ರಾಜ್ಯ

ಶಿಗ್ಗಾಂವಿ ತಹಸೀಲ್ದಾರ್ ಗೂ ಕರೋನಾ ಕಂಟಕ….!

ಶಿಗ್ಗಾಂವಿ prajakiran.com : ಶಿಗ್ಗಾಂವಿ ತಹಸೀಲ್ದಾರ್ ಗೂ ಕರೋನಾ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

ಗುರುವಾರ ಸಂಜೆ ವರದಿ ಬಳಿಕ  ಆರು ಇಲಾಖೆ ಒಳಗೊಂಡಿರುವ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯವನ್ನು  ಸೀಲ್ ಡೌನ್ ಮಾಡುವಂತೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಅಲ್ಲದೆ ಶಿಗ್ಗಾಂವಿ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಗೆ ಸಾಮೂಹಿಕ ರಜೆ ನೀಡಿದ್ದಾರೆ. ಹೀಗಾಗಿ ಶುಕ್ರವಾರದಿಂದ ತಾಲೂಕು ಆಡಳಿತ ಸ್ತಬ್ದಗೊಂಡಿದೆ.

ತಹಸೀಲ್ದಾರ್ ಕಚೇರಿ ಸೀಲ್ ಡೌನ್ ಆದ ಪರಿಣಾಮ ಆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರು ಕಚೇರಿಗಳಾದ ಖಜಾನೆ ಇಲಾಖೆ (ಟ್ರಸರಿ), ಉಪನೋಂದಣಿ ಇಲಾಖೆ (ಸಬ್ ರಜಿಸ್ಟಾರ್ ), ಭೂ ಮಾಪನ (ಸರ್ವೇ) ಇಲಾಖೆ, ಕಂದಾಯ ಕಚೇರಿ ಸಂಪೂರ್ಣ ಸ್ಥಗಿತಗೊಂಡಿವೆ.

ಈ ಹಿಂದೆ ಧಾರವಾಡ ತಹಸೀಲ್ದಾರ್ ಕಚೇರಿಗೆ  ಕರೋನಾ ಸೋಂಕಿತ ಏಜೆಂಟ್ ನೊಬ್ಬ ಬಂದು ಹೋದ ಪರಿಣಾಮ ಧಾರವಾಡ ತಹಸೀಲ್ದಾರ್ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *