ಕೋಲಾರ prajakiran.com : ಕೋಲಾರ ಜಿಲ್ಲೆಯ ಅರಭಿಕೊತ್ತನೂರು ಮತ್ತು ಚುಂಚದೇನಹಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಟೊಮ್ಯಾಟೋ ತುಂಬಿದ ಟೆಂಪೋ ಅಪಘಾತಕ್ಕೀಡಾಗಿದೆ.
ಸೋಮವಾರ ಮುಂಜಾನೆ 4 ಗಂಟೆ ಸಮಯದಲ್ಲಿ ಹಿಂದೂಪುರಂ ಕಡೆಯಿಂದ ಬೆಂಗಳೂರು- ಕೋಲಾರ ಮಾರ್ಗವಾಗಿ ಕೋಲಾರ ಎಪಿಎಂಸಿ ಗೆ ಟೊಮ್ಯಾಟೋ ತುಂಬಿಕೊಂಡು ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟೆಂಪೋದಲ್ಲಿದ್ದ ಟೊಮ್ಯಾಟೋ ರಸ್ತೆ ಪಕ್ಕದಲ್ಲಿ ಬಿದ್ದು ತುಂಬಾ ನಷ್ಟವಾಗಿದೆ.
ಜೊತೆಗೆ ಚಾಲಕ ಮತ್ತು ಅವರ ಜೊತೆಯಲ್ಲಿದವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕೆತ್ಸೆಗಾಗಿ ಎಸ್.ಎನ್.ಆರ್ ಆಸ್ಪತೆಗೆ ಸೇರಿಸಲಾಗಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ .