ಜಿಲ್ಲೆ

ಬೆಣ್ಣೆಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋದ ರೈತ ಕುಟುಂಬಗಳಿಗೆ 5 ಲಕ್ಷ ಚೆಕ್ ಹಸ್ತಾಂತರ

ಧಾರವಾಡ prajakiran.com : ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದಲ್ಲಿ ಬೆಣ್ಣೆಹಳ್ಳದ ಪ್ರವಾಹದಿಂದಾಗಿ ಕೊಚ್ಚಿಹೋದ ಶ್ರೀಕಾಂತರಡ್ಡಿ ಇನಾಮತಿ ಹಾಗೂ ದೇವೆಂದ್ರಪ್ಪ ಯಮನಪ್ಪ ಮಾದರ  ಅವರ ಕುಟುಂಬಗಳಿಗೆ ಬುಧವಾರ ತಲಾ 5 ಲಕ್ಷ ರೂ.ಪರಿಹಾರ ನೀಡಲಾಯಿತು. ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರು ಮೃತರ ವಾರಸುದಾರರಾದ ಅನಸೂಯಾ ಶ್ರೀಕಾಂತರಡ್ಡಿ ಇನಾಮತಿ ಹಾಗೂ ಸಾವಕ್ಕ ಮಾದರ ಇವರಿಗೆ ತಲಾ 5 ಲಕ್ಷ ರೂ ಗಳ ಪರಿಹಾರ ಧನದ ಚೆಕ್ ನೀಡಿ, ಬೆಣ್ಣೆಹಳ್ಳ ವೀಕ್ಷಿಸಿದರು. ಕಾಂಗ್ರೆಸ್ […]

ರಾಜ್ಯ

ಧಾರವಾಡದ ಬೆಣ್ಣಿಹಳ್ಳ ಪ್ತವಾಹ : ಎರಡು ರೈತ ಕುಟುಂಬಗಳಿಗೆ ಒಂದು ತಿಂಗಳು ಕಳೆದರೂ ಪರಿಹಾರ ಮರೀಚಿಕೆ  

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿ ನೀರಿನಲ್ಲಿ ತೇಲಿ ಹೋದ ಬಲ್ಲರವಾಡ ಗ್ರಾಮದ ಎರಡು ರೈತ ಕುಟುಂಬಗಳಿಗೆ ರಾಜ್ಯ ಸರಕಾರ ಹಾಗೂ ಧಾರವಾಡ ಜಿಲ್ಲಾಡಳಿತ ಒಂದು ತಿಂಗಳು ಕಳೇದರೂ ಈವರೆಗೆ ಪರಿಹಾರ ನೀಡಿಲ್ಲ. ಘಟನೆ ನಡೆದು  ಒಂದು ತಿಂಗಳು ಕಳೆದರೂ ಸಹ ಧಾರವಾಡ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿರುವುದು ದುರಂತವೇ ಸರಿ.  ಅಲ್ಲದೇ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಪರ ಒಳಿತು ಬಯಸದೇ ಬೇಜವಾಬ್ದಾರಿ ತೋರುತ್ತಿರುವದು ಸರಿಯಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ […]

ರಾಜ್ಯ

ಧಾರವಾಡ ಜಿಲ್ಲೆಯ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪಾಲು

ಧಾರವಾಡ prajakiran.com : ಪ್ರವಾಹದ ಹೊಡೆತಕ್ಕೆ ಸಿಲುಕಿ ನಲಗುತ್ತಿರುವ ಧಾರವಾಡ ಜಿಲ್ಲೆಯ ರೈತರು ಬೆಳೆದಿದ್ದ ಸಾವಿರಾರು ಎಕರೆ ಬೆಳೆ ತುಪರಿಹಳ್ಳದ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಆದರೆ, ಅವರ ನೆರವಿಗೆ ಧಾವಿಸಬೇಕಾದ ಆಳುವ ಸರ್ಕಾರಗಳು ಮಾತ್ರ ಗಾಢವಾದ ನಿದ್ರೆಗೆ ಜಾರಿವೆ. ಎದೆಯುದ್ದ ಬೆಳೆದು ನಿಂತ ಪೈರು ನೀರು ಪಾಲಾದ ರೈತನ ಕಣ್ಣಲ್ಲಿ ನೀರು ಬತ್ತಿ ಹೋಗಿದ್ದು, ಯಾರಿಗೂ ತನ್ನ ಸಂಕಟಅರ್ಥವಾಗುತ್ತಿಲ್ಲ ಎಂದು  ರಕ್ತ ಮಾತ್ರ ಕೊತ ಕೊತ ಕುದಿಯುತ್ತಿದೆ.   ಹೌದು ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ ಹಾಗೂ […]

ರಾಜ್ಯ

ತುಪ್ಪರಿಹಳ್ಳ ಪ್ರವಾಹದಿಂದ ನವಲಗುಂದನ ಶಿರೂರಗೆ ೫ ದಿನ ಸಂಪರ್ಕ ಕಡಿತ

ನವಲಗುಂದ prajakiran.com : ಕಳೆದ ಒಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದ ನವಲಗುಂದ ತಾಲೂಕಿನ ಶಿರೂರು ಸಂಪರ್ಕಿಸುವ ಹಾರೋಬೆಳವಡಿ ಹತ್ತಿರ ಇರುವ ತುಪ್ಪರಿಹಳ್ಳ ಸೇತುವೆಗೆ ಪ್ರವಾಹ ಬಂದಿರುವುದರಿಂದ ೫ ದಿನ ಗ್ರಾಮಕ್ಕೆ ಸಂಪರ್ಕವೇ ಇರಲಿಲ್ಲ. ಇದರಿಂದಾಗಿ ಶಿರೂರ, ಆಯಟ್ಟಿ, ಬ್ಯಾಲ್ಯಾಳ, ಹಣಸಿ, ಶಿರಕೋಳ, ಬಳ್ಳೂರ, ಅಳಗವಾಡಿ, ಹಾಳಕುಸುಗಲ್ಲ ಹಾಗೂ ಶಾನವಾಡ ಗ್ರಾಮಗಳ ಮುಂಗಾರು ಬೆಳೆ ಹಾಳಾಗಿವೆ.ಹೀಗಾಗಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಒತ್ತಾಯಿಸಿದ್ದಾರೆ. ೧ ವರ್ಷ ಕಳೆದರೂ ಸೇತೆವೆ […]

ರಾಜ್ಯ

ಬೆಣ್ಣೆಹಳ್ಳ, ತುಪ್ಪರಿಹಳ್ಳ ಪ್ರದೇಶಗಳಿಗೆ ಧಾರವಾಡ ಜಿಲ್ಲಾಧಿಕಾರಿ ಭೇಟಿ

ಧಾರವಾಡ : ಅತಿವೃಷ್ಟಿಯಿಂದ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಉಕ್ಕಿ ಹರಿದು ನೆರೆಹಾವಳಿ ಎದುರಿಸುವ ನವಲಗುಂದ ತಾಲೂಕಿನ ವಿವಿಧ ಹಳ್ಳಿಗಳು ಮತ್ತು ನಾಲೆಗಳ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಇಂದು ಭೇಟಿ ನೀಡಿ ಅತಿವೃಷ್ಟಿ  ನಿರ್ವಹಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಯಮನೂರು ಗ್ರಾಮದ ಬಳಿ ಬೆಣ್ಣೆಹಳ್ಳದಿಂದ ಉಂಟಾಗುವ ಪರಿಸ್ಥಿತಿ, ಅಮರಗೋಳ ಗ್ರಾಮದ ಬಳಿಯ ನರಗುಂದ ಸೇತುವೆ, ಗೊಬ್ಬರಗುಂಪಿ,ಅಳಗವಾಡಿ,ಹೆಬ್ಬಾಳ,ಜಾವೂರ, ಹನಸಿ, ಶಿರಕೋಳ ಗ್ರಾಮಗಳ ಸುತ್ತಮುತ್ತಲಿನ ಕೃಷಿ ಭೂಮಿ ಮತ್ತು ಹಳ್ಳ,ಕೊಳ್ಳಗಳನ್ನು ಖುದ್ದಾಗಿ ವೀಕ್ಷಿಸಿದರು. ಹನಸಿ – ಶಿರಕೋಳ ಮಧ್ಯೆ ತುಪ್ಪರಿಹಳ್ಳದ […]