ಅಪರಾಧ

ಧಾರವಾಡ ಟೋಲ್ ನಾಕಾ ಬಳಿ ಸರಣಿ ಅಪಘಾತ : ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರು

ಧಾರವಾಡ prajakiran.com : ಓಮಿನಿ ವಾಹನವೊಂದು ಏಕಾ ಏಕಿ ರಭಸವಾಗಿ ಬಂದು ಅಟೋ, ಎರಡು ಬೈಕ್, ಪುಟ್ ಪಾತ್ ಗೋಡೆಗೆ ಹಾಯ್ದು ಓಮಿನಿ ವಾಹನ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾದ ಘಟನೆ ಧಾರವಾಡದ ಟೋಲ್ ನಾಕಾ ಬಳಿ ನಡೆದಿದೆ.

ಏಕಾ ಏಕಿ ಅಡ್ಡಾ ತಿಡ್ಡಿಯಾಗಿ ಬಂದ ಓಮಿನಿ ವಾಹನ ಸಾರ್ವಜನಿಕರಲ್ಲಿ ಕೆಲಕಾಕ ಆತಂಕ ಸೃಷ್ಟಿಸಿತ್ತು.

ವಿಷಯ ತಿಳಿದ ಧಾರವಾಡ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಓಮಿನಿ ಹಿಂಟ್ ರನ್ ನಿಂದ ಆಟೋ, ಬೈಕ್, ಸಾಮಾನು ಜಖಂ ಆಗಿವೆ ಧಾರವಾಡ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಮಾತ್ರ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಥಳಿಯರು ಪ್ರಜಾಕಿರಣ. ‌ಕಾಮ್ ಗೆ ಮಾಹಿತಿ ನೀಡಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *