ರಾಜ್ಯ

ಸರಿಯಾದ ಮಾಸ್ಕ್ ಧರಿಸದ ರೈತನಿಗೆ ಸಾವಿರ ರೂಪಾಯಿ ದಂಡ ….!

ಬೆಂಗಳೂರು prajakiran.com : ಸರಿಯಾದ ಮಾಸ್ಕ್ ಧರಿಸದ ರೈತನಿಗೆ ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕಾರಿನಲ್ಲಿ ಕನಕಪುರದ ಕಂಚನಹಳ್ಳಿಯಿಂದ ಸಂಬಂಧಿಕರ ಆರೋಗ್ಯ ವಿಚಾರಿಸಲು ಆಗಮಿಸಿದ ವೇಳೆ ಈ ಘಟನೆ ನಡೆದಿದೆ. ಮಗನ ಕ್ಲಾಸ್ ಆನ್ ಲೈನ್ ನಲ್ಲಿ ನಡೆಯುತ್ತಿದ್ದ ವೇಳೆ ಸ್ವಲ್ಪ ಮಾಸ್ಕ ಸರಿಸಿದ್ದರಿಂದ ಈ ಯಡವಟ್ಟು ಆಗಿದೆ. ಈ ಬಗ್ಗೆ ಬಿಬಿಎಂಪಿ ಮಾರ್ಷಲ್ ಗಳಿಗೆ ಮನವರಿಕೆ ಮಾಡಿಕೊಟ್ಟರೂ ಅವರು ಚಕಾರ ಎತ್ತುತ್ತಿಲ್ಲ. ಇದು ಸರಿಯಾದ ಬೆಳವಣಿಗೆ ಅಲ್ಲ. ಸಾವಿರ […]

ರಾಜ್ಯ

ದಕ್ಷಿಣ ಕನ್ನಡ, ವಿಜಯಪುರ, ಚಿತ್ರದುರ್ಗ ಜಿಲ್ಲಾಧಿಕಾರಿ ಸೇರಿ ಹಲವು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು prajakiran.com : ರಾಜ್ಯದ ಬಿಜೆಪಿ ಸರಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಬೆನ್ನಲ್ಲೇ ಹತ್ತು ಹಲವು ಐ ಎ ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಿರಿಯ ಐ ಎ ಎಸ್ ಅಧಿಕಾರಿಗಳ ರಾಜಕುಮಾರ ಖತ್ರಿ ಅವರನ್ನು ಕೃಷಿ ಇಲಾಖೆಯಿಂದ ಕಾರ್ಮಿಕ ಇಲಾಖೆಗೆ ವರ್ಗಾವಣೆ ಮಾಡಿದೆ. ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಮಹೇಶ್ವರ ರಾವ್ ಎ. ಅವರ ಸ್ಥಾನಕ್ಕೆ ನಿಯೋಜಿಸಿದೆ. ಎನ್. ನಾಗಾಂಬಿಕಾ ದೇವಿ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹಿಳಾ ಮತ್ತು ಮಕ್ಕಳಅಭಿವೃದ್ದಿ […]

ರಾಜ್ಯ

ಬೆಂಗಳೂರಿನಲ್ಲಿ ಸೋಂಕಿತರಿಗೆ ಬೆಡ್ ಗಳೇ ಸಿಗ್ತಿಲ್ಲ…. ಮುಂದುವರೆದ ರೋಗಿಗಳ ಪರದಾಟ…!

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ. ಬಹುತೇಕ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಹಾಗೂ ಕೋವಿಡ್ ಯೇತರ ರೋಗಿಗಳಿಗೆ ಬೆಡ್ ಗಳೇ ಸಿಗುತ್ತಿಲ್ಲ. ತಮ್ಮ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಮಕ್ಕಳು ಪರದಾಡುತ್ತಿದ್ದರೆ, ಮಕ್ಕಳನ್ನು, ಸಂಬಂಧಿಕರನ್ನು ಉಳಿಸಿಕೊಳ್ಳಲು ಪೋಷಕರು ಹಾಗೂ ಕುಟುಂಬಸ್ಥರು ಅಲೆದಾಡಿ ಅಲೆದಾಡಿ ಬೇಸತ್ತು ಹೋಗುತ್ತಿದ್ದಾರೆ. ಶನಿವಾರ ಬೆಳಗ್ಗೆಯಿಂದ ಅಮ್ಮನ ಉಳಿಸಿಕೊಳ್ಳಲು ಮಗನ ಪರದಾಟ ಒಂದೆಡೆಯಾದರೆ, ತಂದೆಯನ್ನು ಉಳಿಸಿಕೊಳ್ಳಲು ಇಬ್ಬರು ಪುತ್ರರ ಹೆಣಗಾಟ ಬೆಂಗಳೂರಿನಲ್ಲಿ ಕಂಡು ಬಂದಿದೆ. ಮೂರು ನಾಲ್ಕು ಆಸ್ಪತ್ರೆ ಅಲೆದಾಟ […]

ರಾಜ್ಯ

ಬೆಂಗಳೂರಿನ 47ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ 50ಕ್ಕೂ ಅಧಿಕ ಪಾಸಿಟಿವ್ : 32 ಪೊಲೀಸ್ ಠಾಣೆ ಸೀಲ್ ಡೌನ್…!

ಬೆಂಗಳೂರು prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕರೋನಾ ಕಾಡುತ್ತಿದೆ. ಅದರಲ್ಲೂ  ಕರೋನಾ ಸೇನಾನಿಗಳನ್ನು ಬಿಡುತ್ತಿಲ್ಲ. ಸುಮಾರು 32 ಪೊಲೀಸ್ ಠಾಣೆಗಳನ್ನು ಬೆಂಗಳೂರು ನಗರವೊಂದರಲ್ಲಿಯೇ ಸೀಲ್ ಡೌನ್ ಮಾಡಲಾಗಿದೆ. ಇದು ಬೆಂಗಳೂರು ನಗರ ಪೊಲೀಸರನ್ನು ಆತಂಕ ಹಾಗೂ ಸಂಕಷ್ಟಕ್ಕೆ ಸಿಲುಕಿಸಿದೆ. ಬೆಂಗಳೂರಿನ ವಾರ್ಡ್ ವಾರ್ಡ್ ಗಳಲ್ಲಿ ಮಹಾಮಾರಿ ಕರೋನಾ ಅಟ್ಟಹಾಸ ಮೆರೆಯುತ್ತಿದೆ. ಸುಮಾರು 47ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ 50ಕ್ಕೂ ಅಧಿಕ ಪಾಸಿಟಿವ್ ಬಂದಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಕ್ಷಿಣ ವಲಯದಲ್ಲಿ  2 […]

ರಾಜ್ಯ

ಬೆಂಗಳೂರಿನಲ್ಲಿ ಖಾಸಗಿ ಲ್ಯಾಬ್ ಗಳ ಯಡವಟ್ಟು : ನೆಗೆಟಿವ್ ಇದ್ದರೂ ಪಾಸಿಟಿವ್ ..!

ಬೆಂಗಳೂರು prajakiran.com : ಬೆಂಗಳೂರಿನಲ್ಲಿ ಖಾಸಗಿ ಲ್ಯಾಬ್ ಗಳ ಯಡವಟ್ಟು ಬಯಲಿಗೆ ಬಂದಿದ್ದು, ಮೂವರಿಗೆ  ನೆಗೆಟಿವ್ ಇದ್ದರೂ ಪಾಸಿಟಿವ್ ರಿಪೋರ್ಟ್ ಕೊಟ್ಟಿದನ್ನು ಸ್ವತಃ ಬಿಬಿಎಂಪಿ ಆಯುಕ್ತ ಹೆಚ್.ಟಿ. ಅನಿಲಕುಮಾರ್ ಅವರೇ ಬಹಿರಂಗಪಡಿಸಿದ್ದಾರೆ. ಖಾಸಗಿ ಲ್ಯಾಬ್ ಗಳ  ರಿಪೋರ್ಟ್ ಉಲ್ಟಾಪಲ್ಟಾ ಬರ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ತಮಗೆ ಬೇಕಾದ ಲ್ಯಾಬ್ ಗಳಿಗೆ ಕಳುಹಿಸಿದರೆ ಈ ರೀತಿ ಆಗ್ತಿದೆ. ಅದನ್ನು ನಾವು ಒಪ್ಪುತ್ತಿಲ್ಲ. ಹೀಗಾಗಿ ಸ್ಯಾಂಪಲ್ಸ್ ಮನಬಂದಂತೆ ಸಂಗ್ರಹಿಸುವಂತಿಲ್ಲ. ಅದರ ಬದಲಾಗಿ ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್ ರಿಪೋರ್ಟ್ ಮಾತ್ರ […]