ಮುಂಬೈ/ ಬೆಂಗಳೂರು prajakiran.com : ಮುಂಬೈ ಹಾಗೂ ಬೆಂಗಳೂರಿನ ಹಲವಡೆ ಎನ್ ಸಿಬಿ ಅಧಿಕಾರಿಗಳ ಭರ್ಜರಿ ಬೇಟೆಯಾಗಿದ್ದಾರೆ.
ಈ ಜಾಲ ಕರ್ನಾಟಕದಲ್ಲೂ ವಿಸ್ತರಣೆಯಾಗಿರುವ ಆಘಾತಕಾರಿ ಸಂಗತಿ ಹೊರಬಿದ್ದಿದ್ದು, ಅದರಲ್ಲೂ ಸ್ಯಾಂಡಲ್ ವುಡ್ ನಟ, ನಟಿಯರು, ಹಲವು ಸಂಗೀತಗಾರರು, ಕಾಲೇಜ್ ವಿದ್ಯಾರ್ಥಿಗಳು ನಶೆಯ ನಂಟು ಹೊಂದಿದ್ದರು.
ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಹೋಟೆಲ್ ಅಪಾರ್ಟ್ ಮೆಂಟ್ ವೊಂದರಲ್ಲಿ ದಾಳಿ ನಡೆಸಿದಾಗ 145ಎಂಡಿಎಂಎ ಪಿಲ್ಸ್ ಹಾಗೂ 2.20 ಲಕ್ಷ ನಗದು ದೊರೆತಿದೆ.
ಅದೇ ರೀತಿ ಬೆಂಗಳೂರಿನ ನಿಕೂ ಹೋಂ ಅಪಾರ್ಟಮೆಂಟ್ ನಲ್ಲಿ ದಾಳಿ ನಡೆಸಿದಾಗ 96 ಎಂಡಿಎಂಎ ಪಿಲ್ಸ್ ಹಾಗೂ 180 ಎಲ್ ಎಸ್ ಡಿ ಬ್ಲಾಟ್ಸ್ ಪತ್ತೆಯಾಗಿದೆ.
ಈ ಡ್ರಗ್ಸ್ ಜಾಲದ ಕಿಂಗ್ ಪಿನ್ ಸ್ಯಾಂಡಲ್ ವುಡ ಸಂಪರ್ಕ ಹೊಂದಿರುವ ಅನಿಕಾಳನ್ನು ಬಂಧಿಸಿದೆ. ಇಕೆಯ ಜೊತೆಗೆ ಸ್ಯಾಂಡಲ್ ವುಡ್ ನಟ-ನಟಿಯರ ನೇರ ಸಂಪರ್ಕವಿತ್ತು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಎನ್ ಸಿಬಿ ಅಧಿಕಾರಿಗಳ ತಂಡ ಬೆಂಗಳೂರಿನಅನಿಕಾಳ ದೊಡ್ಡಗುಬ್ಬಿಯ ಮನೆ ಮೇಲೆ ದಾಳಿ ನಡೆಸಿದಾಗ ಅಲ್ಲೂ ಕೂಡ 270 ಎಂಬಿಎಂಎ ಮಾತ್ರೆ ಪತ್ತೆಯಾಗಿದೆ ಎಂದು ಎನ್ ಸಿಬಿ ಅಧಿಕಾರಿಗಳು ವಿವರಿಸಿದ್ದಾರೆ.