ರಾಜ್ಯ

ಪೊಲೀಸ್ ಇಲಾಖೆಯ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಧಾರವಾಡ prajakiran.com : 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‍ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಿಂದೆ ನಿಗದಿಪಡಿಸಲಾಗಿದ್ದ ಅರ್ಜಿ ಆಹ್ವಾನದ ದಿನಾಂಕಗಳನ್ನು ವಿಸ್ತರಿಸಲಾಗಿದೆ. ವಯೋಮಿತಿ ಸೇರಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಸಿ.ಪಿ.ಸಿ (ಪುರುಷ ಮತ್ತು ಮಹಿಳಾ) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ-558, ಎ.ಪಿ.ಸಿ.(ಪುರುಷ)(ಸಿಎಆರ್/ಡಿಎಆರ್) (ಕಲ್ಯಾಣ ಕರ್ನಾಟಕ) ಹುದ್ದೆಗಳ ಸಂಖ್ಯೆ-444, ಅರ್ಜಿ ಸಲ್ಲಿಸಲು ಜುಲೈ 9 ಕೊನೆಯ ದಿನಾಂಕ, ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನಾಂಕ. 



ಸಿ.ಪಿ.ಸಿ(ಪುರುಷ ಮತ್ತು ಮಹಿಳಾ),ಹುದ್ದೆಗಳ ಸಂಖ್ಯೆ-2007, ಎ.ಪಿ.ಸಿ.(ಪುರುಷ) (ಸಿಎಆರ್/ಡಿಎಆರ್), ಹುದ್ದೆಗಳ ಸಂಖ್ಯೆ-1005, ಅರ್ಜಿ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕ, ಶುಲ್ಕ ಪಾವತಿಸಲು ಜುಲೈ 15 ಕೊನೆಯ ದಿನಾಂಕ. 

ಸ್ಪೇಶಲ್ ಆರ್.ಪಿ.ಸಿ.(ಪುರುಷ ಮತ್ತು ಮಹಿಳಾ) (ಕೆ.ಎಸ್.ಆರ್.ಪಿ ಮತ್ತು ಐ.ಆರ್.ಬಿ), ಹುದ್ದೆಗಳ ಸಂಖ್ಯೆ- 2420 ಹಾಗೂ  ಸ್ಪೇಷಲ್ ಆರ್.ಪಿ.ಸಿ.(ಪುರುಷ) (ಬ್ಯಾಂಡ್ಸ್‍ಮನ್) (ಕೆ.ಎಸ್.ಆರ್.ಪಿ ಮತ್ತು  ಐ.ಆರ್.ಬಿ) ಹುದ್ದೆಗಳ ಸಂಖ್ಯೆ-252

ಅರ್ಜಿ ಸಲ್ಲಿಸಲು ಜುಲೈ 06 ಕೊನೆಯ ದಿನಾಂಕ, ಶುಲ್ಕ ಪಾವತಿಸಲು ಜುಲೈ 8 ಕೊನೆಯ ದಿನಾಂಕವಾಗಿದೆ ಎಂದು ಧಾರವಾಡ ಜಿಲ್ಲಾ  ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *