ಆಧ್ಯಾತ್ಮ

ರಾವಣನಾಗುವುದು ಸುಲಭವಲ್ಲ…..!

ರಾವಣನಾಗುವುದು ಸುಲಭವಲ್ಲ. ಆತ್ಮಭಕ್ತಿಯಲ್ಲಿ ಆತ್ಮಲಿಂಗವನ್ನು ಧರೆಗೆ ತಂದವ ಒಬ್ಬನೇ ಅವನೇ ರಾವಣ.  ರಾವಣ ಗುರುತ್ವಾಕರ್ಷಣ ಶಕ್ತಿ ಸೌರವ್ಯೂಹದ ಬಗ್ಗೆ ತಿಳಿದು ಕೊಂಡವ.  ರಾವಣ ನ್ಯೂಟನ್ , ಆರ್ಯಭಟ್ಟ ಭಾಸ್ಕರಾಚಾರ್ಯ,  ಇವರು ಆಮೇಲೆ ಬಂದವರು ಅಲ್ಲವೇ.

ಜಗತ್ತು ಬಹಳ ಮುಂದುವರಿದಿದೆ ಎಂಬುದು ಈಗಿನ ವಿಜ್ಞಾನಿಗಳ ಲೆಕ್ಕ  ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ ತಯಾರು ಮಾಡಿದ ವಿಜ್ಞಾನಿ ಯಾರು ಎಂದರೆ ಅದು ರಾವಣ.

ಸೌರವ್ಯೂಹದ ಬಗ್ಗೆ ರಾವಣ ಜಾಣ ಏಕೆ ಎಂದರೆ ಆತ್ಮಲಿಂಗವನ್ನು ರಾವಣ ತರುವಾಗ ತನ್ನ ಬೀಜಗಣಿತ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಅಧ್ಯಯನದ ಪ್ರಕಾರ ಸಂಧ್ಯಾವಂದನೆ ಪೂಜೆ ಲಂಕೆಯಲ್ಲಿ ಆಗಬೇಕಿತ್ತು. ಇದು ರಾವಣನ ಲೆಕ್ಕ. ಆದರೆ ರಾವಣ ಲೆಕ್ಕದಲ್ಲಿ ಸರಿಯೇ ಇದ್ದ. ಇಲ್ಲಿ ದೇವೇಂದ್ರನ ಕುತಂತ್ರ ದಿಂದ ಭೂಮಿ ಸುತ್ತುವ ವೇಗವನ್ನು ಜೌಸ್ತಿ ಮಾಡಿ ರಾವಣನ ಲೆಕ್ಕ ತಪ್ಪಿಸಿ ಸಂಜೆ ಮಾಡಿದ. ಪಾಪ ತನ್ನ ತಾಯಿ ಆಸೆಯನ್ನು ನೇರವೇರಿಸಲು ಆಗಲಿಲ್ಲ. ರಾವಣನಿಗೆ ಇಲ್ಲಿ ವಿಲನ್ ಯಾರು ರಾವಣನಾ…?  ಅಥವಾ ದೇವೇಂದ್ರನಾ..?

ಹತ್ತು ತಲೆಯ ರಾವಣ, ಹತ್ತು ಕೈ ರಾವಣ ಎಂದು ವಿಕಾರವಾಗಿ ತೋರಿಸುತ್ತಾರೆ. ಆದರೆ ಸತ್ಯಾಂಶ ಏನೂ ಎಂಬುದು ಯಾರಿಗೂ ಗೋತ್ತಿಲ್ಲ. ಹೌದು ಹತ್ತು ತಲೆ ಎಂದರೆ ಹತ್ತು ಮೆದುಳಿನಷ್ಟು ಅಂದರೆ ಈಗಿನ ಮಹಾ ಕಂಪ್ಯೂಟರ್ ತರಹ ಕೆಲಸ ಮಾಡುತ್ತಿದ್ದ ಎಂಬ ಅರ್ಥ.

 ರಾವಣನ ಐದು ಇಂದ್ರಿಯಗಳು ಹತ್ತು ಪಟ್ಟು ಕೆಲಸ ಮಾಡುತ್ತಿದ್ದವು ಎಂಬ ಅರ್ಥ. ಹತ್ತು ಕೈಗಳಷ್ಟು ಪರಿಶ್ರಮ ಮಾಡುತ್ತಿದ್ದವು ಎಂಬ ಅರ್ಥ. ಇನ್ನೊಂದು ವಿಷಯ ರಾವಣ ಪರಮಾತ್ಮನ ಪೂಜೆ ಸಂಧ್ಯಾವಂದನೆ ಇತ್ಯಾದಿಗಳನ್ನು ಚಾಚು ತಪ್ಪದೇ ಮಾಡುತ್ತಿದ್ದ. ಆದ್ದರಿಂದ ರಾವಣನಾಗುವುದು ಸುಲಭವಲ್ಲ.

ನಮ್ಮ ಒಡಹುಟ್ಟಿದ ಅಕ್ಕ ತಂಗಿಗೆ ಯಾರಾದರೂ ಚುಡಾಯಿಸಿದರೆ ನಾವು ಸುಮ್ಮನೆ ಇರುತ್ತೇವಾ..? ಇಲ್ಲವಲ್ಲ. ರಾವಣ ತನ್ನ ಸಹೋದರಿಯನ್ನು ಎಷ್ಟು ಪ್ರೀತಿಸುತ್ತಿದ್ದ ಎಂಬುದು ಇಲ್ಲಿ ತೋರಿಸುತ್ತದೆ. ತಮ್ಮ ಕುಟುಂಬ ವರ್ಗದವರನ್ನು ಎಷ್ಟು ಪ್ರೀತಿಸುತ್ತಿದ್ದ.

ಸೀತಾ ದೇವಿಯನ್ನು ಲಂಕೆಗೆ ಕರೆದು ಕೊಂಡು ಹೋಗುವಾಗ ಸೀತೆಯ ಆರೋಗ್ಯದಲ್ಲಿ ಏರುಪೇರು ಆದಾಗ  ಸೀತೆಗೆ ಆಯುರ್ವೇದ ಔಷಧ ನೀಡಿದ. ಸೀತೆ ಆ ಔಷಧವನ್ನು ಭೂಮಿಗೆ ಚೆಲ್ಲಿದಳು.

 ರಾಮನಿಗೆ ದಾರಿ ಗೊತ್ತಾಗಲು. ಆದರೆ, ಈಗಲೂ ತಮಿಳುನಾಡಿನ ಹಳ್ಳಿಯ ಪ್ರಾಂತ್ಯದಲ್ಲಿ ಈ ಔಷಧಿ ಉಪಯೋಗಿಸುತ್ತಾರೆ. ರಾಮನಿಗೂ ರಾವಣನ ಜೊತೆ ಯುದ್ಧ ಮಾಡುವ ಮೊದಲು ರಾಮ ರಾವಣನಿಗೆ ಬಹಳಷ್ಟು ತಿಳಿ ಹೇಳಿದ.

ಕಾರಣ ಸಕಲ ವಿದ್ಯೆಬಲ್ಲ ಪಂಡಿತ ಬ್ರಹ್ಮ ಜ್ಞಾನ ಪಡೆದವ, ಬ್ರಾಹ್ಮಣ ಭಕ್ತಿಯಲ್ಲೂ ಸಹ ರಾವಣನಿಂದ ರಾವಣೇಶ್ವರನಾದ ಎಂಬುವುದರಿಂದ ರಾಮ ತಿಳಿ ಹೇಳಿದ.

 ಆದರೆ ರಾವಣ ರಾಮನಿಗೆ ಹೇಳುತ್ತಾನೆ. ರಾಮ ನೀನು ಯಾರು ಎಂಬುದು ನನಗೆ ಹಾಗೂ ಜಗತ್ತಿಗೆ ಗೋತ್ತಾಗಬೇಕು. ರಾಮ ನನ್ನ ಮೋಕ್ಷ ನಿನ್ನಲ್ಲಿ ಇದೆ. ಯುದ್ದ ಅನಿವಾರ್ಯ. ನಾನು ನಿನ್ನ ಜೊತೆ ಯುದ್ಧ

( ತ್ರಿಜನ್ಮ ಮೋಕ್ಷ ) ವಿಸ್ತಾರ ಸಕಲ ವಿದ್ಯೆಬಲ್ಲ  ಪಂಡಿತನಿಗೂ ರಾವಣನಿಗೆ ರಾಮನ್ಯಾರು ಎಂಬುವುದು ಗೋತ್ತಿರಲ್ಲಿಲವೇ. ಹಾಗಿದ್ದರೆ ರಾವಣನಾಗುವುದು ಸುಲಭವಲ್ಲ

ರಾವಣ ನಲ್ಲಿ ಅಂಹಂಕಾರ ಇತ್ತು ನಿಜ. ಆದರೆ ಅದರ ಜೊತೆಯಲ್ಲಿ ಪಶ್ಚಾತಾಪವೂ ಇತ್ತು. ರಾವಣನಲ್ಲಿ ವ್ಯಸನದೊಂದಿಗೆ ಸಂಯಮವು ಇತ್ತು. ರಾವಣನಲ್ಲಿ ಸೀತೆಯನ್ನು ಅನುಸರಿಸುವಂತ ಛಲ, ತಾಕತ್ತು,

ಸಮ್ಮತಿ ಯಿಲ್ಲದೆ ಪರ ಸ್ತ್ರೀ ಮುಟ್ಟಲಾರೆ ಎಂಬ ಸಂಕಲ್ಪ ಇತ್ತು. ಸೀತೆಯನ್ನು ಲಂಕೆಯಿಂದ ಜೀವಂತ ಕರೆ ತಂದಿದ್ದು ರಾಮ. ಆದರೆ ಸೀತೆ ಪವಿತ್ರವಾಗಿ ಉಳಿದಿದ್ದು ಅದು ರಾವಣನಿಂದ. ಶ್ರೀರಾಮ ನಿನ್ನ ಯುಗದಲ್ಲಿ ರಾವಣ ಬಹಳ ಒಳ್ಳೆಯನಿದ್ದ.

ಹತ್ತಕ್ಕೆ ಹತ್ತು ತಲೆಗಳು ಹೊರಗಿನವರಿಗೆ ಕಾಣಿಸುತ್ತಿತ್ತು. ಒಳಗೊಂದು ಹೊರಗೊಂದು ಇರಲ್ಲಿಲ್ಲ. ಆದರೆ ಈಗ ರಾಮನ ಮುಖವಾಡ ತೊಟ್ಟವರ ದರ್ಬಾರಿನಲ್ಲಿ ರಾವಣನನ್ನು ಹುಡುಕುವುದು ಕಷ್ಟ. 

ಪ್ರತಿ ಸಲ ವಿಜಯ ದಶಮಿಯಂದು ದಹಿಸಿ ಕೊಳುವ ರಾವಣ ನೆರೆದಿರುವ ಜನ ಸಂದಿಣಿಯಲ್ಲಿ ಪ್ರತಿ ಯೋರ್ವರಲ್ಲಿ ಕೇಳುತ್ತಾನೆ ನಿಮ್ಮಲ್ಲಿ ರಾಮನ್ಯಾರು..? ನಿಮ್ಮಲ್ಲಿ ರಾಮನ್ಯಾರು..?

ಮಾಹಿತಿ :: ಶಶಿಕಾಂತ ದೇವಾಡಿಗ, ಆಧ್ಯಾತ್ಮ ಚಿಂತಕರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *