ರಾಜ್ಯ

ಧಾರವಾಡದ ಹೊಸಟ್ಟಿ, ಮುಗಳಿ ಸರಕಾರಿ ಶಾಲೆಯ 350ಕ್ಕೂ ಹೆಚ್ಚಿನ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ನೋಟ್ ಬುಕ್ ವಿತರಣೆ

ಧಾರವಾಡ prajakiran. com : ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಬುಧವಾರ ಧಾರವಾಡದ ಹೊಸಟ್ಟಿ ಹಾಗೂ ಮುಗಳಿ ಗ್ರಾಮದ ಎರಡು ಸರಕಾರಿ ಶಾಲೆಯ 350ಕ್ಕೂ ಹೆಚ್ಚಿನ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಮಾತನಾಡಿ, ಈಗಾಗಲೇ ಧಾರವಾಡ ತಾಲೂಕಿನ ಚಂದನಮಟ್ಟಿ, ಕವಲಗೇರಿ, ಕನಕೂರ, ತಲವಾಯಿ
ಗೋವನಕೊಪ್ಪ, ಹೆಬ್ಬಳ್ಳಿ, ಸೋಮಾಪುರ,ವನಹಳ್ಳಿ
ಲಕಮಾಪುರ,ನರೇಂದ್ರ
ಜಿರಗಿವಾಡ,ಕೊಟಬಾಗಿ
ಕಬ್ಬೇನೂರ,ಕಲ್ಲೆ, ಹನುಮನಾಳ,ಕಲ್ಲೂರ
ಯಾದವಾಡ,ಮಂಗಳಗಟ್ಟಿ,
ಉಪ್ಪಿನಬೆಟಗೆರಿ, ಲೋಕೂರು,
ಕುರಬಗಟ್ಟಿ, ಶಿಬಾರಗಟ್ಟಿ,
ಸೈಬನಕೊಪ್ಪ,ತಡಕೋಡ, ಅಮ್ನಿನಬಾವಿ ಸೇರಿದಂತೆ ಧಾರವಾಡ ತಾಲೂಕಿನ 31ಕ್ಕೂ ಹೆಚ್ಚು ಹಳ್ಳಿಗಳ 56 ಶಾಲೆಯ 13 ಸಾವಿರಕ್ಕೂ ಅಧಿಕ ಮಕ್ಕಳಿಗೆ ಅಂದಾಜು 60 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದೆ.

ಇಂದು ಹೊಸಟ್ಟಿ ಹಾಗೂ ಮುಗಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಗಿದೆ.

ಜನಜಾಗೃತಿ ಸಂಘ ದ ಅಧ್ಯಕ್ಷರಾದ ಬಸವರಾಜ ಕೊರವರ ಅವರ ನೇತೃತ್ವದ ತಂಡ ಸಾಮಾಜಿಕ ಬದ್ದತೆಯನ್ನು ಮೆರೆಯುವ ಮೂಲಕ ಹಳ್ಳಿಗಾಡಿನ ಮಕ್ಕಳ ಭರವಸೆಯ ಬೆಳಕಾಗಿ ಕೆಲಸ ಮಾಡುತ್ತಿದೆ.

ಆ‌ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಯತ್ತ ಮುಖ ಮಾಡುವ, ಸರಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ವಿಸುವ ಹಾಗೂ ಶಾಲೆಗಳ ಸಬಲೀಕರಣಕ್ಕಾಗಿ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.

ಒಂದನೇ ತರಗತಿಯಿಂದ ಮೂರನೇ ತರಗತಿ ಮಕ್ಕಳಿಗೆ ತಲಾ ಒಂದು ಮಗುವಿಗೆ ಮೂರು ನೋಟ್ ಬುಕ್, ಅದರಲ್ಲಿ ಎರಡು ಲೈನ್ ನೋಟ್ ಬುಕ್ ಕನ್ನಡ ಶುದ್ದ ಬರಹಕ್ಕಾಗಿ ನಾಲ್ಕು ಲೈನ್ ನೋಟ್ ಬುಕ್ ಇಂಗ್ಲೀಷ್ ಶುದ್ದಬರಹಕ್ಕಾಗಿ ಹಾಗೂ ಚೌಕ್ ನೋಟ್ ಬುಕ್ ಅಂಕ ಬರಹಕ್ಕಾಗಿ ನೀಡಲಾಗಿದೆ.

ನಾಲ್ಕನೇ ತರಗತಿಯಿಂದ ಒಂಬತ್ತನೇ ತರಗತಿಯವರೆಗೆ ತಲಾ ಒಂದು ಮಗುವಿಗೆ ನಾಲ್ಕು ನೋಟ್ ಬುಕ್ ಎರಡನೂರುರ ನೋಟ್ ಬುಕ್ ಮೂರು, ಒಂದು ನೂರುರ ಒಂದು ನೋಟ್ ಬುಕ್ ಸಿಂಗಲ್ ಲೈನ್ ಮತ್ತು ವಿಶೇಷವಾಗಿ ಹತ್ತನೇ ತರಗತಿ ಮಕ್ಕಳಿಗೆ ಆರು ನೋಟ್ ಬುಕ್ ಎರಡನೂರರ ನೋಟ್ ಬುಕ್ ನಾಲ್ಕು ಹಾಗೂ ನೂರರ ನೋಟ್ ಬುಕ್ ಎರಡು ವಿತರಣೆ ಮಾಡಲಾಗಿದೆ‌ ಎಂದು ವಿವರಿಸಿದರು

ಈ ಸಂದರ್ಭದಲ್ಲಿ ತಡಕೋಡ ಕ್ಲಸ್ಟರ್ ಸಿ ಆರ್ ಪಿ ಆರ್. ಎಂ. ಕುರ್ಲಿ ಮಾತನಾಡಿ, ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಅವರ ಗೆಳೆಯರ ಬಳಗ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಬಹಳ ಅರ್ಥಪೂರ್ಣ ಕೆಲಸ ಮಾಡುತ್ತಿದೆ.

ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಸಕಾಲಕ್ಕೆ ನೋಡುಬುಕ್ ತರಲು ಆಗುತ್ತಿರಲಿಲ್ಲ. ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.

ಅದರ ಜೊತೆಗೆ ಮಗುವಿಗೊಂದು ಮರ ಅಭಿಯಾನ ಆರಂಭಿಸಿ ಎಲ್ಲಡೆ ಹಸಿರು ವಾತವರಣ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಸಂಘ ದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ ಹಾಗೂ ಆನಂದ ಪಾಟೀಲ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ‌

ಈ ವೇಳೆ ಶಾಲೆಯ ಎಸ್ ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು ‌

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *