದು ಬಟಾಬಯಲು ಆಗುತ್ತಲೇ ಇವೆ. ಇಂತಹದೇ ಒಂದು ನಿರ್ದಶನ ಧಾರವಾಡದ ಕೋವಿಡ್ ಆಸ್ಪತ್ರೆಯಲ್ಲೂ ನಡೆದಿದ್ದು, ರಾತ್ರಿಯಿಡಿ ಅಲ್ಲಿ ಯಾವೊಬ್ಬ ಸಿಬ್ಬಂದಿಯಿಲ್ಲದೆ ಇದ್ದರಿಂದ ಕರೋನಾ ಸೋಂಕಿತರು ಪರದಾಡಿದ್ದಾರೆ. ಧಾರವಾಡದ ಗರಗ ರಸ್ತೆಯಲ್ಲಿಯುವ ಸಿ.ಬಿ. ಗುತ್ತಲ ಆಯುರ್ವೇದ ಕಾಲೇಜಿನಲ್ಲಿ  ನಿನ್ನೇ ರಾತ್ರಿ ವೇಳೆ ಈ ನಿರ್ಲಕ್ಷ್ಯತನ ನಡೆದಿರುವುದು ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. […]

ರಾಜ್ಯ

ಧಾರವಾಡ ಜಿಲ್ಲೆಯ 129 ಕೋವಿಡ್ ಪಾಸಿಟಿವ್ ಪ್ರಕರಣಗಳ ವಿವರ

ಧಾರವಾಡ : 129 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ* ಒಟ್ಟು 1088 ಕ್ಕೇರಿದ ಪ್ರಕರಣಗಳ ಸಂಖ್ಯೆ* *ಇದುವರೆಗೆ 398 ಜನ ಗುಣಮುಖ ಬಿಡುಗಡೆ* *657 ಸಕ್ರಿಯ ಪ್ರಕರಣಗಳು* ಇದುವರೆಗೆ 33 ಮರಣ ಧಾರವಾಡ Prajakiran.com : ಜಿಲ್ಲೆಯಲ್ಲಿ ಭಾನುವಾರ 129 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 1088 ಕ್ಕೆ ಏರಿದೆ. ಇದುವರೆಗೆ 398 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.657 ಪ್ರಕರಣಗಳು ಸಕ್ರಿಯವಾಗಿವೆ.33 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ. DWD 960 (26ವರ್ಷ,ಮಹಿಳೆ) […]

ರಾಜ್ಯ

ಜಾನಮಟ್ಟಿಯಲ್ಲಿ ಮೊದಲ ಕರೋನಾ ಪಾಸಿಟಿವ್ : ಆತಂಕದಲ್ಲಿ ಗ್ರಾಮಸ್ಥರು…!

ಬಾಗಲಕೋಟೆ prajakiran.com :  ಕರೋನಾ ವೈರಸ್ ನಗರ ಸೇರಿದಂತೆ ಹಳ್ಳಿಗಳಿಗೂ ವೇಗವಾಗಿ ವೈರಸ್ ಹಬ್ಬುತ್ತಿದೆ. ಇಷ್ಟು ದಿನಗಳ ವೆರೆಗೆ ಕೇವಲ ನಗರಗಳಲ್ಲಿ ಆತಂಕ ಸೃಷ್ಟಿಸುತ್ತಿದ್ದ ವೈರಸ್ ಇದೀಗ ಹಳ್ಳಿಯ ಮೂಲೆಗೂ ತನ್ನ ರೌದ್ರ ಅವತಾರ ತೋರಿಸುತ್ತಿದೆ. ಇದರಿಂದ ಗ್ರಾಮಗಳಲ್ಲೂ ಕರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಜಾನಮಟ್ಟಿಯಲ್ಲಿ ಮೊದಲ ಕರೋನಾ ವೈರಸ್ ಪತ್ತೆಯಾಗಿದೆ. 63 ವರ್ಷದ ಪುರುಷನಲ್ಲಿ ವೈರಸ್ ಪತ್ತೆಯಾಗಿದೆ. ಹೀಗಾಗಿ ಅವರ ಮನೆಯ ಸ್ಥಳದಿಂದ 100 ಮೀಟರ್ ಮುಳ್ಳುಕಂಟಿಗಳಿಂದ ಸೀಲ್ ಡೌನ್ […]