ರಾಜ್ಯ

ಧಾರವಾಡದ ಶಿವಳ್ಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಅಖಾಡಕ್ಕೆ ಇಳಿದ ಬಡವರ ಮಗ ಬಸವರಾಜ ಕೊರವರ

*ಯೋಗೀಶಗೌಡ ಕೊಲೆ ಪ್ರಕರಣ ಸಿಬಿಐ ತನಿಖೆ ಹೋರಾಟದ ರೂವಾರಿ ಬಸವರಾಜ ಕೊರವರಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜನ ಬೆಂಬಲ*

*ಯೋಗೀಶಗೌಡ ತಾಯಿ ತುಂಗವ್ವ ನಿಂಗನಗೌಡ ಗೌಡರ ಸಾಥ್*

*ಶಿವಳ್ಳಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಅಖಾಡಕ್ಕೆ ಇಳಿದ ಬಡವರ ಮಗ ಬಸವರಾಜ ಕೊರವರ*

*ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೊರವರ ಹೆಸರು ಪ್ರಸ್ತಾಪ*

*ಮಾಜಿ ಸಚಿವಗೆ ಭರ್ಜರಿ ಟಾಂಗ್ ಕೊಡಲು ಸಜ್ಜಾದ ಯುವಪಡೆ*

ಬಸವರಾಜ ಕೊರವರ ನಮ್ ಮನೆ ಮಗ, ಅವನಿಗೆ ಆರ್ಶೀವಾದ ಮಾಡಿ ಎಂದು ಭಾವುಕರಾದ ಯೋಗೀಶಗೌಡ ತಾಯಿ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ವಿಧಾನ ಸಭಾ ಕ್ಷೇತ್ರ-71ರ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಶನಿವಾರ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮ ದೇವತೆ ದುರ್ಗಾದೇವಿ ಸನ್ನಿಧಿಯಲ್ಲಿ ಬಡವರ ಮಗ ಬಸವರಾಜ ಕೊರವರ ದಂಪತಿ ಹಾಗೂ ಯೋಗೀಶಗೌಡ ತಾಯಿ ತುಂಗವ್ವ ನಿಂಗನಗೌಡರ ಮತ್ತು ಅಪಾರ ಬೆಂಬಲಿಗರ ಜೊತೆಗೆ ಪೂಜೆ ಸಲ್ಲಿಸಿ ವಿದ್ಯುಕ್ತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಬಹಳ ಭಾವುಕರಾಗಿ ಯೋಗೀಶಗೌಡ ತಾಯಿ ತುಂಗವ್ವ ನಿಂಗನಗೌಡರ,
ಇವತ್ತು ಯೋಗೀಶಗೌಡ ನಮ್ ಜೊತೆಗೆ ಇಲ್ಲ. ಆದರೆ ಅವನ ರೂಪದಲ್ಲಿ ಬಸವರಾಜ ಕೊರವರ ನಮ್ ಜೊತೆಗೆ ನಮ್ ಪ್ರತಿಯೊಂದು ಕಷ್ಟದ ಸಮಯದಲ್ಲಿ ನಿಂತಿದ್ದಾರೆ.

ಅವನನ್ನು ಎಲ್ಲರೂ ಒಕ್ಕಟ್ಟಿನಿಂದ ದುಡಿದು ಪಕ್ಷಾತೀತವಾಗಿ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಿ ಎಂದು ಭಾವುಕರಾಗಿ ಅಭಯ ನೀಡಿದರು.

ತುಂಗವ್ವ ನಿಂಗನಗೌಡರ ಅವರ ಕಣ್ಣಲ್ಲಿ ಯೋಗೀಶಗೌಡ ನೆನೆದು ನೀರು ತುಂಬಿ ಬಂದಿತ್ತು.

ಈ ವೇಳೆ ಮಾತನಾಡಿದ ಬಸವರಾಜ ಕೊರವರ, ಧಾರವಾಡ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನ ಸಾಮಾನ್ಯರ ಸಮಸ್ಯೆ, ನೋವುಗಳಿಗೆ ಪರಿಹಾರ ಸಿಗಬೇಕಾದರೆ ಬಡವರ ಮಕ್ಕಳು ವಿಧಾನಸೌಧಕ್ಕೆ ಹೋಗಲೇಬೇಕು.

ಆ ಮೂಲಕ ಬಡವರ ಧ್ವನಿಯಾಗಿ ಬಲಾಡ್ಯರ ಸೊಕ್ಕು ಅಡಗಿಸುವ ಕೆಲಸ ಮಾಡಬೇಕು. ಹೀಗಾಗಿ ಬಿಜೆಪಿ ಟಿಕೇಟ್ ನೀಡಿದರೆ ಒಳಿತು. ಇಲ್ಲದಿದ್ದರೆ ಜನತೆಯ ಬಯಕೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಾಗುವುದು ಎಂದು ಘೋಷಿಸಿದರು.

ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ ಮಾತನಾಡಿ, ಒಂದು ಭ್ರಷ್ಟ ಹಾಗೂ ಇನ್ನೊಂದು ದುಷ್ಟ ಶಕ್ತಿಯ ಎದುರು ಬದುರು ಗಟ್ಟಿಯಾಗಿ ನಿಂತು ಹೋರಾಟ ನಡೆಸುವ ಛಾತಿ ಯಾರಿಗೂ ಇಲ್ಲ.

ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಕೊಲೆ ಆರೋಪ ಎದುರಿಸಿ ಕ್ಷೇತ್ರದಿಂದ ಹೊರಗಡೆಯಿದ್ದರೆ, ಇನ್ನೊಬ್ಬರು ಕ್ಷೇತ್ರದ ಜನತೆಯಿಂದಲೇ ದೂರ ಉಳಿದಿದ್ದಾರೆ.

ಹೀಗಾಗಿ ಪರ್ಯಾಯ ನಾಯಕನಾಗಿ ಬಡವರ ಮಕ್ಕಳ ಧ್ವನಿಯಾಗಿ ಜನರ ನಡುವೆ ನಿಂತು ಹೋರಾಟ ಮಾಡಿದರೂ ಅನ್ಯಾಯದ ವಿರುದ್ಧ ಸೆಣಸಾಟ ನಡೆಸಲು ಬಸವರಾಜ ಕೊರವರ ಸೂಕ್ತ ಅಭ್ಯರ್ಥಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೆ ಬಿಜೆಪಿ ಧಾರವಾಡ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಕೂಡ ಸಹಮತ ವ್ಯಕ್ತಪಡಿಸಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ.

ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲೇಬೇಕು ಎಂದು ಆಗ್ರಹಿಸಿದರು.

ಶಿವಳ್ಳಿ ಗ್ರಾಮದ ಅಧಿದೇವತೆ ದುರ್ಗಾದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ನಂತರ ಬಸವರಾಜ ಕೊರವರ ಬೀರದೇವರ, ಶಿಶುನಾಳ ಶರೀಫ, ಗುರು ಗೋವಿಂದ ಭಟ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಆನಂತರ ಹೆಬ್ಬಳ್ಳಿ ಗ್ರಾಮದ ಜಾಗೃತ ವೀರಭದ್ರೇಶ್ವರ, ಮೂಗ ಬಸವೇಶ್ವರ, ದುರ್ಗಾದೇವಿ, ಹನುಮಂತ ದೇವರು, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬ್ರಹ್ಮ ಚೈತನ್ಯ ಗೋಂದಾವಲಿ ಮಹಾರಾಜರು, ಬೀರೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಶಿವಳ್ಳಿ, ಹೆಬ್ಬಳ್ಳಿ,ಕೋಟೂರು, ಅಮ್ಮಿನಬಾವಿ, ಧಾರವಾಡ ಗ್ರಾಮೀಣ ಹಾಗೂ ನಗರ ಭಾಗದ ಯುವಕರು, ಗುರುಹಿರಿಯರು, ನೂರಾರು ಜನರು ಬಹಿರಂಗ ಬೆಂಬಲ ನೀಡಿ ಆರ್ಶೀವಾದ ಮಾಡಿದರು.

ಬಡವರ ಮಗ ಬಸವರಾಜ ಕೊರವರಗೆ ಜಯವಾಗಲಿ ಎಂಬ ಜಯಘೋಷ ಮುಗಿಲ ಮುಟ್ಟಿದ್ದವು.
ಬಡವರಿಂದ ಬಡವರಿಗಾಗಿ ಬಡವರಿಗೋಸ್ಕರ
ಬಡವರ ಮಗ ಬಸವರಾಜ ಕೊರವರ ಈ ಬಾರಿ ಅಖಾಡಕ್ಕೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಈ ಸಂದರ್ಭದಲ್ಲಿ ಬಸವರಾಜ ಹೆಬ್ಬಾಳ, ಈರಣ್ಣ ಹಡಪದ, ಬಸವರಾಜ ಹಡಪದ, ಕಲ್ಲಪ್ಪ ಹಡಪದ, ಹೂವಪ್ಪ ಸೂರ್ಯವಂಶಿ, ಗದಿಗೆಪ್ಪ ಮಿಣಕಿ, ಜಂಬಪ್ಪ ತಳವಾರ, ಮಂಜುನಾಥ ವಾಸಂಬಿ, ಸುರೇಶ ಕೊಟಬಾಗಿ, ರಮೇಶ ದೊಡಮನಿ, ಅಶೋಕ ಲಕ್ಕಮ್ಮನವರ, ಅಡಿವೆಪ್ಪ ಲಕ್ಕಮ್ಮನವರ,ಹಟೇಲಸಾಬ ಗುಡಿಸಲಮನಿ, ವಿನೋದ ಶೆಟ್ಟಿ, ರಾಘವೇಂದ್ರ ಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಸಾಥ್ ನೀಡಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *