ಸಿನಿಮಾ

ನಟ ದಿಗಂತ, ನಟಿ ಐಂದ್ರಿತಾ ರೈ ದಂಪತಿಗೆ ಸಿಸಿಬಿ ನೋಟಿಸ್ ….!

ಬೆಂಗಳೂರು prajakiran.com : ಡ್ರಗ್ಸ್ ಜಾಲದ ನಂಟು ಹೊಂದಿರುವ ಆರೋಪಿ ಶೇಖ್ ಫಾಜಿಲ್  ಹಾಗೂ ನಟಿ ರಾಗಿಣಿ ಜೊತೆಗೆ ನಂಟು ಹೊಂದಿರುವ ನಟ ದಿಗಂತ, ನಟಿ ಐಂದ್ರಿತಾ ರೈ ದಂಪತಿಗೆ ಸಿಸಿಬಿ ನೋಟಿಸ್ ನೀಡಿದೆ.

ಸೆ. 16ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಬೆಂಗಳೂರು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಈ ನೋಟಿಸ್ ನಲ್ಲಿ ತಿಳಿಸಿದೆ.

ಆರೋಪಿ ಶೇಖ್ ಫಾಜಿಲ್ ಜೊತೆಗೆ ನಟಿ ಐಂದ್ರಿತಾ ರೈ ಇರುವ ಹಲವು ಪೋಟೋಗಳು ಮಾಧ್ಯಮಗಳಿಗೆ ದೊರೆಕಿದ್ದು,  ಹೀಗಾಗಿ ಇಬ್ಬರು ದಂಪತಿಗಳಿಗೆ ಸಂಕಷ್ಟ ಎದುರಾಗಿದೆ.

ಅವರು ಸದ್ಯ ಕೇರಳ ಪ್ರವಾಸದಲ್ಲಿದ್ದಾರೆ. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಸಿಸಿಬಿ ವಿಚಾರಣೆಗೆ ಹಾಜರಾಗ್ತಾರಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

ಇದು ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಕಳವಳ ಹಾಗೂ ಆತಂಕ ಮೂಡಿಸಿದ್ದು, ಆರಂಭದಿಂದಲೂ ಇಬ್ಬರ ಹೆಸರು ಕೇಳಿಬರುತ್ತಿದ್ದವು. ಹಲವು ಕ್ಯಾಸಿನೋ ಪಾರ್ಟಿಗಳಿಗೆ ನಟಿ ಐಂದ್ರಿತಾ ರೈ ಆಹ್ವಾನ ನೀಡಿರುವ ವೀಡಿಯೋ ಈ ಹಿಂದೆಯೇ ಬಿಡುಗಡೆಗೊಂಡಿತ್ತು.

ಶ್ರೀಲಂಕಾದ ಕೋಲೊಂಬೋದ ಕ್ಯಾಸಿನೋ ಪಾರ್ಟಿಗೆ ನಟಿ ಐಂದ್ರಿತಾ ರೈ ಶೇಖ್ ಫಾಜಿಲ್ ಜೊತೆಗೆ ಹೋಗಿದ್ದರು. ಹೀಗಾಗಿ ಆ ಪಾರ್ಟಿಯಲ್ಲಿ ಯಾರಾರು ಇದ್ದರು.

ಫಾಜಿಲ್ ಜೊತೆಗೆ ನಂಟು ಹೇಗೆ ಬಂತು.  ಆರೋಪ ಎದುರಿಸುತ್ತಿರುವ ಸದ್ಯ ಜೈಲು ಪಾಲಾಗಿರುವ ನಟಿ ರಾಗಿಣಿ ಜೊತೆಗೆ ಐಂದ್ರಿತಾ ರೈ ತುಂಬಾ ಕ್ಲೋಸ್ ಆಗಿದ್ದರು.

ಇಬ್ಬರು ಒಟ್ಟಿಗೆ ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಒಂದೇ ಗ್ರೂಪ್ನವರಾಗಿದ್ದು, ಬಹಳ ಆತ್ಮೀಯತೆಯಿಂದ ಇದ್ದರು ಎನ್ನಲಾಗಿದೆ.

ನಟ ದಿಗಂತ, ನಟಿ ಐಂದ್ರಿತಾ ರೈ ಇಬ್ಬರು ಸ್ಯಾಂಡಲ್ ವುಡ್ ನ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿಯವರ ಜೊತೆಗೆ ಒಡನಾಟ ಹೊಂದಿದ್ದ ಹಿನ್ನಲೆಯಲ್ಲಿಯೇ ಸಿಸಿಬಿ ನೋಟಿಸ್ ನೀಡಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *