ರಾಜ್ಯ

ಹಣ, ಅಧಿಕಾರದ ಬೆನ್ನು ಹತ್ತಿ ಪರಿಸರ ನಾಶ : ಶಿವಕುಮಾರ್ ಶ್ರೀ ಕಳವಳ

ಹುಬ್ಬಳ್ಳಿ ಪ್ರಜಾಕಿರಣ.ಕಾಮ್  : ಪರಿಸರದ ಬಗ್ಗೆ ಯಾರಿಗೂ ಕಾಳಜಿ, ಚಿಂತನೆನೂ ಇಲ್ಲ ಆಸಕ್ತಿಯೂ ಇಲ್ಲ. ಬರೀ ಹಣ, ಅಧಿಕಾರದ ಬೆನ್ನು ಹತ್ತಿ ಪರಿಸರ ನಾಶವಾಗುತ್ತಿದೆ ಎಂದು
ಕಪತ ಗುಡ್ಡದ ಶಿವಕುಮಾರ್ ಸ್ವಾಮೀಜಿ ಹೇಳಿದರು.

ಅವರು, ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ನಡೆದ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು‌.

ಒಕ್ಕಲುತನ ಶ್ರೇಷ್ಠ, ವ್ಯಾಪಾರ ಮಧ್ಯಮ ನೌಕರಿ ಕನಿಷ್ಡ ಎಂದು ಘನಮಠ ಶಿವಯೋಗಿಗಳು ಅಂದೇ ಹೇಳಿದ್ದರು.

ಒಕ್ಕಲುತನ ಪರಿಸರ ಸ್ನೇಹಿಯಾಗಿದ್ದು, ಮೋಸ,ವಂಚನೆ ಇಲ್ಲ. ಅದಕ್ಕಾಗಿ ಅದು ಶ್ರೇಷ್ಠವಾಗಿದೆ‌. ಆದರೆ ಇಂದು ವ್ಯವಸ್ಥೆ ಸ್ಥಾವರ ಆಗಿದೆ. ಅದನ್ನು ಜಂಗಮಶೀಲವಾನ್ನಾಗಿಸಿ ಚಲನಶೀಲತೆಯನ್ನು ಮಾಡಬೇಕಿದೆ ಎಂದರು.

ಕಪತಗುಡ್ಡ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಅಲ್ಲ. ಅದು ನಮ್ಮೇಲ್ಲರ ಹೊಣೆಯಾಗಿದೆ ಎಂದರು.

ಇಂದು ನಮ್ಮೆಲ್ಲರ ಮನಸ್ಸು ತ್ಯಾಜ್ಯದಿಂದ ತುಂಬಿದೆ. ಬಹಿರಂಗದ ತ್ಯಾಜ್ಯ ಕ್ಕಿಂತಲೂ
ಅಂತರಂಗದ ತ್ಯಾಜ್ಯವನ್ನು ನಿರ್ಮೂಲನೆ ಮಾಡಿಕೊಳ್ಳಬೇಕಿದೆ. ಅದನ್ನು ನಿಷ್ಪ್ರಯೋಜಕ ಮಾಡಿದ್ದರಿಂದ ಖಾಲಿ ಖಾಲಿಯಾಗಿದೆ. ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

ಬದುಕಿನ ಸಾರ್ಥಕತೆ ಕಾಣಬೇಕು ಅಂದರೆ ಪ್ರತಿಯೊಬ್ಬರಲ್ಲಿ ಬಾಲಚಂದ್ರ ಜಾಬಶೆಟ್ಟಿ ಅವರಂತಹ ಸೇವಾ ಮನೋಭಾವನೆ ಬರಬೇಕು.

ನಾವು ಬೆಳೆಯಬೇಕು ಅಂದರೆ ತಿಳಿವಳಿಕೆ ಪಡೆಯಬೇಕು ಹಾಗೂ ಎಚ್ಚರಿಕೆ ಆಗಬೇಕು. ಗೊತ್ತಿದ್ರೂ ನಿರ್ಲಕ್ಷ್ಯ ಜೀವನ ಸಾಗಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇರುವುದು ಒಂದೇ ಭೂಮಿ ಅದರಲ್ಲಿ ಕಸ, ತ್ಯಾಜ್ಯ ಅವಗುಣವೆಂಬ ಕಸವನ್ನು ಕಿತ್ತು ಹಾಕಿ, ಸ್ವಚ್ಛ ಹುಬ್ಬಳ್ಳಿ -ಧಾರವಾಡ ಸ್ವಚ್ಛ ಉತ್ತರ ಕರ್ನಾಟಕ ಆಗಲಿ ಎಂದು ಶುಭ ಹಾರೈಸಿದರು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ,
ಎಂ.ಕೆ. ನಾಯ್ಕ ಮಾತನಾಡಿ,
ತ್ಯಾಜ್ಯ ವಿಲೇವಾರಿ ನಮಗೆ ಇಂದು ಸವಾಲಾಗಲು ಜನಸಂಖ್ಯೆ ಹೆಚ್ಚಳ ಕಾರಣವಾಗಿದೆ.

ತ್ಯಾಜ್ಯದಿಂದ ಸಂಪತ್ತು ಗಳಿಸಬೇಕು ಎಂದು ರಸಾಯನಿಕ ಬಳಕೆ ಮಾಡುವುದಲ್ಲ. ಪ್ಲಾಸ್ಟಿಕ್ ನಲ್ಲಿಯ ಕೆಲ ಅಂಶಗಳು, ರಸಾಯನಿಕ ಸಿಂಪರಣೆಯ ಕಣಗಳು ನಮಗೆ ಗೊತ್ತಿಲ್ಲದೆ ದೇಹದ ಒಳಗೆ ಹೋಗುತ್ತಿವೆ.

ಹೀಗಾಗಿ ತ್ಯಾಜ್ಯ ಮುಕ್ತಿ ಮಾಡಲು ಬಾಯೋಲಾಜಿಕಲ್ ತಂತ್ರಜ್ಞಾನ ಇದೆ. ಅದರ ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಸಜೀವ ಗ್ರಹ ಭೂಮಿಯನ್ನು ನಾವೆಲ್ಲರೂ ಸುರಕ್ಷಿತವಾಗಿ ಹಾಗೂ ಸುಸೂತ್ರವಾಗಿ ಇಟ್ಟುಕೊಳ್ಳಲು ಜಾಗೃತೆ ವಹಿಸಬೇಕು.ಮಣ್ಣಿನ ಮಹತ್ವ ಅರಿತುಕೊಂಡು ಬದುಕಬೇಕು ಎಂದರು.

ಕೆ ಎಲ್ ಇ ಟೆಕ್ನಾಲೋಜಿಕಲ್ ಯುನಿವರ್ಸಿಟಿ ರಜಿಸ್ಟಾರ್
ಡಾ. ಬಸವರಾಜ ಅನಾಮಿ ಮಾತನಾಡಿ ವಿಲೇವಾರಿ ದೊಡ್ಡಸವಾಲಾಗಿದೆ‌.
ಅದನ್ನು ನಾಗರಿಕ ಸಮಾಜ ಅರಿತುಕೊಳ್ಳಬೇಕು.

ತ್ಯಾಜ್ಯಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರೂ ಅದರ ಮೇಲೆ ಅವಲಂಬಿಸಿದ್ದೇವೆ. ಈ ನಿಟ್ಟಿನಲ್ಲಿ ಜಾಬಶೆಟ್ಟಿ ಅವರ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು‌.

ಈ ಸಂದರ್ಭದಲ್ಲಿ ಜಗದೀಶ್, ಮನೋಜಕುಮಾರ್ ಚಿತ್ತವಾಡಗಿ, ಬಾಲಚಂದ್ರ ಜಾಬಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.
ಎಂ. ಆರ್. ಪಾಟೀಲ ಸ್ವಾಗತಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *