ರಾಜ್ಯ

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸ್ಟಾಪ್ ನರ್ಸ್ ಗಳ ಪ್ರತಿಭಟನೆ ….!

ಹುಬ್ಬಳ್ಳಿ prajakiran.com : ಹುಬ್ಬಳ್ಳಿಯ ಕಿಮ್ಸ್  ಆಸ್ಪತ್ರೆ ಸ್ಟಾಪ್ ನರ್ಸ್ ಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ಪ್ರತಿಭಟನೆ ನಡೆಸಿದರು.

ಬೇಡಿಕೆಗೆ ಸ್ಪಂದಿಸುವುದು ಬಿಟ್ಟು ನರ್ಸಿಂಗ್ ಕೆಲಸದಿಂದ ವಜಾ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಈಗಾಗಲೇ ನಮ್ಮ 11 ಸ್ಟಾಪ್ ನರ್ಸ್ ಗಳಿಗೆ ಕರೋನಾ ಬಂದಿದೆ. ಹೀಗಾದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ನರ್ಸ್ಂಗ್ ಆಫೀಸರ್ ನಾಗರಾಜ್  ಪ್ರಶ್ನಿಸಿದ್ದಾರೆ.

ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ  ನಡೆಸಿದರೂ ಸಿಇಒ ಕ್ಯಾರೆ ಎನ್ನುತ್ತಿಲ್ಲ. ಪಿಪಿಇ ಕಿಟ್ ಮಾಸ್ಕ್ ನೀಡುತ್ತಿಲ್ಲ ಎಂಬ ಆರೋಪ ಮಾಡಿದರು.

ಸಿಇಒ ರಾಜೇಶ್ವರಿ ಜೈನಾಪುರ ಸರಿಯಾಗಿ ವರ್ತಿಸುತ್ತಿಲ್ಲ. ಕನಿಷ್ಟ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಚೌಕಾಶಿ ಮಾಡುತ್ತಿದ್ದಾರೆ ಎಂದು ದೂರಿದರು.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜೇಶ್ವರಿ ಜೈನಾಪುರಅವರು, ನರ್ಸ್ ಕೆಲಸ ಮಾಡಲ್ಲ. ಬ್ಲಡ್ ಟೆಸ್ಟ್ ಮಾಡಲ್ಲ ಅಂತಾರೆ, ನರ್ಸ್ ಅಂತ ಕೆಲಸಕ್ಕೆ ಹಾಕಬಾರದು, ಸುಪರ್ ವೈಸರ್ ಕೆಲಸಕ್ಕೆ ಹಾಕಿ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.

ಇಂತಹ ಬೇಡಿಕೆ ಇಟ್ಟುಕೊಂಡು ಬಂದರೆ ಹೇಗೆ, ಎಲ್ಲರಿಗೂ ಸುಪರ್ ವೈಸರ್ ಕೆಲಸ ಕೊಡಿ ಎಂದರೆ ಹೇಗೆ ಇದು ಸಮಂಜಸವಲ್ಲ ಸರಕಾರದ ಮಾರ್ಗದರ್ಶಿಗಳ ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

ಒಂದು ವಾರ ಕೆಲಸ ಮಾಡ್ತಾ ಇಲ್ಲ. ಒಂದು ವಾರ ಕೆಲಸ ಮಾಡಲ್ಲ ಎಂದು ಹೇಳಿದರೂ ಹೇಗೆ ಎಂದು ಪ್ರಶ್ನಿಸಿದರು.

ರೂಮ್ ವ್ಯವಸ್ಥೆ ಮಾಡಿದ್ದಿವಿ. ಧರ್ಮ ಶಾಲೆಯಿದೆ. ಅಲ್ಲಿ ಹಲವು ಡಾಕ್ಟರ್ ಗಳಿದ್ದಾರೆ.  ವ್ಯವಸ್ಥೆ ಇಲ್ಲ ಎಂದರೆ ಹೇಗೆ ಎಂದು ಸಮಜಾಯಿಸಿ ನೀಡಿದರು.

250 ಕೋವಿಡ್ ಬೆಡ್ ಹೆಚ್ಚುವರಿ ಹಾಕಲಾಗಿದೆ. ಆದರೆ ಸಿಬ್ಬಂದಿ ಹೆಚ್ಚಾಗಿಲ್ಲ ಎಂದು ಕಿಮ್ಸ್ ಆಡಳಿತಾಧಿಕಾರಿ ವಿರುದ್ದಶ್ರೂಶುಷಕರಪ್ರತಿಭಟನೆ ನಡೆಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *