ಜಿಲ್ಲೆ

ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು

ಜೆಡಿಎಸ್ ಶಾಸಕ ಬಂಡೆಪ್ಪ ಖಾಶೆಂಪುರ್ ನೇತೃತ್ವದಲ್ಲಿ ವಿಶೇಷ ಪೂಜೆ

ಬೀದರ್ prajakiran.com  : ಜಿಲ್ಲೆಯಲ್ಲಿ ಮಳೆಯ ಅಭಾವ ಉಂಟಾದ ಪರಿಣಾಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಳ್ಳಿ ಗ್ರಾಮಸ್ಥರು ಮಳೆರಾಯನಿಗಾಗಿ ದೇವರ ಮೊರೆ ಹೋಗಿದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ  ಶಾಸಕ ಬಂಡೆಪ್ಪ ಖಾಶೆಂಪುರ್  ನೇತೃತ್ವದಲ್ಲಿ ಗ್ರಾಮದ ಮೈಸಮ್ಮಾ ದೇವಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಮನ್ನಳ್ಳಿ ಕೆರೆ ವೀಕ್ಷಿಸಿ, ಮೈಸಮ್ಮಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ಬಾರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದೆ.

ಜಿಲ್ಲೆಗೆ ಉತ್ತಮ ಮಳೆ ತರಲಿ. ಜಿಲ್ಲೆಯ ಕೆರೆಕಟ್ಟೆಗಳು ಭರ್ತಿಯಾಗಲಿ. ಮನ್ನಳ್ಳಿ ಗ್ರಾಮದ ಕೆರೆ ತುಂಬಿ ರೈತರಿಗೆ, ಗ್ರಾಮಸ್ಥರಿಗೆ ಅನುಕೂಲವಾಗಲಿ,  ಉತ್ತಮ ಮಳೆ ಬೆಳೆಗಳನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಸಂದರ್ಭದಲ್ಲಿ ರಾಜು ಮುಲ್ಗೆ, ದೀಪಕ್, ಶಂಕರ್ ಬಾಬು ಸೇನಾ, ರಮೇಶ್ಜಮಾದಾರ, ವೀರಶೆಟ್ಟಿ, ಚಂದ್ರಕಾಂತ ಮಡಿಕಿ, ಮಲ್ಲಿಕಾರ್ಜುನ, ಅನಿಲ್ ಪನ್ನಾಳಿ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಮುಖಂಡರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *