ರಾಜ್ಯ

ಧಾರವಾಡ ಗ್ರಾಮೀಣ ಜನರ ಅಭ್ಯರ್ಥಿಯಾಗಿ ಬಸವರಾಜ ಕೊರವರ ಕಣಕ್ಕೆ

ಜನರ ಅಭ್ಯರ್ಥಿಯಾಗಿ ಬಸವರಾಜ ಕೊರವರ ಕಣಕ್ಕೆ

ಬಿಜೆಪಿಯಿಂದ ಗುರುತಿಸುವುದಾದರೆ ಗುರುತಿಸಲಿ

ಹಾಲಿ ಶಾಸಕರ ಬದಲಿಗೆ ಬೇರೆಯವರಿಗೆ ಟಿಕೇಟ್ ನೀಡಿದರೆ ಪುನರ್ ಪರಿಶೀಲನೆ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ತಾಲೂಕಿನ ಹೆಬ್ಬಳ್ಳಿಯ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ನೆರೆದಿದ್ದ ನೂರಾರು ಜನ ಹಿರಿಯರ ಸಮ್ಮುಖದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿ ಬಿಟ್ಟು ಜನರ ಶ್ರೇಯೋಭಿವೃದ್ದಿಗಾಗಿ ಹಗಲು ರಾತ್ರಿ ಎನ್ನದೆ ದುಡಿಯಲು ಸಿದ್ದರಿರುವ ಬಸವರಾಜ ಕೊರವರ ಅವರಿಗೆ ಮತ ನೀಡಬೇಕು ಎಂದು ಧಾರವಾಡ ಹೆಬ್ಬಳ್ಳಿ ಗ್ರಾಮದ ದೈವ ನಿರ್ಧಾರ ಕೈಗೊಂಡಿತು.

ಈ ವೇಳೆ ಮಾತನಾಡಿದ ಬಸವರಾಜ ಕೊರವರ, ಎಷ್ಟು ಕೋಟಿ ಅನುದಾನ ತಂದರೂ ಇವರ ಮನೆಯಿಂದ ಏನ್ ತಂದು ಹಾಕ್ಯಾರ. ಅದು ನಮ್ಮ ತೆರಿಗೆ ಹಣ. ಅದು ಸಾಲ ಮಾಡಿ ಅಭಿವೃದ್ಧಿ ಮಾಡುತ್ತಿರುವ ಯೋಜನೆಯ ಹೊರೆ ಆಗಿದೆ.

ನಮ್ಮ ಕ್ಷೇತ್ರಕ್ಕೆ ಹರಿದು ಬಂದ 1400 ಕೋಟಿ ಎಲ್ಲಿಗೆ ಹೋಯಿತು. ಅದರಲ್ಲಿ ಎಷ್ಟು ದುಡ್ಡು ಹೊಡದಿರಿ ಎಂದು ಪ್ರತಿಯೊಬ್ಬರು ಪ್ರಶ್ನಿಸುವಂತಾಗಬೇಕು.

ಬಡವರ ಮಕ್ಕಳನ್ನು ವಿಧಾನ ಸೌಧಕ್ಕೆ ಆಯ್ಕೆ ಮಾಡಿ ಕಳುಹಿಸಬೇಕು. ಜಾತಿ ವ್ಯವಸ್ಥೆ ಬಿಟ್ಟು ರೈತರ, ಕೃಷಿ, ಕೂಲಿ ಕಾರ್ಮಿಕ, ಮಹಿಳೆಯರ ಕಷ್ಟಗಳಿಗೆ ಸ್ಪಂದಿಸಿ ನೂರಾರು ಸಮಸ್ಯೆಗಳಿಗೆ ಧ್ವನಿ ಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಮಿಷನ್ ಕೊಡವುದು ನಿಲ್ಲಬೇಕು. ಕುಕ್ಕರ್, ಕ್ವಾಟರ್, ಸೀರೆ, ಹಣ ಹಂಚುವ ಕೆಲಸ ನಿಲ್ಲಬೇಕು.

ಆಯ್ಕೆ ಬಯಸಿ ಬರುವ ಜನರಿಗೆ ನಿನ್ನ ಯೋಜನೆ ಎನ್ ಆದವ ಹೇಳು ಅಂತ ಕೇಳಿರಿ. ವ್ಯಕ್ತಿ, ಪಕ್ಷ ಗೆಲ್ಲಬಾರದು. ಬಡವರ ಸಮಸ್ಯೆ, ವಿಚಾರಗಳು ಗೆಲ್ಲಬೇಕು ಎಂದರು.

ಸರ್ಕಾರ ಸಮಾಜದ ಅಭಿವೃದ್ಧಿ ಗೆ ಯೋಜನೆ ರೂಪಿಸ್ತವಾ ಹೊರತು ವೈಯಕ್ತಿಕ ಜೀವನದ ಬಗ್ಗೆ ಯಾರು ಚಿಂತನೆ ಮಾಡಲ್ಲ.

ಕೊರತೆ ನಮ್ಮಲ್ಲಿ ಇದೆ. ರಾಜಕಾರಣ ದಂಧೆ ಆಗಿದೆ. ರೊಕ್ಕ ಹಾಕಿ ರೊಕ್ಕ ತೆಗೆಯುವ ಬದಲಿಗೆ ಹೊಸ ವಿಚಾರವಿರುವ ಜನರಿಗೆ ವಿಧಾನ ಸಭಾ ಕ್ಷೇತ್ರಕ್ಕೆ ಆರಿಸಬೇಕು ಎಂದು ಮನವಿ ಮಾಡಿದರು

‌ಜನನೇ ನಿಲ್ಲಿಸಬೇಕು. ಚುನಾವಣೆ ಮಾಡಬೇಕು.ವಿಚಾರ ಬದಲಾಗಬೇಕು. ಗ್ರಾಪಂ ಚುನಾವಣಾ ಬಂದಾಗ ವ್ಯಕ್ತಿ ನೋಡಬೇಕು ತಾಪಂ, ಜಿಪಂ ವ್ಯಕ್ತಿ ನೋಡರಿ ಪಕ್ಷ ನೋಡಬ್ಯಾಡರಿ. ಇನ್ನೂ ತಪ್ಪು ಮಾಡುವುದು ಬೇಡ. ಸಮಾಲೋಚನೆ ನಡೆಸಿ ತರ್ಕಕ್ಕೆ ತಗೊಂಡ ಚಿಕಿತ್ಸೆ ನೀಡಲು ಮುಂದಾಗಿ ಆಳಾಗಿ ದುಡಿಯುವುದಕ್ಕೆ ಫಿಟ್ ಇದ್ದರೆ ಮತ ನೀಡಿ ಎಂದು ಬಸವರಾಜ ಕೊರವರ ಹೇಳಿದರು.

ನಾನು ಆಯ್ಕೆ ಆದರೆ ಜನರನ್ನು ನಮ್ಮ ಮನೆಗೆ ಹುಡುಕಿಕೊಂಡು ಬರಕ್ಕ ಬಿಡಲ್ಲ. ನಾನು ನಿಮ್ಮ ಗುಡಿ ಬಾಗಿಲಿಗೆ, ನಿಮ್ಮ ಮನೆ ಬಾಗಿಲಿಗೆ ಬಂದು ದುಡಿತಿನಿ ಎಂದು ಅಭಯ ನೀಡಿದರು.

ಸದಾ ಸಮಾಜದ ಕಣ್ಣು ತೆರೆಸುವ ಕೆಲಸ ಮಾಡ್ತಿನಿ. ನನಗೆ ರಾಜಕಾರಣ ಅಗತ್ಯನೂ ಅಲ್ಲ. ಅನಿವಾರ್ಯವು ಅಲ್ಲ. ಇಷ್ಟೆಲ್ಲಾ ಜನರ ಪ್ರೀತಿ ವಿಶ್ವಾಸ ಮುಖ್ಯ. ರಾಜಕಾರಣಕ್ಕೆ ಜನರು ಕರೆದುಕೊಂಡು ಬಂದಿದ್ದಾರೆ ಎಂದು ಯೋಗೀಶಗೌಡ ಕೊಲೆ ಪ್ರಕರಣವನ್ನು ಉದಹರಿಸಿದರು.

ನಾನು ಯಾವುದೇ ರೀತಿಯ ಹೋರಾಟವಾದರೂ ವೈಯಕ್ತಿಕವಾಗಿ ತೆಗೆದುಕೊಂಡು ಹೋಗಿಲ್ಲ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಹೋರಾಡಿನಿ. ಉಳಿದಂತೆ ಯಾರು ಅದನ್ನು ಯಾವ ರೀತಿ ಲಾಭ ಮಾಡಿಕೊಂಡಿದ್ದಾರೆ ಎಂಬುದು ವಿಠ್ಠಲನ ಸನ್ನಿಧಿಗೆ ಬಿಟ್ಟ ವಿಚಾರ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಹೆಬ್ಬಳ್ಳಿ ಗ್ರಾ ಪಂ ಸದಸ್ಯರಾದ ಬಸವರಾಜ ಹೆಬ್ಬಾಳ, ಬಸವರಾಜ ಹಡಪದ,
ಗದಿಗೆಪ್ಪ ಮೀಣಕಿ, ಮಂಜುನಾಥ ವಾಸಂಬಿ, ಬಸವರಾಜ ಬೆಳವಡಿ, ಮಾಜಿ ಸದಸ್ಯರಾದ ಹಡಪದ, ಹೂವಪ್ಪ ಸೂರ್ಯವಂಶಿ, ಹಟೇಲಸಾಬ ಗುಡಿಸಲಮನಿ,ಅಶೋಕ ಲಕ್ಕಮ್ಮನವರ, ವಕೀಲರಾದ ಶೇಖಪ್ಪ ಆಯಟ್ಟಿ, ರಮೇಶ ದೊಡ್ಡಮನಿ, ಜಂಬಪ್ಪ ತಳವಾರ, ಅಡಿವೆಪ್ಪ, ಪ್ರಕಾಶ ಲಕ್ಕಮ್ಮನವರ, ಸುರೇಶ ಕೊಟಬಾಗಿ ಸೇರಿದಂತೆ ಅನೇಕ ಹಿರಿಯರು, ಯುವ ಮಿತ್ರರು ಸಭೆಯಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿಯಾಗಿ ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಲೇಬೇಕು ಎಂದು ಹಕ್ಕೊತ್ತಾಯ ಮಾಡುವ ಮೂಲಕ ಜನಾಭಿಪ್ರಾಯ ರೂಪಿಸಿದರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *