ಜಿಲ್ಲೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ವಾರ್ಡ್ 18ರ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪೂಜಾರ ಪರ ಯುವಕರ ಪ್ರಚಾರ

ಧಾರವಾಡ prajakiran.com :
ವಾರ್ಡ ನಂ. 18ರ ಕಾಂಗ್ರೆಸ್ ಅಭ್ಯರ್ಥಿ ಚಂದ್ರು ಪೂಜಾರ( ಹಿರೇಮಠ) ಅವರ ಪರ ಹಲವು ಯುವಕರ ತಂಡ
ನಮ್ಮ ಓಣಿ ನಮ್ಮ ಮನೆ ಹುಡುಗ ಎಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನಿರೀಕ್ಹಿದಷ್ಟು  ಅಭಿವೃದ್ಧಿ ಕನಸುಗಳು‌ ನನಸಾಗಿಲ್ಲ.

ಹೀಗಾಗಿ ಇದೊಂದು ಬಾರಿ ಹೊಸಬರಿಗೆ ಆದ್ಯತೆ ‌ನೀಡಿ ಎಂದು ಮತ್ತು ಯಾಚಿಸುತ್ತಿದ್ದಾರೆ.

ನಮ್ಮ ಕನಸುಗಳು : ವಾರ್ಡ್ ನ ಸಮಸ್ಯೆ ಗಳ ನಿರಂತರವಾಗಿ ಸ್ಪಂದಿಸಲು ಸಹಾಯವಾಣಿ,
ಜನರ ತುರ್ತು ಆರೋಗ್ಯ ಸೇವೆಗೆ ಸ್ಪಂದಿಸುವ ಮಹಾದಾಸೆಯಿಂದ ವೈಯಕ್ತಿಕ ನೆಲೆಗಟ್ಟಿನಲ್ಲಿ ಉಚಿತ ಅಂಬುಲೆನ್ಸ್ ನಿಯೋಜನೆ,

ವಾರ್ಡ್ ವ್ಯಾಪ್ತಿಯ ಕೆರೆಗಳ ರಕ್ಷಣೆ, ಸಮಗ್ರ ಅಭಿವೃದ್ದಿಗೆ ಕ್ರಮ, ಹದಗೆಟ್ಟ ಒಳ ಚರಂಡಿ ಸಮಸ್ಯೆಗೆ ಕಾಯಕಲ್ಪ,

ಬೀದಿ ದೀಪ ಸಮಸ್ಯೆ ನಿವಾರಣೆಗೆ ಅವಿರತ ಪ್ರಯತ್ನ, ಮಹಾನಗರ ಪಾಲಿಕೆ ವಾರ್ಡ ನಂ.೧ ರ ವ್ಯಾಪ್ತಿಯಲ್ಲಿರುವ ಹದಗೆಟ್ಟ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸುವುದು,

ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ, ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಮಕ್ಕಳಿಗೆ ಅತ್ಯಾಧುನಿಕ ವ್ಯವಸ್ಥೆಯುಳ್ಳ ಆಟದ ಸಾಮಾಗ್ರಿ ಅಳವಡಿಕೆ,,

ಉದ್ಯಾನವನಗಳ ಹಸರೀಕರಣಕ್ಕೆ ಪ್ರಾಮುಖ್ಯತೆ, ರುದ್ರಭೂಮಿಯ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲು ಅನುದಾನ ಮೀಸಲು,

ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆಗೆ ಅಗತ್ಯ ಅನುದಾನ ತರುವುದು, ಯುವಕ, ಯುವತಿಯರ ಆರೋಗ್ಯಕರ ಜೀವನಕ್ಕೆ ಜಿಮ್ ಸ್ಥಾಪನೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮನವೊಲಿಸುತ್ತಿದ್ದಾರೆ

ಸಿ.ಬಿ. ನಗರ, ಜಯನಗರ, ಶಿವಗಿರಿಯ ಸ್ನೇಹಿತರ ಬಳಗ, ಹನುಮಂತ ನಗರ, ಗಣೇಶ ನಗರ ಸೇರಿದಂತೆ ಧಾರವಾಡದ ವಿವಿಧ ಬಡಾವಣೆಯಲ್ಲಿ ಹಲವು ಗುರು ಹಿರಿಯರ, ಮಹಿಳೆಯರ ಹಾಗೂ ವಿಶೇಷವಾಗಿ ಯುವಕರು ಒಲುವು ತೋರಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *