ರಾಜ್ಯ

ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದ ಬೊಮ್ಮಾಯಿ

*ಸಿದ್ದರಾಮಯ್ಯ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ, ಹಿಂದಿನ ಸರ್ಕಾರದ ಮೇಲೆ ಆರೋಪ: ಬಸವರಾಜ ಬೊಮ್ಮಾಯಿ*

*ನೀವು ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದೀರಿ : ಬಸವರಾಜ ಬೊಮ್ಮಾಯಿ*

ಬೆಂಗಳೂರು ಪ್ರಜಾಕಿರಣ .ಕಾಮ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಿಂದಲೂ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಮಾಡುವುದನ್ನು ಮುಂದುವರೆಸಿದ್ದು, ಅವರ ಮಾತುಗಳು ಸಂಪೂರ್ಣ ಸುಳ್ಳಿನ ಕಂತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ‌ನೀಡಿರುವ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆರ್ಥಿಕತೆ ಹಾಳು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಆದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಸಂಪೂರ್ಣ ಹದಗೆಟ್ಟಿತ್ತು. ಬೆಲೆ ಏರಿಕೆಯಾಗಿ ಡಬಲ್ ಅಂಕಿ ಬೆಲೆ ಏರಿಕೆ, ಸಿಂಗಲ್ ಅಂಕಿ ಆರ್ಥಿಕ ಬೆಳವಣಿಗೆಯಾಗಿತ್ತು.

ಅತಿ ಹೆಚ್ಚು ಭ್ರಷ್ಟಾಚಾರ ಮಾಡಿರುವ ಆರೋಪ ಯುಪಿಎ ಸರ್ಕಾರದ ಮೇಲೆ ಇತ್ತು. ಆಕಾಶ, ಭೂಮಿ ನೀರಿನಲ್ಲಿ ಹಗರಣ ಇತ್ತು. ಎಲ್ಲೆಡೆ ಹಗರಣಗಳ ಸುರಿಮಳೆ ಇತ್ತು.

ಪ್ರಧಾನಿ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ‌ ನೀಡಿ ಆರ್ಥಿಕತೆ ಸಧೃತೆ ತಂದಿದ್ದಾರೆ. ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ನಿಧಿ ಇದೆ. 573 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಫಂಡ್‌ ಇದೆ.

543 ಬಿಲಿಯನ್ ಡಾಲರ್ ಗೋಲ್ಡ್ ನಿಧಿ‌ ಇದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

ಅತಿ ಹೆಚ್ಚು ಬಂಡವಾಳ ಭಾರತಕ್ಕೆ ಹರಿದು ಬರುತ್ತಿದೆ. ಇದು ಭಾರತದ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಮೋದಿಯವರ ಕಾಲದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ 130 ಕೋಟಿ ಭಾರತಿಯರಿಗೆ ಮೂರು ಬಾರಿ ಲಸಿಕೆ ಕೊಡಿಸಿ ಆರ್ಥಿಕ ಸದೃತೆಯನ್ನು ಕಾಪಾಡಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಪ್ರತಿ ತಿಂಗಳು ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ಮೋದಿಯವರು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅಲ್ಲ, ರಾಹುಲ್ ಗಾಂಧಿಯಲ್ಲ. ಇದನ್ನು ನೆನಪಿಟ್ಟುಕೊಳ್ಳಬೇಕು.

ಪದೇ ಪದೇ ಸುಳ್ಳು ಹೇಳಿದರೆ ಅದು ಸತ್ಯವಾಗಲ್ಲ. ನಮ್ಮ ಸರ್ಕಾರ ಇದ್ದಾಗ ಸರ್ ಪ್ಲಸ್ ಬಜೆಟ್ ಮಂಡನೆ ಮಾಡಿದ್ದೇವು ನೀವು ಬಂದು ಮೂರೇ ತಿಂಗಳಲ್ಲಿ ಕೊರತೆ ಬಜೆಟ್ ಮಾಡಿದ್ದೀರಿ,

58 ಸಾವಿರ ಕೋಟಿ ದಲಿತರ ಹಣವನ್ನು ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದ್ದೀರಿ, ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ದಿ ಅಭಿವೃದ್ದಿಗೆ ಹಣ ಮೀಸಲಿಟ್ಟಿಲ್ಲ ಅಂತ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿ ಗೆ ಹಣ ಇಲ್ಲ ಅಂತ ನೀವೇ ಶಾಸಕರಿಗೆ ಹೇಳಿದ್ದಿರಿ, ನಮ್ಮ ಉಪ ಮುಖ್ಯಮಂತ್ರಿ ಕೂಡ ಅಭಿವೃದ್ಧಿ ಗೆ ಹಣ ಕೇಳಬೇಡಿ ಅಂತ ಹೇಳಿದ್ದಾರೆ.

ನಮ್ಮ ಸರ್ಕಾರ ಸದೃಢ ಆರ್ಥಿಕತೆ ಮಾಡಿದ್ದರಿಂದ ನೀವು ಗ್ಯಾರೆಂಟಿ ಗಳನ್ನು ಕೊಡುತ್ತಿದ್ದೀರಿ, ಅವುಗಳಲ್ಲಿಯೂ ಕೂಡ ಕಂಡಿಷನ್ ಹಾಕಿದ್ದೀರಿ, ಅಕ್ಕಿ ಕೊಡುತ್ತೇವೆಂದು ಕೊಡದೇ ನಿಮ್ಮ ವೈಫಲ್ಯ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದೀರಿ.

ಗೃಹಜ್ಯೋತಿ ಯಲ್ಲಿ 200 ಯುನಿಟ್‌ ಕೊಡುತ್ತೆವೆ ಅಂತ ಹೇಳಿ ಸರಾಸರಿ ಅಂತ 43 ಯುನಿಟ್ ಕೊಡುತ್ತಿದ್ದೀರ, ಇದು ಜನರಿಗೆ ಮಾಡಿದ ಮೋಸ ಅಲ್ಲವಾ ? ಗೃಹಲಕ್ಷ್ಮೀ ಇನ್ನೂ ಜಾರಿಗೆ ತರಲಿಕ್ಕೆ ಆಗಿಲ್ಲ.

ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ ಆರ್‌ಟಿಸಿ ಸಿಬ್ಬಂದಿಗೆ ಪೂರ್ಣ ಸಂಬಳ ಕೊಡಲಾಗುತ್ತಿಲ್ಲ. ಪೊಲಿಸರಿಗೆ ಸಂಬಳ ಕೊಡಲಿಕ್ಕೆ ಆಗುತ್ತಿಲ್ಲ.

ನಾವು ಕೊವಿಡ್ ಸಂದರ್ಭದಲ್ಲೂ ಎಲ್ಲ ಉದ್ಯೋಗಿಗಳಿಗೆ ಪೂರ್ಣ ಸಂಬಳ ಕೊಟ್ಟಿದ್ದೇವು, ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ,

ಜನರು ನಿಮಗೆ ಅಧಿಕಾರ ಕೊಟ್ಟಿದ್ದಾರೆ. ನೀವು ರಾಜ್ಯವನ್ನು ಹೇಗೆ ದಿವಾಳಿ ಮಾಡುತ್ತಿದ್ದೀರಾ ಅನ್ನುವುದನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ್ಕೆ ತಾವು ಕೊಟ್ಟ ಹಣ ಯಾವತ್ತೂ ಬಳಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ 3000 ಕೋಟಿ ನೀಡಿ ಕ್ರಿಯಾ ಯೋಜನೆ ಮಾಡಿ ಬಳಕೆ ಮಾಡಿದ್ದೇವು.

371 ಜೆ ಮಾಡಿ ಏನೂ ಪ್ರಯೋಜನ ಇಲ್ಲ ಅಂತ ಕಲ್ಯಾಣ ಕರ್ನಾಟಕದ ಜನ ಸಾರ್ವಜನಿಕವಾಗಿ ಕೂಗುತ್ತಿದ್ದಾರೆ.

371 ಜೆ ಜಾರಿ ಮಾಡಿದ್ದು, ವೈಜನಾಥ ಪಾಟೀಲರ ಹೋರಾಟ ಹಾಗೂ ಯಡಿಯೂರಪ್ಪ ಅವರ ಪ್ರಯತ್ನದಿಂದ ದೊರೆತಿದೆ ಎಂದು ಕುಟುಕಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *