ಆಧ್ಯಾತ್ಮ

ರಾಯಚೋಟಿ ವೀರಭದ್ರ ದೇವಾಲಯ ಗೋಪುರದಲ್ಲಿ ಲೀನವಾದ ಸಿಡಿಲು….!

ರಾಯಚೋಟಿ (ಕಡಪಾ) prajakiran.com : ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಯಚೋಟಿಯಲ್ಲಿರುವ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸಂಜೆ ೩ ನಿಮಿಷಗಳ ಕಾಲಾವಕಾಶದಲ್ಲಿ ಅತಿ ಭಯಂಕರವಾದ ಗುಡುಗು-ಸಿಡಿಲು ರಾಯಚೋಟಿ  ಸುತ್ತಲೂ ಆರ್ಭಟಿಸಿ ಶ್ರೀವೀರಭದ್ರಸ್ವಾಮಿಯ ಗೋಪುರ ಗೊಂಬೆಯ ಹತ್ತಿರ ಬಂದು ಲೀನವಾಗಿದೆ

ಶ್ರೀವೀರಭದ್ರಸ್ವಾಮಿಯ ಗೋಪುರಕ್ಕೆ ಸಿಡಿಲು ಅಪ್ಪಳಿಸಿದರೂ ಎಲ್ಲಿಯೂ ಏನೂ ಅನಾಹುತಗಳು ಹಾಗೂ ಕಟ್ಟಡ ಸಿಥಿಲಗೊಳ್ಳದೆ ಇರುವುದು ಹಾಗೂ ಗೋಪುರಕ್ಕೆ ಧಕ್ಕೆ ಆಗದೇ ಇರುವುದನ್ನು ಭಕ್ತ ಸಂಕುಲ ಇದು ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿಯ ಮಹಾಪವಾಡವೆಂದು ವಿಶ್ಲೇಷಿಸಿದ್ದಾರೆ.

ರಾಯಚೋಟಿಯ ಶ್ರೀಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಪಾರ ವೀರಶೈವ-ಲಿಂಗಾಯತ ಸಮುದಾಯದ ಆರಾಧ್ಯ ದೈವವಾಗಿದ್ದು, ಸೋಮವಾರ ಮಧ್ಯಾಹ್ನ ೩ ಗಂಟೆಗೆ ಪ್ರಾರಂಭವಾದ ಗುಡುಗು ಸಿಡಿಲುಗಳ ಮಳೆಯ ಆರ್ಭಟ ಹೆಚ್ಚಾಗಿ ಸಂಜೆ ೫ ಗಂಟೆಗೆ ರಭಸವಾಗಿಯೇ ಬರುತ್ತಿತ್ತು.

ಅತಿ ಆಶ್ಚರ್ಯವೆಂಬಂತೆ ಭಯಂಕರ ಸಿಡಿಲು ಗೋಪುರಕ್ಕೆ ಅಪ್ಪಳಿಸಿದರೂ ಆಗಬಹುದಾದ ಅನಾಹುತವನ್ನು ಸ್ವಾಮಿಯೇ ನಿವಾರಣೆ ಮಾಡಿದ್ದಾನೆ.

‘ಸದಾಕಾಲ ನಾನು ನಿಮ್ಮನ್ನು ರಕ್ಷಣೆ ಮಾಡುತ್ತಿರುತ್ತೇನೆ’ ಎಂಬ ಸಂದೇಶವನ್ನು ವೀರಭದ್ರಸ್ವಾಮಿ ನೀಡಿದಂತಿದೆ ಎಂದು ಭಕ್ತ ಸಂಕುಲ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಭಯಂಕರ ಸಿಡಿಲು ಬಂದರೂ ದೇವಸ್ಥಾನದ ಒಳಗಡೆ ಹಾಗೂ ಸುತ್ತಮುತ್ತಲು  ಯಾರೊಬ್ಬರಿಗೂ ಯಾವುದೇ ಅನಾಹುತವಾಗಿಲ್ಲ.

ಇದು ಕಲಿಯುಗದಲ್ಲಿ ಅಗ್ನಿ ರೂಪದಲ್ಲಿ ಶ್ರೀಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿಯ ದರ್ಶನವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ದೇವಾಲಯದ ಅರ್ಚಕರು ಹೇಳಿದ್ದಾರೆ

ಇದೊಂದು ಅವಿಸ್ಮರಣೀಯ ಸಂಗತಿಯಾಗಿದ್ದು, ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ದೈವಿಕ ಶಕ್ತಿಯು ವಿಪುಲವಾಗಿದೆ.

ಭಾರತೀಯರು ದೇವರಲ್ಲಿ ಇಟ್ಟ ಅಚಲವಾದ ನಂಬಿಕೆ ಮತ್ತು ವಿಶ್ವಾಸದ ಭಕ್ತಿಯ ಬದ್ಧತೆಯಿಂದ ಇದೆಲ್ಲವೂ ಸಾಧ್ಯವಾಗಿದೆ.

ಬರಸಿಡಿಲು ಎರಗಿದರೂ ಅದು ಶ್ರೀ ವೀರಭದ್ರಸ್ವಾಮಿಯ ದೇವಾಲಯದ ಗೋಪುರದಲ್ಲಿ ಲೀನವಾಗಿರುವುದು ಸ್ವಾಮಿಯ ಪವಾಡವಾಗಿ ಹೊರಹೊಮ್ಮಿದೆ ಎಂದು ದೇವಾಲಯದ ಟ್ರಸ್ಟ ಸದಸ್ಯ ಕಲಬುರ್ಗಿಯ ಸಿ.ಎಂ. ಶಿವಶರಣ ಹಾಗೂ ಹುಬ್ಬಳ್ಳಿಯ ಗಿರೀಶಕುಮಾರ ಬುಡರಕಟ್ಟಿಮಠ  ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *