ಆಧ್ಯಾತ್ಮ

ನಕ್ಷತ್ರಗಳಿಗೂ ಬೇರೆ ಬೇರೆ ದೇವತೆಗಳಿದ್ದಾರೆ

  • ಅಶ್ವಿನಿ ನಕ್ಷತ್ರ : ಅಶ್ವಿನಿಕುಮಾರರ ಪೂಜೆ ಫಲ : ದೀರ್ಘಾಯಸ್ಸು ಮತ್ತು ವ್ಯಾಧಿ ಪರಿಹಾರ
  • ಭರಣಿ ನಕ್ಷತ್ರ : ಕಪ್ಪು ಹೂವಿನಿಂದ ಯಮನಿಗೆ ಪೂಜೆ : ಕರ್ಪೂರಾದಿ ಗಂಧದಿಂದ ಲೇಪನಮ ಅಪಮೃತ್ಯೂ ಪರಿಹಾರ ಫಲ
  • ಕೃತ್ತಿಕಾ ನಕ್ಷತ್ರ : ಅಗ್ನಿಗೆ ಕೆಲವು ಪುಷ್ಪಗಳಿಂದ ಪೂಜೆ : ಯತೇಚ್ಛ ಫಲ ಪ್ರಾಪ್ತಿ
  • ರೋಹಿಣಿ ನಕ್ಷತ್ರ : ಅಧಿದೇವತಾ ಬ್ರಹ್ಮನಿಗೆ ಪೂಜೆ : ಅಭಿಲಾಷಾ ಪೂರ್ತಿಯೇ ಫಲ
  • ಮೃಗಶಿರ ನಕ್ಷತ್ರ : ಚಂದ್ರನ ಪೂಜೆ, ಆರೋಗ್ಯ ಪ್ರಾಪ್ತಿಯ ಫಲ
  • ಆರ್ಧ್ರಾ ನಕ್ಷತ್ರ : ಶಿವಪೂಜಾ, ಸುಂದರ ಕಮಲಗಳಿಂದ ಪೂಜೆ ಮಾಡಿದರೆ ಯಾವಾಗಲೂ ಕಲ್ಯಾಣ ಪ್ರಾಪ್ತಿ
  • ಪುನರ್ವಸು ನಕ್ಷತ್ರ : ಆದಿತಿ ಪೂಜೆ, ತಾಯಿಯಂತೆ ಆದಿತಿಯು ಕಾಪಾಡುತ್ತಾಳೆ. ಇದೇ ಫಲ
  • ಪುಷ್ಠ ನಕ್ಷತ್ರ : ಬ್ರಹಸ್ಪತಿ ಅವನ ಪೂಜೆಯಿಂದ ಸದ್ಬುದ್ದಿ, ಅಭಿವೃದ್ದಿಯೇ ಫಲ
  • ಆಶ್ಲೇಷಾ ನಕ್ಷತ್ರ : ನಾಗಗಳ ಪೂಜೆ ಫಲ : ನಿರ್ಭಯತ್ವ ಮತ್ತು ಸರ್ಪಗಳು ಕಡಿಯುವುದಿಲ್ಲ
  • ಮುಖ ನಕ್ಷತ್ರ : ಪಿತೃಗಣಗಳನ್ನು ಹವ್ಯಕವ್ಯಗಳಿಂದ ಪೂಜಿಸಿದರೆ ಧನ ಧಾನ್ಯ ಸೇವಕರು ಮಕ್ಕಳು ಹಾಗೆಯೇ ಪಶುಗಳು ಅಭಿವೃದ್ದಿ
  • ಪುಬ್ದ ನಕ್ಷತ್ರ : ಪೂಷಾದೇವತಾರಾಧನೆ : ವಿಜಯ ಪ್ರಾಪ್ತಿಯೇ ಫಲ
  • ಉತ್ತರ ಪಾಲ್ಗುಣಿ : ಭಗನೆಂಬ ಸೂರ್ಯನನ್ನು ಪುಷ್ಪಾದಿಗಳಿಂದ ಪೂಜಿಸಿದರೆ ವಿಜಯ ಪ್ರಾಪ್ತಿ. ಕನ್ಯೆಗೆ ಇಷ್ಟವರ ಪ್ರಾಪ್ತಿ.ಪುರುಷನಿಗೆ ಒಳ್ಳೆಯ ಪತ್ನಿ ಲಾಭ. ರೂಪ ಮತ್ತು ದ್ರವ್ಯಾದಿ ಪ್ರಾಪ್ತಿ
  • ಹಸ್ತ ನಕ್ಷತ್ರ : ಸೂರ್ಯನನ್ನು ಗಂಧ ಪುಷ್ಪಾಧಿಗಳಿಂದ ಪೂಜಿಸಿದರೆ ಎಲ್ಲ ರೀತಿಯ ಧನ ಪ್ರಾಪ್ತಿ
  • ಚಿತ್ತ ನಕ್ಷತ್ರಾ : ತೃಷ್ಟ್ರ ದೇವತೆ ಪೂಜೆ ಮಾಡಿದರೆ ಶತ್ರು ರಹಿತವಾದ ರಾಜ್ಯ ಪ್ರಾಪ್ತಿ
  • ಸ್ವಾತಿ ನಕ್ಷತ್ರ : ವಾಯು ದೇವರನ್ನು ಪೂಜಿಸಿದರೆ ಪರಮ ಶಕ್ತಿ ಪ್ರಾಪ್ತಿ
  • ವಿಶಾಖ ನಕ್ಷತ್ರ : ಕೆಂಪು ಪುಷ್ಪಗಳಿಂದ ಇಂದ್ರಾಗ್ನಿಗಳನ್ನು ಪೂಜಿಸಿದರೆ ಇಹಲೋಕದಲ್ಲಿ ಧನ ಧಾನ್ಯ ಪ್ರಾಪ್ತಿ ಮತ್ತು ಯಾವಾಗಲೂ ತೇಜಸ್ಸಿನಿಂದ ಕೂಡಿರುವುದು ಫಲ
  • ಅನುರಾಧ ನಕ್ಷತ್ರದಲ್ಲಿ ಕೆಂಪು ಹೂಗಳಿಂದ ಮಿತ್ರ ದೇವತೆಯನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮಿ ಪ್ರಾಪ್ತಿ ಮತ್ತು ಇಹಲೋಕದಲ್ಲಿ ಚೀರ ಜೀವನ
  • ಜೇಷ್ಠ ನಕ್ಷತ್ರದಲ್ಲಿ ಇಂದ್ರನ ಪೂಜೆಯಿಂದ ಪುಷ್ಪ ಪ್ರಾಪ್ತಿ ಮತ್ತು ಗುಣಧನ ಮತ್ತು ಕರ್ಮಗಳಲ್ಲಿ ಎಲ್ಲರಿಗಿಂತಲೂ ಶ್ರೇಷ್ಠನಾಗುವಿಕೆ
  • ಮೂಲ ನಕ್ಷತ್ರದಲ್ಲಿ ಎಲ್ಲ ದೇವತೆಗಳನ್ನು ಮತ್ತು ಪಿತೃಗಳನ್ನು ಭಕ್ತಿಯಿಂದ ಪೂಜಿಸಿದರೆ ಮಾನವನು ಸ್ವರ್ಗದಲ್ಲಿ ಅಚಲ ನಿವಾಸವನ್ನು ಹೊಂದುತ್ತಾನೆ ಮತ್ತು ಹಿಂದೆ ಹೇಳಿದ ಫಲವನ್ನೇಲ್ಲಾ ಪಡೆಯುತ್ತಾನೆ.
  • ಪೂರ್ವಾಷಢ ನಕ್ಷತ್ರದಲ್ಲಿ ಜಲದೇವತೆಯ ಪೂಜೆ ಮತ್ತು ಹೋಮ ಮಾಡಿದರೆ ಶರೀರ ಮತ್ತು ಮನಸ್ಸಿನ ಸಂತಾಪಗಳು ದೂರವಾಗುತ್ತದೆ.
  • ಉತ್ತರಾಷಾಢ ನಕ್ಷತ್ರದಲ್ಲಿ ವಿಶ್ವದೇವತೆಗಳು ಮತ್ತು ವಿಶ್ವೇಶ್ವರನ ಪೂಜೆಯನ್ನು ಮಾಡಿದರೆ ಎಲ್ಲ ಅಭೀಷ್ಟೆ ಪ್ರಾಪ್ತಿಯಾಗುವುದು.
  • ಶ್ರವಣ ನಕ್ಷತ್ರದಲ್ಲಿ ಬಿಳಿ, ಹಳದಿ, ನೀಲ, ವರ್ಣದ ಹೂಗಳಿಂದ ಭಕ್ತಿಯಿಂದ ವಿಷ್ಣು ಪೂಜೆಯನ್ನು ಮಾಡಿದರೆ ಲಕ್ಷ್ಮಿ ಪ್ರಾಪ್ತಿ ಮತ್ತು ವಿಜಯ ಪ್ರಾಪ್ತಿ
  • ಧನಿಷ್ಟ ನಕ್ಷತ್ರ ಗಂಧ ಪುಷ್ಪಾದಿಗಳಿಂದ ವಸ್ತುಗಳ ಪೂಜೆಯನ್ನು ಮಾಡಿದರೆ ಮನುಷ್ಯನು ಮಹಾಭಯವನ್ನು ಕಳೆದುಕೊಳ್ಳುತ್ತಾನೆ.
  • ಶತಭಿಷ ನಕ್ಷತ್ರ : ಇಂದ್ರನ ಪೂಜೆಯನ್ನು ಮಾಡಿದರೆ ವ್ಯಾಧಿ ಪರಿಹಾರ ಆ ಮಾನವನಿಗೆ ದೇಹ ಪುಷ್ಪಿ, ಆರೋಗ್ಯ ಮತ್ತು ಐಶ್ವರ್ಯ ಪ್ರಾಪ್ತಿಯಾಗುತ್ತದೆ.
  • ಪೂರ್ವಾಬಾಧ್ರ ನಕ್ಷತ್ರ : ಶುದ್ದ ಸ್ಪಟಿಕ ಮಣಿಯಂತೆ ಕಾಂತಿಯುಕ್ತನಾದ ಜನ್ಮರಹಿತನಾದ ಪ್ರಭು ಶ್ರೀ ಹರಿಯನ್ನು ಪೂಜಿಸಿದರೆ ವಿಜಯ ಪ್ರಾಪ್ತಿಯಾಗುತ್ತದೆ.
  • ಉತ್ತರಾಭಾದ್ರ ನಕ್ಷತ್ರ : ಅರ್ಹಿಬುಧ್ನ್ಯ (ಈಶ್ವರನ) ನಕ್ಷತ್ರದಲ್ಲಿ ಶಿವನ ಪೂಜೆಯಿಂದ ಪರಮಶಾಂತಿ ಪ್ರಾಪ್ತಿಯಾಗುತ್ತದೆ.
  • ರೇವತಿ ನಕ್ಷತ್ರ ಬಿಳಿಯ ಹೂವಿನಿಂದ ಪೂಷಾ ದೇವತೆಯನ್ನು ಪೂಜಿಸಿದರೆ ಮಂಗಲ ಪ್ರಾಪ್ತಿ ಅಚವಾದ ಧೈರ್ಯ ಮತ್ತು ವಿಜಯ ಪ್ರಾಪ್ತಿಯಾಗುತ್ತದೆ.
  • ತನ್ನ ಸಾಮರ್ಥ್ಯಕ್ಕನುಸಿರಿಸಿ ಈ ಪೂಜೆಯನ್ನಯ ಮಾಡಿದರೆ ಇಷ್ಟ ಫಲಗಳೆಲ್ಲವೂ ಸಿಗುತ್ತವೆ. ಯಾವುದಾದರೊಂದು ಕಾರ್ಯಕ್ಕೆ ಮೊದಲು ನಕ್ಷತ್ರ ದೇವತೆಯ ಪೂಜೆ ಮಾಡುವುದು ಒಳ್ಳೆಯದು ನಮ್ಮ ಕಾರ್ಯವು ಸಫಲವಾಗುತ್ತದೆ.

ಮಾಹಿತಿ : ಶಶಿಕಾಂತ ದೇವಾಡಿಗ, ಆಧ್ಯಾತ್ಮಿಕ ಚಿಂತಕರು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *