ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಯಿಂದ ಬಸವರಾಜ ಕೊರವರ, 358 ನೀರು ಸರಬರಾಜು ನೌಕರರಿಗೆ ಶಾಕ್….!

ಕಚೇರಿಯ ವಿದ್ಯುತ್ ಸಂಪರ್ಕ ಕಟ್, ಶೌಚಾಲಯ ಬಂದ್

ಹೋರಾಟ ಹತ್ತಿಕ್ಕಲು ಅಧಿಕಾರ ದುರುಪಯೋಗ : ನಾಗರಾಜ ಕಿರಣಗಿ ಕಿಡಿ

ಧಾರವಾಡ ಪ್ರಜಾಕಿರಣ. ಕಾಮ್ : ಕಳೆದ ಹತ್ತು ದಿನಗಳಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನಡೆಸುತ್ತಿರುವ ಹೋರಾಟ ಹತ್ತಿಕ್ಕಲು ಪಾಲಿಕೆ ಆಯುಕ್ತರು ಹಾಗೂ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮೇಯರ್ ಈರೇಶ ಅಂಚಟಗೇರಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಜನಜಾಗೃತಿ ಸಂಘದಲ್ಲಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ
ನಾಗರಾಜ ಕಿರಣಗಿ ಆರೋಪಿಸಿದ್ದಾರೆ‌.

ಅವರು ಬುಧವಾರ ಮಹಾನಗರ ಪಾಲಿಕೆ ಆವರಣದಲ್ಲಿ ಹೋರಾಟ ಉದ್ದೇಶಿಸಿ ಮಾತನಾಡಿದರು.
ಪಾಲಿಕೆ ಆಯುಕ್ತರ ನಿರ್ದೇಶನದ ಮೇರೆಗೆ ಹೋರಾಟದ ಧ್ವನಿ ವರ್ಧಕದ ಸಂಪರ್ಕ ಕಟ್ ಮಾಡಲಾಗಿದೆ.

ಇವತ್ತು ಕಚೇರಿಯ ಶೌಚಾಲಯವನ್ನು ಮಹಿಳಾ ನೌಕರರು ಬಳಸಿಕೊಳ್ಳದಂತೆ ಅದಕ್ಕೆ ಬೀಗ ಜಡಿಯಲಾಗಿದೆ.

ಈ ಬಗ್ಗೆ ವಲಯ ಆಯುಕ್ತ ಆರ್. ಎಂ‌. ಕುಲಕರ್ಣಿ ಯವರನ್ನು ವಿಚಾರಿಸಿದಾಗ ಆಯುಕ್ತರ ‌ನಿರ್ದೇಶನದ ಮೇರೆಗೆ ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.

ಇದು ಅವರ ಹಿಟ್ಲರ್ ಆಡಳಿತ ಧೋರಣೆ ಹಾಗೂ ಅನಾಗರಿಕ ವರ್ತನೆ ಮತ್ತು ಸಂವಿಧಾನದ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ನಾಗರಾಜ ಕಿರಣಗಿ ಕಿಡಿ ಕಾರಿದರು.

ಇದೇ ವೇಳೆ ಹತ್ತನೇ ದಿನದ
ಆಮರಣ ಉಪವಾಸ ನಡೆಸುತ್ತಿರುವ ಬಸವರಾಜ ಕೊರವರ ಹೋರಾಟ ಬೆಂಬಲಿಸಿ ಮಾತನಾಡಿದ
ಧಾರವಾಡ ಗ್ರಾಮೀಣ ಶಾಸಕರ ಆಪ್ತ ಹಾಗೂ ಕೋಟೂರು ಗ್ರಾಪಂ ಮಾಜಿ ಅಧ್ಯಕ್ಷ ಶಂಕ್ರಯ್ಯ ಮಠಪತಿ, 20 ವರ್ಷಗಳ ಕಾಲ
358 ನೀರು ಸರಬರಾಜು ನೌಕರರ ನೀರು ಕುಡಿದವರಿಗೆ
ಅಧಿಕಾರ ಮದ ಏರಿ ಸೋಕ್ಕು ಬಂದಿದೆ.

ಆ ಸೋಕ್ಕನ್ನು ಮುರಿಯಲಿಕ್ಕೆ ಬರುವ ದಿನಗಳಲ್ಲಿ ಬಡವರ ನೋವಿಗೆ ಧ್ವನಿಯಾಗಿರುವ ಜನನಾಯಕ ಬಸವರಾಜ ಕೊರವರ ಅವರಿಗೆ ವಿಧಾನ ಸೌಧಕ್ಕೆ ಕಳುಹಿಸುವ ದಿನಗಳು ದೂರವಿಲ್ಲ.

ನಮ್ಮ ಗ್ರಾಮೀಣ ಶಾಸಕರ ಜನುಮಕ್ಕೆ ನಾಚಿಕೆ ಬರಬೇಕು. ನಿಮ್ಮ ಮನೆಗೆ ಕೈ ಮುಗಿದು ಬಂದಾಗ ಅವರಿಗೆ ತಕ್ಕ ಪಾಠ ಕಲಿಸಬೇಕು. ಬಡವರ ಕಷ್ಟ ಸುಖ ಕೇಳಲು ನಿಮಗೆ ಏನು ಬ್ಯಾನಿ ಎಂದು ಕಿಡಿ ಕಾರಿದರು.

ಒಂದುಜೀವ ಹಾಳು ಮಾಡುವ ಅಂತಃಕರಣ ಇಲ್ಲದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಲು ಹೋರಾಟದ ವಿಧಾನ ಬದಲಿಸಬೇಕು.

ಲಜ್ಜಗೇಡಿಗಳ ಜೊತೆಗೆ ಹೋರಾಡಬೇಕಾದ ಪರಿಸ್ಥಿತಿ ಇರುವುದರಿಂದ ಬಸಣ್ಣ ಕೊರವರ ಆಮರಣ ಉಪವಾಸ ಕೈ ಬಿಟ್ಟು ಸರದಿ ಉಪವಾಸ ಮಾಡಬೇಕು ಎಂದು ಮನವಿ ಮಾಡಿದರು.

ಅಲ್ಲದೆ ಧಾರವಾಡ ಗ್ರಾಮೀಣ ಶಾಸಕರಿಗೆ ನೀವು ರೆಸ್ಟ್ ಮಾಡಿರಿ. ಮನೆಯಲ್ಲಿ ಇರಿ. ನಮ್ಮ ನೋವು ಕೇಳುವರಿಗೆ ಆರಿಸಿ ವಿಧಾನ ಸೌಧಕ್ಕೆ ಕಳುಹಿಸುವ ಕೆಲಸ ಮಾಡ್ತಿವಿ ಎಂದು ಎಚ್ಚರಿಸಿದರು.

ಬಿಜೆಪಿಯ ಮುಖಂಡ ಸುರೇಶ ಕೋರಿ ಮಾತನಾಡಿ, ಬಸವರಾಜ ಕೊರವರ ಅವರು ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕುರಿತು ವಿವಿಧ ಮಾಧ್ಯಮ ಹಾಗೂ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅವರ ಹೆಸರು ಮುಂಚೂಣಿಯಲ್ಲಿರುವ ಕಾರಣ ಅವರಿಗೆ ಹಳ್ಳಿಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟು ಹೋರಾಟ ಮುಂದುವರೆಸಲು ನಿರ್ಧರಿಸಬೇಕು ಎಂದು ಮನವಿ ಮಾಡಿದರು.

ಆಲ್ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಿನೋದ ಶೆಟ್ಟಿ ಮಾತನಾಡಿ, ಬಸವರಾಜ ಕೊರವರ ಹಾಗೂ ನಾಗರಾಜ ಕಿರಣಗಿ
ಒಂದು ವ್ಯಕ್ತಿ ಅಲ್ಲ. ಅದೊಂದು ಶಕ್ತಿ‌. ಗೆದ್ದೇ ಗೆಲ್ಲುವುದು ಒಂದು ದಿನ ಒಳ್ಳೆತನ ಎಂದು ಹೇಳಿದರು.

ಈ ಸಂದರ್ಭದಲ್ಲಿ  ನೂರಾರು
ಪ್ರತಿಭಟನಾಕಾರರು ಭಜನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *