ಜಿಲ್ಲೆ

ಪದ್ಮಾವತಿ ಕಾಟನ್ ಮಿಲ್ ನಲ್ಲಿಅರ್ಥಪೂರ್ಣ ರೈತ ದಿನಾಚರಣೆ : 500ಕ್ಕೂ ಹೆಚ್ಚು ಅನ್ನದಾತರಿಗೆ ಸನ್ಮಾನಿಸಿ ಗೌರವಿಸಿದ ತನವಪ್ಪಅಷ್ಟಗಿ

ಧಾರವಾಡ prajakiran.com : ವಿಶ್ವ ರೈತ ದಿನಾಚರಣೆ ಹಿನ್ನಲೆಯಲ್ಲಿ ಧಾರವಾಡದ ಹೊರವಲಯದಲ್ಲಿರುವ ಪದ್ಮಾವತಿ ಕಾಟನ್ ಇಂಡ್ರಸ್ಟ್ರೀಸ್ ನಲ್ಲಿ 500ಕ್ಕೂ ಹೆಚ್ಚು ಅನ್ನದಾತರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಅರ್ಥಪೂರ್ಣ ರೈತ ದಿನಾಚರಣೆ ಆಚರಿಸಲಾಯಿತು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಅಧ್ಯಕ್ಷ ಈರೇಶ ಅಂಚಟಗೇರಿ  ಸಸಿಗೆ ನೀರು ಉಣಿಸುವ ಮೂಲಕ ರೈತದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ, ರೈತರ ಹಿತ ಕಾಪಾಡಲು ಬದ್ದವಾಗಿವೆ. ಅದಕ್ಕಾಗಿಯೇ ಹೊಸ ಹೊಸ ಯೋಜನೆ ಜಾರಿಗೆ ತಂದಿದೆ ಎಂದರು.

ಜನಜಾಗೃತಿ ಸಂಘದಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಬಸವರಾಜ ಹೆಚ್. ಕೊರವರ ಮಾತನಾಡಿ, ಅಗತ್ಯ ವಸ್ತುಗಳ ಖರೀದಿ ಕಾಯ್ದೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದು,ಆಗಿನ ಕಾಲದಲ್ಲಿಯೇ ಭಾರತದ ಹತ್ತಿ ಬೆಳೆಯನ್ನು ಇಂಗ್ಲೆಡ್ ಗೆ ರಫ್ತು ಮಾಡುತ್ತಿದ್ದರು.

ವಿಶ್ವದೆಲ್ಲಡೆಹತ್ತಿ ಭತ್ತ, ಗೋಧಿ ಎರಡನೇ ಸ್ಥಾನದಲ್ಲಿವೆ. ಧಾರವಾಡ ಜಿಲ್ಲೆಯ ಹತ್ತಿ ಪದ್ಮಾವತಿ ಕಾಟನ್ ಇಂಡ್ರಸ್ಟ್ರೀಸ್ ಮೂಲಕ ವಿವಿಧ ಬಟ್ಟೆ ಕಾರ್ಖಾನೆಗಳಿಗೆ ಹೋಗಿ ದೇಶ ವಿದೇಶಕ್ಕೆ ತಲುಪುವುದು ಸಂತಸದ ಸಂಗತಿಯಾಗಿದೆ ಎಂದರು.

ಪದ್ಮಾವತಿ ಕಾಟನ್ ಇಂಡ್ರಸ್ಟ್ರೀಸ್ ವರ್ಷವೀಡಿ ರೈತರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಮತ್ತು ರಾತ್ರಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸುವ ಮೂಲಕ ರೈತ ಸ್ನೇಹಿಯಾಗಿದೆ. ಆಮೂಲಕ ರೈತರ  ಮಾನ ಕಾಪಾಡುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  

ಧಾರವಾಡ, ಬೆಳಗಾವಿ ಹಾಗೂ ಉತ್ತರಕರ್ನಾಟಕ ಭಾಗದ ವಿವಿಧ ಜಿಲ್ಲೆಯ ನೂರಾರು ಹಳ್ಳಿಗಳ 500ಕ್ಕೂ ಹೆಚ್ಚು ರೈತರು ವರ್ಷವೀಡಿ ಕಷ್ಟಪಟ್ಟು ತಮ್ಮ ಹೊಲದಲ್ಲಿ ಬೆಳೆದ ಹತ್ತಿ ಬೆಳೆಯನ್ನು ಪದ್ಮಾವತಿ ಕಾಟನ್ ಇಂಡಸ್ಟ್ರೀಸ್ ಗೆ ತಂದು ಪೊರೈಸಿರುವುದಕ್ಕೆ ಮಿಲ್ ಋಣಿಯಾಗಿದೆ ಎಂದು ಪದ್ಮಾವತಿ ಕಾಟನ್ ಇಂಡ್ರಸ್ಟ್ರೀಟ್ ಮಾಲೀಕರು ಆಗಿರುವ ಬಿಜೆಪಿ ಮುಖಂಡ ತವನಪ್ಪಅಷ್ಟಗಿ ತಿಳಿಸಿದರು.

ರೈತರ ಸಹಾಯ ಸಹಕಾರದಿಂದ ಪದ್ಮಾವತಿ ಕಾಟನ್ ಇಂಡ್ರಸ್ಟ್ರೀಸ್ ಈ ಮಟ್ಟಕ್ಕೆ ಬೆಳೆದಿದೆ ಎಂದು ರೈತರೊಂದಿಗೆ ಸಂತಸ ಹಂಚಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುನೀಲ ಮೋರೆ, ಮೋಹನಅಷ್ಟಗಿ, ನಿತಿನ್ ಇಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *