ಜಿಲ್ಲೆ

ನವಲಗುಂದ ತಾಲೂಕಿನ ಹಿರಿಯ ಪತ್ರಕರ್ತ ಪರಶುರಾಮ ಹಕ್ಕರಕಿ ಇನ್ನಿಲ್ಲ

ನವಲಗುಂದ ಪ್ರಜಾಕಿರಣ.ಕಾಮ್ : ಸ್ಥಳೀಯ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತರಾದ ಪರಶುರಾಮ ನಿಂಗಪ್ಪ ಹಕ್ಕರಕಿ (64) ಅವರು ಶನಿವಾರ ನಿಧನರಾದರು. 

ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂದು ಬಳಗ ಇದ್ದಾರೆ.

ಮೃತ ಪರಶುರಾಮ ಹಕ್ಕರಕಿ ಅವರು ಸುಮಾರು 30 ವರ್ಷಗಳಿಂದ ಸಂಜೆವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದರ ಜೊತೆಗೆ ವೀರಶೈವ ಸಮಾಜದ ಸಂಘಟನೆಗಾಗಿ ವೀರಶೈವ ಮಹಾಸಭಾದ ತಾಲೂಕಾ ಅಧ್ಯಕ್ಷರಾಗಿ ಮತ್ತು ಪಟ್ಟಣದ ಮಾಡೆಲ್ ಹೈಸ್ಕೂಲ್ ಶಾಲೆಯ ನಿರ್ದೇಶಕರಾಗಿ ಸಕ್ರಿಯರಾಗಿ ಕೆಲಸವನ್ನು ಮಾಡುತ್ತಾ ಬಂದಿರುತ್ತಾರೆ. ತಾಲೂಕಾ ಒಬ್ಬ ಹಿರಿಯ ಪತ್ರಕರ್ತರನ್ನು ಕಳೆದುಕೊಂಡಂತಾಗಿದೆ

ಸಂತಾಪ : ಪರಶುರಾಮ ಹಕ್ಕರಕಿ ಅವರ ನಿಧನಕ್ಕೆ ಹಿರೇಮಠದ ಸಿದ್ದೇಶ್ವರ ಸ್ವಾಮೀಜಿ, ಗವಿಮಠದ ಬಸವಲಿಂಗ ಸ್ವಾಮೀಜಿ, ನಾಗಲಿಂಗ ಸ್ವಾಮಿ ಮಠದ ವೀರಯ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಜಗದೇಶ ಶೆಟ್ಟರ, ಸಂಸದರಾದ ಪ್ರಲ್ಲಾದ ಜೋಶಿ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ಕೆ.ಎನ್.ಗಡ್ಡಿ, ವಿನಯ ಕುಲಕರ್ಣಿ, ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಆರ್.ಬಿ.ಶಿರಿಯಣ್ಣವರ, ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಬಸವರಾಜ ಕಟ್ಟಿಮನಿ, ಪ್ರಕಾಶ ಶಿಗ್ಲಿ, ಬಾಪುಗೌಡ ಪಾಟೀಲ, ವಿನೋಧ ಅಸೂಟಿ, ವಿಜಯ ಕುಲಕರ್ಣಿ, ಗುರುರಾಜ ಹುಣಸಿಮರದ, ಸಿ.ಎಸ್.ಪಾಟೀಲ, ಸಿದ್ದನಗೌಡ ಪಾಟೀಲ, ಶ್ರೀಶೈಲ ಮೂಲಿಮನಿ, ದೇವರಾಜ ಕಂಬಳಿ, ಶಿವಾನಂದ ಕರಿಗಾರ, ಪ್ರಕಾಶ ಅಂಗಡಿ, ಅಶೋಕ ಮಜ್ಜಿಗುಡ್ಡ, ಶ್ರೀಧರ ಹೆಬಸೂರ, ಡಾ. ಆನಂದ ಗುಡಿ, ನಿಂಗಪ್ಪ ಬಾರಕೇರ, ಡಾ.ಎಸ್.ಸಿ.ಚವಡಿ, ಮೌಲಾಸಾಬ ವೈದ್ಯ, ಶಂಕರಗೌಡ ಮುದಿಗೌಡರ, ವೀರಶೈವ ಸಮಾಜದ ಗಣ್ಯರು, ತಾಲೂಕಾ ಪತ್ರಕರ್ತರಾದ ಪುಂಡಲೀಕ ಮುಧೋಳೆ, ಹುಚ್ಚಪ್ಪ ಭೋವಿ, ಶ್ರೀಕಾಂತ ಮನುವಾಚಾರ್ಯ, ಚರಂತಯ್ಯ ಹಿರೇಮಠ, ನಿಲೇಶ ಹೆಗ್ಗಣ್ಣವರ, ಈಶ್ವರ ಲಕ್ಕುಂಡಿ, ಇಸ್ಮಾಯಿಲ ನದಾಫ, ನಂದೀಶ ಸಂಗಟಿ, ಚಂದ್ರು ಕೊಟಗಿ, ಶಂಕರಯ್ಯ ಸುಬೇದಾರಮಠ, ಅಬ್ದುಲರಝಾಕ ನದಾಫ, ಯಲ್ಲಪ್ಪ ಭೋವಿ ಇತರರು ತೀವೃ ಸಂತಾಪ ಸೂಚಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *