ರಾಜ್ಯ

ಸಾರ್ವಜನಿಕ ದರ್ಶನ ನಿರ್ಬಂಧ ನಡುವೆಯೇ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಹರಿದು ಬಂದ ಭಕ್ತರ ದಂಡು

ವರದಿ : ಪ್ರಶಾಂತ ಹೂಗಾರ 
ಸವದತ್ತಿ prajakiran.com : ಶೀಗಿ ಹುಣ್ಣುಮೆ ನಿಮಿತ್ಯ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ದರ್ಶನಕ್ಕಾಗಿ ಬರುತ್ತಿದೆ.

ಸವದತ್ತಿ ಯಲ್ಲಮ್ಮನ ಜಾತ್ರೆ ಹುಣ್ಣಿಮೆಗೊಮ್ಮೆ ನಡೆಯುತ್ತದೆ. ನವರಾತ್ರಿ ನಿಮಿತ್ತ ಮಹರಾಷ್ಟದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಲ್ಲಮ್ಮನ ದೇವಸ್ಥಾನಕ್ಕೆ ಆಗಿಮಿಸುತ್ತಾರೆ.

ಇದರಿಂದ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಿರುವುದೆಂದು ನವೆಂಬರ್ ವರೆಗೆ ಜಿಲ್ಲಾಧಿಕಾರಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ಹೇರಿದ್ದಾರೆ.

ಆದರೆ ಹುಣ್ಣುಮೆ ನಿಮಿತ್ತ ಭಕ್ತ ಸಾಗರವು ಯಲ್ಲಮ್ಮನತ್ತ ಹರಿದು ಬಂದಿದೆ‌. ಬೆಳಗಾವಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಒಳಗೆ ಪ್ರವೇಶ ಇರದ ಕಾರಣ 3 ಕಡೆ ಬ್ಯಾರಿಕೆಡ್ ಹಾಕಿ ಯಲ್ಲಮ್ಮನ ದೇವಸ್ಥಾನ ಸಂಪರ್ಕಿಸುವ ಮಾರ್ಗ ರಸ್ತೆಯ ಸುತ್ತಲೂ ಭಕ್ತರನ್ನು ತಡೆಯಲಾಗಿದ್ದರೂ ಸಹ ಭಕ್ತರು ಬ್ಯಾರಿಕೆಡ್ ಮುಂದುಗಡೆ ಯಲ್ಲಮ್ಮನ ಪೋಟೋ ಇಟ್ಟು ತಮ್ಮ ತಮ್ಮ ಪದ್ಧತಿ ಅನುಸಾರ ಪೂಜೆ ಸಲ್ಲಿಸಿ ತಮ್ಮ ಭಕ್ತಿಯನ್ನು ಮೆರೆದಿದ್ದು, ಸಾಮಾಜಿಕ ಅಂತರ ಮತ್ತೆ ಮಾಸ್ಕ್ ಆದೇಶವನ್ನು ಗಾಳಿಗೆ ತೂರಿದ್ದಾರೆ.

ಲಾಕ್ ಡೌನ್ ನಿಂದ ಭಕ್ತರಿಲ್ಲದೆ ಕಂಗಾಲಾಗಿದ್ದ ಗುಡ್ಡದ ಒಳಗಡೆ ಇರುವ ವ್ಯಾಪಾರಿಗಳು ಬ್ಯಾರಿಕೆಡ್ ಸ್ಥಳದಿಂದ ರಸ್ತೆಯುದ್ದಕ್ಕೂ ಟೆಂಟ್ ಹಾಕಿ ವ್ಯಾಪಾರ ವಹಿವಾಟು ನಡೆಸಿದರು.

ಇದರಿಂದ ಸ್ವಲ್ಪ ಟ್ರಾಫಿಕ್ ಜಾಮ್ ಆಗಿದ್ದು ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ‌.

ಆಡಳಿತ ಮಂಡಳಿಯ ಬೇಜವಾಬ್ದಾರಿ :
ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಿದ್ದು, ಮಹಾರಾಷ್ಟ್ರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ.

ಇದರಿಂದ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂಬ ಉದ್ದೇಶದಿಂದ ಯಲ್ಲಮ್ಮ ದೇವಸ್ಥಾನಕ್ಕೆ ನಿರ್ಬಂಧ ಹೇರಿದ್ದರು ಸಹ ಮಹಾರಾಷ್ಟ್ರ ಪಾಸಿಂಗ್ ಕಾರ್ ಒಂದನ್ನು ಒಳಗೆ ಬಿಡಲಾಗಿದ್ದು ಭಕ್ತರಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಂದ ಭಕ್ತರು ಹೇಳಿದರು.

ಹಿಂದೆ ಭಕ್ತರಲ್ಲಿ ಹಣದ ಬೇಡಿಕೆ ಇಟ್ಟು ದೇವಸ್ಥಾನದ ಒಳಗೆ ದೇವಿಯ ದರ್ಶನ ಮಾಡಿಸುವುದಾಗಿ ಹೇಳಿದ ಖಾಸಗಿ ವ್ಯಕ್ತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸುದ್ದಿಯಾದರೂ ಸಹ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಇಂದು ಸಹ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಜೇಶ ಮಣ್ಣಣ್ಣವರ, ದರ್ಶನಕ್ಕಾಗಿ ಬಂದ ಭಕ್ತ
ಕರೋನ ಸಂಧರ್ಬದಲ್ಲಿ
ಯಲ್ಲಮ್ಮನ‌ಗುಡ್ಡದಲ್ಲಿ ದೇವರ ದರ್ಶನ‌ ನಿಷೇಧ ಎಂಬುದರ ಕುರಿತು ಜನರಿಗೆ ಮಾಹಿತಿ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *