ಜಿಲ್ಲೆ

ಸವದತ್ತಿ ಪುರಸಭೆ ಬಿಜೆಪಿ ತೆಕ್ಕೆಗೆ : ಅಧ್ಯಕ್ಷರಾಗಿ ರಾಜಶೇಖರ ಕಾರದಗಿ, ಉಪಾಧ್ಯಕ್ಷರಾಗಿ ದೀಪಕ್ ಜಾನ್ವೇಕರ್ ಅವಿರೋಧ  ಆಯ್ಕೆ

ಸವದತ್ತಿ prajakiran.com : ಸ್ಥಳೀಯ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರಾಜಶೇಖರ ಕಾರದಗಿ ಉಪಾಧ್ಯಕ್ಷರಾಗಿ ದೀಪಕ್ ಜಾನ್ವೇಕರ್ ಅವಿರೋಧವಾಗಿ ಆಯ್ಕೆಯಾದರು. 

ಕಳೆದ ಎರಡು ವರ್ಷಗಳಿಂದ ಖಾಲಿ ಇದ್ದ ಸವದತ್ತಿ‌ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಇಂದು ಭರ್ತಿಯಾಗಿ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಅಧ್ಯಕ್ಷರಾಗಿ ರಾಜಶೇಖರ ಕಾರದಗಿ ಹಾಗೂ  ಉಪಾಧ್ಯಕ್ಷರಾಗಿ ದೀಪಕ ಜಾನ್ವೇಕರ್ ಅಧಿಕಾರ ಸ್ವೀಕರಿಸಿದರು.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ  ರಾಜಶೇಖರ ಕಾರದಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ದೀಪಕ ಜಾನ್ವೇಕರ್ ಪುರಸಭೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದರು.

ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ್ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸವದತ್ತಿ ಪುರಸಭೆಯನ್ನು  ಬಿಜೆಪಿಯ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಪುರಸಭೆಯ 27 ಸ್ಥಾನಗಳಲ್ಲಿ‌ ಬಿಜೆಪಿ 17. ಕಾಂಗ್ರೆಸ್ 9, ಪಕ್ಷೇತರ 1.ಸದಸ್ಯರು ಆಯ್ಕೆಯಾಗಿದ್ದರು.ಆದರೆ ಕಳೆದ ಎರಡು ವರ್ಷಗಳಿಂದ ಮೀಸಲಾತಿಯ ಸಮಸ್ಯೆಯಿಂದ  ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಮಂಗಳವಾರ ಈ ಎರಡು ಸ್ಥಾನಕ್ಕೆ ಬಿಜೆಪಿಯ ರಾಜಶೇಖರ ಕಾರದಗಿ, ಹಾಗೂ ದೀಪಕ ಜಾನ್ವೇಕರ್ ಆಯ್ಕೆಯಾಗಿದ್ದಾರೆ. 

ನಂತರ ಶಾಸಕ ಆನಂದ ಮಾಮನಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಶುಭ ಹಾರೈಸಿ ಮಾತನಾಡಿದ ಅವರು ಎಲ್ಲ ಸದಸ್ಯರನ್ನು ಹಾಗೂ ಆಡಳಿತಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸವದತ್ತಿ ನಗರದ ಸಂಪೂರ್ಣ ಅಭಿವೃದ್ಧಿಗಾಗಿ‌ ಶ್ರಮಿಸುತ್ತೇನೆ.

ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಹಳ್ಳಿಗಳನ್ನು ಸೇರಿಸಿ ಸವದತ್ತಿಯನ್ನು ನಗರ ಸಭೆಯನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ ಎಂದರು.

ಬಿಜೆಪಿ ಕಾರ್ಯಕರ್ತರು ಶುಭ ಹಾರೈಸಿ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸಿದರು. ಸ್ಥಳದಲ್ಲಿ ಪುರಸಭೆ ಸದಸ್ಯ ಶಿವಾನಂದ ಹೂಗಾರ ಮತ್ತು ಇನ್ನೂಳಿದ ಸದಸ್ಯರು ಇದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *