ಅಪರಾಧ

ಧಾರವಾಡದ ಮಾಳಮಡ್ಡಿಯಲ್ಲಿ ಸರಣಿ ವಾಹನ ಕಳ್ಳತನ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ

ವಾಹನ ಕಳ್ಳತನ ಆರೋಪಿ ಬಂಧನ; ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

ಧಾರವಾಡ ಪ್ರಜಾಕಿರಣ.ಕಾಮ್ ಫೆ.7: ಧಾರವಾಡದ ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿನ ಮಾಳಮಡ್ಡಿ 4 ನೇ ಕ್ರಾಸ್‍ದಲ್ಲಿ ಅಶೋಕ ಯಡಹಳ್ಳಿಯವರ ಕಪ್ಪು ಬಣ್ಣದ ಹೀರೋ ಸ್ಪ್ಲೆಂಡರ್ ಪ್ರೋ ಮೋಟರ್ ಸೈಕಲ್ ನಂ. ಕೆಎ-33/ಎಲ್-4700 ನೇದ್ದನ್ನು ದಿ: 24-04-2021 ರಂದು ರಾತ್ರಿ 21 ಗಂಟೆಯ ಸುಮಾರಿಗೆ ಹ್ಯಾಂಡಲ್ ಲಾಕ್ ಮಾಡಿ ಮನೆಯ ಕಂಪೌಂಡದಲ್ಲಿ ನಿಲ್ಲಿಸಿದ್ದನ್ನು ದಿ: 25-04-2021 ರಂದು ಮುಂಜಾನೆ 9-30 ಗಂಟೆಯ ಒಳಗೆ ಆರೋಪಿಯಾದ ಕೃಷ್ಣಾ ಜ್ಞಾನದೇವ ಮಿರಜಕರ ರಾತ್ರಿ ವೇಳೆಯಲ್ಲಿ  ಹ್ಯಾಂಡಲ್ ಲಾಕನ್ನು ನಕಲಿ ಕೀಲಿಯಿಂದ ತೆಗೆದು, ಕಳ್ಳತನ ಮಾಡಿಕೊಂಡು ಹೋಗಿ ಅದರ ನಂಬರ ಪ್ಲೇಟನ್ನು ಕಿತ್ತು ತೆಗೆದು ಪುರಾವೆ ನಾಶ ಪಡಿಸಿದ ಅಪರಾಧ ಮಾಡಿದ್ದ.

  ಅದೇ ರೀತಿ ಮಾಳಮಡ್ಡಿ 6 ನೇ ಕ್ರಾಸ್‍ದಲ್ಲಿ ವೆಂಕಟೇಶ ನಿಲಗ್ರೀವ ರವರ ಮನೆಯ ಮುಂದಿನ ಪ್ಯಾಸೆಜ್‍ದಲ್ಲಿ ಗ್ರೇ ಬಣ್ಣದ ಹೀರೋ ಪ್ಯಾಶನ ಪ್ರೋ ಮೋಟರ್ ಸೈಕಲ್ ನಂ. ಕೆಎ-25/ಈಕ್ಯೂ-3465 ನೇದ್ದನ್ನು ದಿ: 03-10-2020 ರಂದು ರಾತ್ರಿ 19-30 ಗಂಟೆಯ ಸುಮಾರಿಗೆ ಆರೋಪಿಯಾದ ಕೃಷ್ಣಾ ಜ್ಞಾನದೇವ ಮಿರಜಕರ ಹ್ಯಾಂಡಲ್ ಲಾಕನ್ನು ನಕಲಿ ಕೀಲಿಯಿಂದ ತೆಗೆದು, ಕಳ್ಳತನ ಮಾಡಿಕೊಂಡು ಹೋಗಿದ್ದ

ಇದಲ್ಲದೇ ಮಾಳಮಡ್ಡಿಯ ರಾಘವೇಂದ್ರ ಅಪಾರ್ಟಮೆಂಟ ಪಾರ್ಕಿಂಗ್ ಸ್ಥಳದಲ್ಲಿ ಆನಂದ ವಾಜಪೇಯಿ ರವರ ಹೊಂಡಾ ಡ್ರಿಮ್ ಯುಗಾ ಮೋಟರ್ ಸೈಕಲ್ ನಂ. ಕೆಎ-25/ಈಕೆ-3975 ನೇದ್ದನ್ನು ದಿ: 22-04-2021 ರಂದು ರಾತ್ರಿ 21-30 ಗಂಟೆಯ ಸುಮಾರಿಗೆ ಆರೋಪಿಯಾದ ಕೃಷ್ಣಾ ಜ್ಞಾನದೇವ ಮಿರಜಕರ ರಾತ್ರಿ ಕಳ್ಳತನ ಮಾಡಿದ್ದ.

 ಜೊತೆಗೆ ಮಾಳಮಡ್ಡಿ 4 ನೇ ಕ್ರಾಸದಲ್ಲಿನ ಶಾಲಿನಿ ಬಿಲ್ಡಿಂಗದಲ್ಲಿ ಕೇಶವ ಕೊಟಗುನಸಿ ರವರ ಕೆಂಪು ಬಣ್ಣದ ಹೊಂಡಾ ಡಿಯೋ ಮೋಟರ್ ಸೈಕಲ್ ನಂ. ಕೆಎ-25/ಈಜೆ-9932 ನೇದ್ದನ್ನು ದಿ: 28-02-2021 ರಂದು ಬೆಳಗಿನ 4 ಗಂಟೆಯ ಸುಮಾರಿಗೆ ಕಳ್ಳತನ ಮಾಡಿದ್ದ.

ಈ ಹಿನ್ನೆಲೆಯಲ್ಲಿ  ಪ್ರಕರಣದ ವಿಚಾರಣೆ ನಡೆಸಿದ ಧಾರವಾಡದ 3ನೇ ಹೆಚ್ಚುವರಿ ಪ್ರಧಾನ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶ ಮಹೇಶ ಚಂದ್ರಕಾಂತ ಅವರು  ಆರೋಪಿ  ಕೃಷ್ಣ ಮಿರಜಕರ್ ಗೆ ಭಾರತೀಯ ದಂಡ ಸಂಹಿತೆ ಕಲಂ 379 ರಡಿ ಕಳುವಿನ ಅಪರಾಧಕ್ಕಾಗಿ 1 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 1,000/- ರೂ ರಷ್ಟು ದಂಡ ಶಿಕ್ಷೆ ವಿಧಿಸಿರುತ್ತಾರೆ.

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 3 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಲಾಗಿದೆ.

ಅದೇರೀತಿ, ಭಾರತೀಯ.ದಂಡ.ಸಂಹಿತೆ ಕಲಂ 201 ರಡಿ ಸಾಕ್ಷಾಧಾರಗಳನ್ನು ನಾಶಪಡಿಸಿದ ಅಪರಾಧಕ್ಕಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ 500/- ರೂ ರಷ್ಟು ದಂಡ ಶಿಕ್ಷೆ ವಿಧಿಸಲಾಗಿದೆ.

ಸದರಿ ದಂಡವನ್ನು ತುಂಬಲು ತಪ್ಪಿದಲ್ಲಿ 1 ತಿಂಗಳ ಕಾಲ ಸಾದಾ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸದರಿ ಪ್ರಕರಣಗಳಲ್ಲಿ ಧಾರವಾಡ ವಿದ್ಯಾಗಿರಿ ಪೊಲೀಸ ಠಾಣೆಯ ಅಪರಾಧ ವಿಭಾಗದ ಅಂದಿನ ತನಿಖಾಧಿಕಾರಿ ಎಸ್. ಆರ್. ತೇಗೂರ, ಪೊಲೀಸ ಸಬ್ ಇನ್ಸಪೆಕ್ಟರ್, ವಿದ್ಯಾಗಿರಿ ಪೊಲೀಸ ಠಾಣೆ(ಅಪರಾಧ ವಿಭಾಗ) ಮತ್ತು ಬಿ. ಎಮ್. ಅಂಗಡಿ ಎ.ಎಸ್.ಐ   ನೇತೃತ್ವದ ತಂಡವು ಆರೋಪಿಯನ್ನು ಪತ್ತೆ ಮಾಡಿ, ಸದರಿ ಆರೋಪಿ ವಿರುದ್ದ  ದೋಷಾರೋಪಣ ಪಟ್ಟಿಯನ್ನು  ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲ(ಅಭಿಯೋಜಕರು)ರಾದ ಅನಿಲಕುಮಾರ. ಆರ್. ತೊರವಿ ರವರು ವಕಾಲತ್ತು ಮಂಡಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *