ಅಂತಾರಾಷ್ಟ್ರೀಯ

ದೇಶದಲ್ಲಿ ಒಂದೇ ದಿನ 357 ಜನ ಸಾವು, 9996 ಪ್ರಕರಣ ಪತ್ತೆ

ನವದೆಹಲಿ prajakiran.com : ವಿಶ್ವದ್ಯಾಂತ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಜೂನ್ 11ರಂದು ಗುರುವಾರ ಒಂದೇ ದಿನ ದೇಶದಲ್ಲಿ 9996 ಪ್ರಕರಣಗಳು ದಾಖಲಾಗಿದ್ದು, 357 ಜನ ದೇಶದ ವಿವಿಧ ರಾಜ್ಯಗಳಲ್ಲಿ ಕರೋನಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಸ್ವಲ್ಪ ಸಮಾಧಾನದ ಸಂಗತಿಯೆಂದರೆ ನಿನ್ನೇ 5823 ಜನ ಗುಣಮುಖರಾಗಿದ್ದಾರೆ.

ಜೂನ್ 12ರಂದು ಭಾರತದಲ್ಲೂ ಒಟ್ಟು ಸೋಂಕಿತರ ಸಂಖ್ಯೆ 2,86579 ಯಿದೆ. ಈ ಪೈಕಿ 141029 ಜನ ಚೇತರಿಸಿಕೊಂಡಿದ್ದಾರೆ. ಆ ಮೂಲಕ ದೇಶದ ಕರೋನಾ ಸೋಂಕಿತರ ಸಂಖ್ಯೆ 3 ಲಕ್ಷ ಗಡಿ ಸಮೀಪಿಸಿದ್ದು, ಈವರೆಗೆ 8102 ಜನ ಸಾವನ್ನಪ್ಪಿದಂತಾಗಿದೆ.

ಈ ಹಿಂದೆ ಹತ್ತು ಹನ್ನೊಂದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಬಂದಿದ್ದ ಭಾರತ ಇದೀಗ ಸ್ಪೇನ್ ಹಾಗೂ ಬ್ರಿಟನ್ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಹೋಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.



ಬ್ರಿಟನ್ ನಲ್ಲಿ ಈವರೆಗೆ 2.91 ಕರೋನಾ ಸೋಂಕಿತರು ಇದ್ದರೆ, ಸ್ಪೇನ್ ನಲ್ಲಿ 2.89 ಲಕ್ಷ ಸೋಂಕಿತರಿದ್ದಾರೆ. ಭಾರತದಲ್ಲಿ ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರೆದರೆ ಜೂನ್ ಅಂತ್ಯಕ್ಕೆ ಇಲ್ಲವೇ ಜುಲೈನಲ್ಲಿ ನಂಬರ್ ಒನ್ ಸ್ಥಾನಕ್ಕೆ ಹೋಗಿ ನಿಲ್ಲುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರರಾಜ್ಯವೊಂದರಲ್ಲೇ ಈವರೆಗೆ 94041 ಸೋಂಕಿತರನ್ನು ಹೊಂದಿ, ಈ ಪೈಕಿ 44517 ಜನ ಚೇತರಿಸಿಕೊಂಡಿದ್ದಾರೆ. 3438 ಜನ ಈವರೆಗೆ ಸಾವನ್ನಪ್ಪಿದ್ದಾರೆ. ಆ ಮೂಲಕ ಚೀನಾವನ್ನು ಹಿಂದೆ ಹಾಕಿದೆ.

ಅದೇ ರೀತಿ ಗುಜರಾತ್ ಸಾವಿನಲ್ಲಿ (1347)ಎರಡನೇ ಸ್ಥಾನದಲ್ಲಿದ್ದರೆ, ರಾಷ್ಟ್ರದ ರಾಜಧಾನಿ ನವದೆಹಲಿ ( 984)ಮೂರನೇ ಸ್ಥಾನದಲ್ಲಿದೆ.

ತಮಿಳುನಾಡು ಹೆಚ್ಚು ಸೋಂಕಿತರನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆ ಕಡಿಮೆಯಿದೆ. ಉತ್ತರ ಪ್ರದೇಶ ಐದನೇ ಸ್ಥಾನದಲ್ಲಿದೆ. 



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *