ಜಿಲ್ಲೆ

ಧಾರವಾಡದ ೨೦೦ ವಿದ್ಯಾರ್ಥಿಗಳಿಗೆ ಅನೀಶ್ ಚಿಂಚೋರೆ ಮೆಮೋರಿಯಲ್ ಫೌಂಡೇಶನ್ ನಿಂದ ಪ್ರತಿಭಾ ಪುರಸ್ಕಾರ

ಧಾರವಾಡ prajakiran.com : ಪರರ ಕಷ್ಟಗಳನ್ನು ನಿವಾರಿಸುವ ಮೂಲಕ ಪ್ರತಿಯೊಬ್ಬರೂ ಆತ್ಮತೃಪ್ತಿ ಕಾಣಬೇಕು ಎಂದು ಮನಸೂರ ರೇವಣಸಿದ್ಧೇಶ್ವರ ಮಹಾಮಠದ ಶ್ರೀ ಬಸವರಾಜ ದೇವರು ಅಭಿಪ್ರಾಯಪಟ್ಟರು.

ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ರವಿವಾರ ಅನೀಶ ಚಿಂಚೋರೆ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಎಐಸಿಸಿ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

ಸಮಾಜದಲ್ಲಿ ಇಂದಿಗೂ ಬಡತನ, ಅಂಧಕಾರ, ಅಮಾಯಕತೆಗಳು ಸ್ಥಿರವಾಗಿವೆ. ಬಹತೇಕ ಜನರು ತಮ್ಮ ನಿತ್ಯದ ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ,

ಇದೇ ವೇಳೆ ಉಳ್ಳವರು ತಮ್ಮ ಮತ್ತು ತಮ್ಮವರ ಹಿತಕಾಯಲು ಯತ್ನಿಸುತ್ತಿದ್ದಾರೆ. ಬಡವರ ಸಂಕಷ್ಟಗಳಿಗೆ ಉಳ್ಳವರು ಸ್ಪಂದಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಸಂತೃಪ್ತ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಹಲವಾರು ವರ್ಷಗಳಿಂದ ಸದ್ದಿಲ್ಲದೇ ಜನರಿಗೆ ನೆರವು ನೀಡುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ದೀಪಕ ಚಿಂಚೋರೆ ಅವರು ಇತರರಿಗೆ ಆದರ್ಶವಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಮಾತನಾಡಿ, ಸ್ವಲ್ಪ ಕೆಲಸ ಮಾಡಿ ಹೆಚ್ಚು ಪ್ರಚಾರ ಪಡೆಯುವ ಜನರು ಸಮಾಜದಲ್ಲಿದ್ದಾರೆ. ಆದರೆ, ಚಿಂಚೋರೆ ಅವರು ಜನಸೇವೆಯಲ್ಲಿ ತೊಡಗಿದ್ದರೂ ಯಾವುದೇ ಪ್ರಚಾರ ಪಡೆಯದ ವ್ಯಕ್ತಿ. ಇಂತಹ ಜನಸೇವಕ ಜನಪ್ರತಿನಿಧಿ ಆದರೆ ಜನರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದರು.

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಮಾತನಾಡಿ, ತಂದೆ-ತಾಯಿಗೆ ಮಕ್ಕಳ ಭವಿಷ್ಯವೇ ಮುಖ್ಯ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮುಖಾಂತರ ಜೀವನವನ್ನು ಸುಧಾರಿಸಬೇಕು ಎಂಬ ಹಂಬಲ ಇರುತ್ತದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಬೆಳೆಸಬೇಕು.

ವಿಶೇಷವಾಗಿ ತಾಯಂದಿರು ಹೆಚ್ಚು ಗಮನಹರಿಸಬೇಕು. ಮಕ್ಕಳು ಕೂಡ ತಂದೆ-ತಾಯಿಯರ ಪರಿಶ್ರಮವನ್ನು ಅರಿತು ತಮ್ಮ ಬದುಕು ರೂಪಿಸಿಕೊಳ್ಳಬೇಕು.

ಈ ಹಿನ್ನೆಲೆಯಲ್ಲಿ ಪಾಲಕರು ಮತ್ತು ಮಕ್ಕಳು ಸದಾ ಜಾಗೃತಿಯಿಂದ ಮುನ್ನಡೆಯಬೇಕು ಎಂದ ಚಿಂಚೋರೆ, ಮುಂಬರುವ ದಿನಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸಾಧ್ಯವಾದ ಮಟ್ಟಿಗೆ ನೆರವು ನೀಡುವುದಾಗಿ ವಾಗ್ದಾನ ಮಾಡಿದರು.

ಕಾರ್ಯಕ್ರಮದಲ್ಲಿ ದೀಪಕ ಚಿಂಚೋರೆ ಮತ್ತು ಧರ್ಮಪತ್ನಿ ಸಂಗೀತಾ ಚಿಂಚೋರೆ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಅಭಿಮಾನಿಗಳು ಸತ್ಕರಿಸಿ, ಶುಭ ಕೋರಿದರು.

ಮತ್ತು ೨೦೦ ವಿದ್ಯಾರ್ಥಿಗಳಿಗೆ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ವೇ.ಮೂ.ಹಾಲಯ್ಯ ಹಿರೇಮಠ, ನವನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಕಿತ್ತೂರ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ, ಪಾಲಿಕೆ ಸದಸ್ಯರಾದ ಶಂಭುಗೌಡ ಸಾಲಮನಿ, ಡಾ.ಮಯೂರ ಮೋರೆ, ಕವಿತಾ ಕಬ್ಬೇರ, ಜಿಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಗುಜ್ಜಳ, ಮುಖಂಡರಾದ ಸ್ವತಿ ಮಾಳಗಿ, ಡಾ.ಶರಣಪ್ಪ ಕೊಟಗಿ, ಮುತ್ತುರಾಜ ಮಾಕಡವಾಲೆ, ಆನಂದ ಮುಶಣ್ಣವರ, ಹಜರತಅಲಿ ಗೊರವನಕೊಳ್ಳ, ವಸಂತ ಅರ್ಕಾಚಾರ, ರೋಹಣ ಹಿಪ್ಪರಗಿ, ಅಬ್ದುಲ ದೇಸಾಯಿ, ಪ್ರಭಾವತಿ ವಡ್ಡಿನ್, ಚಂದನ ಸವದಿ, ಮಹೇಶ ಹುಲ್ಲೆನ್ನವರ ಇನ್ನಿತರರು ವೇದಿಕೆಯಲ್ಲಿದ್ದರು.

ಹೇಮಂತ ಗುರ್ಲಹೊಸೂರ ನಿರೂಪಿಸಿ, ವಂದಿಸಿದರು. ಶಶಿಧರ ಹೊಸಮನಿ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *