upsc topers
ಅಂತಾರಾಷ್ಟ್ರೀಯ

ರಾಜ್ಯದ 37 ಅಭ್ಯರ್ಥಿಗಳು ಯುಪಿಎಸ್ಸಿಯಲ್ಲಿ ಅತ್ಯುತ್ತಮ ಸಾಧನೆ

 ನವದೆಹಲಿ Prajakiran.com : ದೇಶದ ಅತ್ಯುನ್ನತ ನಾಗರಿಕ ಸೇವೆಗಳ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)  ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ

ಪ್ರಕಟಗೊಂಡಿದೆ.ಅದರಲ್ಲಿ ರಾಜ್ಯದ 37ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಟಾಪ್– 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಹಲವರು  ಇದ್ದಾರೆ. 2019 ಸಾಲಿನಲ್ಲಿ ಒಟ್ಟು 829 ಅಭ್ಯರ್ಥಿಗಳು ವಿವಿಧ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಐಎಎಸ್ಗೆ(ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) 180, ಐಎಫ್ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 24, ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) 150, ಕೇಂದ್ರ ಸರ್ಕಾರದ ಗ್ರೂಪ್ ಹುದ್ದೆಗೆ 438 ಹಾಗೂ ಬಿ ಗ್ರೂಪ್ ಹುದ್ದೆಗೆ 135 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಸಾಮಾನ್ಯ ವರ್ಗ – 304 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗ -78 ಅಭ್ಯರ್ಥಿಗಳು, ಹಿಂದುಳಿದ ವರ್ಗ – 251 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ – 129 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡ – 67 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

829 ಅಭ್ಯರ್ಥಿಗಳಲ್ಲಿ ಕರ್ನಾಟಕದಿಂದ 37 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಚಿಕ್ಕಮಗಳೂರು ಮೂಲದ ಯಶಸ್ವಿನಿ ಬಿ 71 ರ್ಯಾಂಕ್ ಗಳಿಸಿದ್ದಾರೆ. 

ಹರಿಯಾಣದ 29 ವರ್ಷದ ಪ್ರದೀಪ್ ಸಿಂಗ್ ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದು, ಜತಿನ್ ಕಿಶೋರ್ ಮತ್ತು ಉತ್ತರಪ್ರದೇಶದ ಪ್ರತಿಭಾ ವರ್ಮಾ ಮಹಿಳೆಯರಲ್ಲಿ ಟಾಪರ್ ಆಗಿದ್ದು, 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕದ ಯುಪಿಎಸ್ಸಿ ಪರೀಕ್ಷೆ ರ್ಯಾಂಕ್ ಪಡೆದ ಕನ್ನಡಿಗರ ವಿವರ ಹೀಗಿದೆ

1. ಚಿಕ್ಕಮಗಳೂರು-ಯಶಸ್ವಿನಿ ಬಿ 71

2. ಕೊಪ್ಪಳ-ಗಂಗಾವತಿ- ವಿನೋದ್ ಪಾಟೀಲ್ ಎಚ್ 132

3. ಬೆಂಗಳೂರು-ಕೀರ್ತನಾ ಎಚ್.ಎಸ್. 167

4. ಉತ್ತರಕನ್ನಡ-ದಾಂಡೇಲಿ-ಸಚಿನ್ ಹಿರೇಮಠ ಎಸ್ 213

5. ಉತ್ತರಕನ್ನಡ-ಅಂಕೋಲಾ-ಹೇಮಾ ನಾಯಕ್ 225

6. ಅಭಿಷೇಕ್ ಗೌಡ ಎಂ.ಜೆ. 278

7. ಉತ್ತರಕನ್ನಡ-ಕುಮಟಾ-ಕೃತಿ ಬಿ 297

8. ವೆಂಕಟ ಕೃಷ್ಣ 336

9. ಬೆಂಗಳೂರು-ಮಿಥುನ್ ಎಚ್.ಎನ್. 359

10. ವೆಂಕಟರಾಮನ್ ಕಾವಡಿಕೆರೆ 364

11. ಕೌಶಿಕ್ ಎಚ್.ಆರ್. 380

12. ವರುಣ್ ಬಿ.ಆರ್. 395

13. ಬೆಂಗಳೂರು-ಮಂಜುನಾಥ್ ಆರ್ 406

14. ತುಮಕೂರು-ಹರೀಶ್ ಬಿ.ಸಿ. 409

15. ಬೆಳಗಾವಿ-ಕಾಗವಾಡ-ಜಗದೀಶ್ ಅಡಹಳ್ಳಿ 440

16. ವಿವೇಕ್ ಬಿಸಿ 444

17. ಬಾಗಲಕೋಟಿ-ಜಮಖಂಡಿ-ಆನಂದ್ ಕಲಾದಗಿ 446

18. ಮೊಹಮ್ಮದ್ ನದಿಮುದ್ದಿನ್ 461

19. ಮೈಸೂರು-ಪಿರಿಯಾಪಟ್ಟಣ-ಮೇಘನಾ ಕೆ.ಟಿ. 465

20. ಸೈಯದ್ ಜಾಹಿದ್ ಅಲಿ 476

21. ವಿವೇಕ್ ರೆಡ್ಡಿ ಎನ್ 498

22. ಕಮ್ಮಾರುದ್ದಿನಿ 511

23. ಮೈಸೂರು-ವರುಣ್ ಕೆ. ಗೌಡ 528

24. ಬೆಳಗಾವಿ-ಹುಕ್ಕೇರಿ-ಪ್ರಫುಲ್ ದೇಸಾಯಿ 532

25. ಚಿತ್ರದುರ್ಗ-ರಾಘವೇಂದ್ರ ಎನ್ 536

26. ಕೋಲಾರ-ಮುಳಬಾಗಿಲು-ಭರತ್ ಕೆ.ಆರ್. 545

27. ಹಾಸನ-ಅರಸಿಕೆರೆ- ದರ್ಶನ್ ಕುಮಾರ್ ಎಚ್.ಜಿ 594

28. ಶಿವಮೊಗ್ಗ-ಸಂತೆಹುಲ್ಲೂರ-ಪೃಥ್ವಿ ಎಸ್ ಹುಲ್ಲತ್ತಿ 582

29. ಸುಹಾಸ್ ಆರ್ 583

30. ಅಭಿಲಾಶ್ ಶಶಿಕಾಂತ್ ಬಡ್ಡೂರ್ 591

31. ವಿಜಯಪುರ-ಇಂಡಿಸವಿತಾ ಗೊಟ್ಯಾಲ್ 626

32. ಮೈಸೂರು-ಪ್ರಜ್ವಲ್ 636

33. ಕೊಪ್ಪಳ-ಕುಷ್ಟಗಿ-ರಮೇಶ್ 646

34. ಚೈತ್ರಾ .ಎಂ. 713

35. ಚಂದನ್ ಜಿ.ಎಸ್. 777

36. ಮಂಜೇಶ್ ಕುಮಾರ್ .ಪಿ. 800

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *