ಆಧ್ಯಾತ್ಮ

ಪರಿಣಾಮಕಾರಿ ಲಾಕ್ ಡೌನ್ : ರಾಜ್ಯ ಸಂಪೂರ್ಣ ಸ್ತಬ್ಧ

ಲಸಿಕಾ ಕೇಂದ್ರಕ್ಕೆ ತೆರಳಲು ಸಮಯ ನಿಗದಿಯಾಗಿರುವ ಸಂದೇಶ ಕಡ್ಡಾಯ

ಬೆಂಗಳೂರು prajakiran.com : ಇಂದಿನಿಂದ 18 ರಿಂದ 44ವರ್ಷ ವಯೋಮಾನದವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ಲಸಿಕಾ ಕೇಂದ್ರಕ್ಕೆ ತೆರಳುವವರ ಬಳಿ ಲಸಿಕೆ ಪಡೆಯುವ ಸಮಯ ನಿಗದಿಯಾಗಿರುವ ಎಸ್ ಎಂ ಎಸ್ ಸಂದೇಶ ಇರುವುದು ಕಡ್ಡಾಯವಾಗಿದೆ.

ಈ ಎಸ್ ಎಂಎಸ್ ಪರಿಶೀಲಿಸಿದ ಬಳಿಕವಷ್ಟೇ ಪೊಲೀಸರು ಲಸಿಕಾ ಕೇಂದ್ರಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಇಂದಿನಿಂದ ರಾಜ್ಯಾದ್ಯಂತ ಕಟ್ಟು ನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದರಿಂದ ಲಸಿಕೆ ಪಡೆಯಲು ಹೋಗುವವರಿಗೆ ಲಾಕ್ ಡೌನ್ ನಿಯಮ ಅಡ್ಡಿಯಾಗಬಾರದೆಂಬ ಕಾರಣಕ್ಕೆ ಸಂದೇಶವನ್ನೇ ಪಾಸ್ ರೀತಿ ಬಳಸಲು ಅವಕಾಶ ನೀಡಲಾಗಿದೆ.

ಬೆಳ್ಳಂಬೆಳಿಗ್ಗೆ ಕಾರ್ಯಾರಂಭ ಮಾಡಿದ ಪೋಲಿಸರು

ಚಿಕ್ಕಮಗಳೂರು Prajakiran.com : ರಾಜ್ದಲ್ಲಿ ಹೆಚ್ಚುತ್ತಿರುವ ಸೋಂಕನ್ನು ತಡೆಗಟ್ಟಲು ಇಂದಿನಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಲಾಕ್ ಡೌನ್ ಕಾರಣದಿಂದ ಜನಜೀವನ ಬಹುತೇಕ ಸ್ಥಗಿತಗೊಂಡಿದೆ.

ನಗರ, ಪಟ್ಟಣಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರು ನಡೆದು ಬರುತ್ತಿರುವ ದೃಶ್ಯಗಳು ಕಂಡುಬಂತು. ವಾಹನಗಳಲ್ಲಿ ಬಂದವರಿಗೆ ಪೊಲೀಸರ ದಿದ ಕಾನೂನು ಕ್ರಮ ಕೈಗೊಂಡರು.

ಪೊಲೀಸರು ಧ್ವನಿವರ್ದಕಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ವಿನಾಕರಣ ರಸ್ತೆಗಿಳಿದ ವಾಹನಗಳನ್ನು ಸೀಜ್ ಮಾಡುತ್ತಿದ್ದು, ಸುಮ್ಮನೆ ತಿರುಗಾಡುವವರಗೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ ನಗರ ಪಟ್ಟಣಗಳಲ್ಲಿ ಜನ ಸಂಚಾರ ವಿರಳವಾಗಿದ್ದು, ರಸ್ತೆಗಳು ಬಿಕೊ ಎನ್ನುತ್ತಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *