ಸದ್ದಿಲ್ಲದೆ ಹಸಿಮಣೆ ಏರಿದ ನಟಿ ಪ್ರಣಿತಾ
ಬೆಂಗಳೂರು prajakiran.com : ಬಹುಭಾಷಾ ತಾರೆ ಪ್ರಣಿತಾ ಸುಭಾಷ್, ನಿತಿನ್ ರಾಜು ಜೊತೆ ಸಪ್ತಪದಿ ತುಳಿದಿದ್ದಾರೆ.
ದಂಪತಿಯ ಸ್ನೇಹಿತರೊಬ್ಬರು ಶೇರ್ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸದ್ದಿಲ್ಲದೇ ಪ್ರಣಿತಾ ಹಸೆಮಣೆ ಏರಿದ್ದಾರೆ. ಪ್ರಣಿತಾ ಹಾಗೂ ನಿತಿನ್ ರಾಜು ಅದ್ಧೂರಿ ಮದುವೆಗೆ ತಯಾರಿ ನಡೆಸಿದ್ದರು.
ಆದರೆ ಕೊರೋನಾದಿಂದ ಸಿಂಪಲ್ಲಾಗಿ ಕೋವಿಡ್ ರೂಲ್ಸ್ನಂತೆ ಪ್ರಣಿತಾ ನಿತಿನ್ ತಮ್ಮ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿತಿನ್ ಅಥವಾ ಪ್ರಣಿತಾ ಸಾಮಾಜಿಕ ಜಾಲತಾಣದಲ್ಲೆಲ್ಲೂ ಈ ಮಾಹಿತಿ ಬಿಟ್ಟುಕೊಟ್ಟಿಲ್ಲ.