ಜಿಲ್ಲೆ

ಧಾರವಾಡದ ರಾಮಾಪುರ, ವೀರಾಪುರ, ಗರಗ, ತಡಕೊಡ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲೂಕು ಆಡಳಿತದಿಂದ ಸನ್ಮಾನ

ಧಾರವಾಡ prajakiran. com ಆ.09: ರಾಷ್ಟ್ರ ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ ರಾಮಾಪುರ ಮತ್ತು ವೀರಾಪುರ ಗ್ರಾಮದಲ್ಲಿರುವ ಸ್ವಾತಂತ್ರ್ಯ ಹೊರಾಟಗಾರರಿಗೆ ಧಾರವಾಡ ತಾಲೂಕಾ ಆಡಳಿತದಿಂದ ತಹಸಿಲ್ದಾರ ಸಂತೋಷ ಹಿರೇಮಠ ಅವರು ಸನ್ಮಾನಿಸಿ, ಗೌರವಿಸಿದರು.

ಅವರು ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನಲೆಯಲ್ಲಿ ರಾಮಾಪುರ ಗ್ರಾಮಕ್ಜೆ ತೆರಳಿ ಸ್ವಾತಂತ್ರ್ಯ ಹೋರಾಟಗಾರ ಯಲ್ಲಪ್ಪ ಭೀಮಪ್ಪ ಬಡಿಗೇರ ಅವರ ಮನೆಗೆ ತೆರಳಿ, ಯಲ್ಲಪ್ಪ ಅವರಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ನಂತರ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ನಿವಾಸಿ, ಸ್ವಾತಂತ್ರ್ಯ ಹೋರಾಟಗಾರ ಸೋಮಪ್ಪ ಬಸಪ್ಪ ಹಂಚಿನಮನಿ ಅವರ ಮನೆಗೆ ತೆರಳಿ, ಫಲಪುಷ್ಪ ನೀಡಿ, ಗೌರವಿಸಿದರು.

ನಂತರ ಅವರು ಸ್ವಾತಂತ್ರ್ಯ ಹೋರಾಟಗಾರರಾದ ತಡಕೊಡ ಗ್ರಾಮದ ಮಲ್ಲಯ್ಯ ಈರಯ್ಯ ಮಠಪತಿ, ಗರಗ ಗ್ರಾಮದ ತೋರಪ್ಪ ರಾಜಪ್ಪ ತೋರೊಜಿ ಅವರ ಮನೆಗಳಿಗೆ ತೆರಳಿ, ಫಲಪುಷ್ಪ ನೀಡಿ ಗೌರವಿಸಿದರು.

ಸನ್ಮಾನಿಸಿದ ನಂತರ ತಹಸಿಲ್ದಾರ ಅವರು ಸ್ವಾತಂತ್ರ್ಯ ಹೋರಾಟಗಾರರ ಮತದಾರ ಚೀಟಿಗೆ ಅವರ ಆಧಾರ್ ಸಂಖ್ಯೆ ಜೊಡಣೆ ಮಾಡಿದರು.

ಈ ಸಂದರ್ಭದಲ್ಲಿ ಧಾರವಾಡ ವೃತ್ತ ಕಂದಾಯ ನಿರೀಕ್ಷಕ ಗುರು ಸುಣಗಾರ, ಗರಗ ಆರ್.ಐ ಈರನಗೌಡ ಅಯ್ಯನಗೌಡ, ಪಿಡಿಓ ಶಸಿರೇಖಾ ಚಕ್ರಸಾಲಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶಂಭನಗೌಡ ಕ. ಪಾಟೀಲ,ಗ್ರಾಮ ಲೆಕ್ಕಾಧಿಕಾರಿ ಜಯಶ್ರೀ ಕಟ್ಟಿಮನಿ ಹಾಗೂ ಗ್ರಾಮಸ್ಥರು, ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.

*ಉಪವಿಭಾಗಾಧಿಕಾರಿಗಳಿಂದ ಸ್ವಾತಂತ್ರ್ಯ ಹೊರಾಟಗಾರರಿಗೆ ಸನ್ಮಾನ:*
ರಾಷ್ಟ್ರದ ಸ್ವಾತಂತ್ರ್ಯ ಅಮೃತಮಹೋತ್ಸವದ ಸುಸಂದರ್ಭದಲ್ಲಿ ಉವಿಭಾಗಾಧಿಕಾರಿ ಅಶೋಕ ತೇಲಿ ಅವರು ಸ್ವಾತಂತ್ರ್ಯ ಹೊರಾಟಗಾರರಾದ ಧಾರವಾಡ ನಗರದ ಜಯನಗರ ನಿವಾಸಿ ಪಂಚಾಕ್ಷರಯ್ಯ ಹಿರೇಮಠ, ಆಂಜನೇಯನಗರದ ಶಂಬಯ್ಯ ಶಂಸಂಬಯ್ಯನವರ ಅವರ ಮನೆಗಳಿಗೆ ತೆರಳಿ ಫಲಪುಷ್ಪ ಹಾಗೂ ರಾಷ್ಟ್ರ ಧ್ವಜ ನೀಡಿ, ಗೌರವಿಸಿದರು.

ಈ ಸಂದರ್ಭದಲ್ಲಿ ಅಮ್ಮಿನಭಾವಿ ಕಂದಾಯ ನಿರೀಕ್ಷಕ ಸಂಪತ್ತಕುಮಾರ ವಡೆಯರ, ಗ್ರಾಮಲೆಕ್ಕಾಧಿಕಾರಿ ಪರಮಾನಂದ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *