education minister sureshkumar
ರಾಜ್ಯ

ಶಿಕ್ಷಕರಿಗೆ ಮೌಖಿಕ ಒತ್ತಡ ಹಾಕುತ್ತಿರುವುದಕ್ಕೆ ತೀವ್ರ ವಿರೋಧ

 ಶಿಕ್ಷಕರಿಗೆ ಮೌಖಿಕವಾಗಿ ಅತೀವ ಒತ್ತಡ ಹಾಕುತ್ತಿರುವುದಕ್ಕೆ ತೀವ್ರ ವಿರೋಧ

ಹುಬ್ಬಳ್ಳಿ prajakiran.com : ರಾಜ್ಯದಲ್ಲಿ ಶಿಕ್ಷಕರಿಗೆ ವಠಾರ ಶಾಲೆ ಹಾಗೂ ವಿದ್ಯಾಗಮ ಕಾರ್ಯ ನಿರ್ವಹಣೆ ಹಾಗೂ ಶಿಕ್ಷಕರಿಗೆ ಐದು ದಿನಗಳ ತರಬೇತಿ ಕುರಿತು ಅನುಷ್ಠಾನಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಹಾಗೂ ಸಹ ಶಿಕ್ಷಕರ ಮೇಲೆ ಮೌಖಿಕವಾಗಿ ಅತೀವ ಒತ್ತಡ ಹಾಕುತ್ತಿರುವುದಕ್ಕೆ ತೀವ್ರಅಸಮಾಧಾನ ವ್ಯಕ್ತವಾಗಿದೆ.

ಆದರೆ ಈ ಕುರಿತು ವಿದ್ಯಾಗಮ ಎಂಬ ಮಾರ್ಗಸೂಚಿಗೆ ಸರ್ಕಾರದ ಹಾಗೂ ಇಲಾಖೆಯ ರಾಜ್ಯ ಹಂತದ ಅಧಿಕೃತ ಆದೇಶವಾಗಲಿ, ಸುತ್ತೋಲೆಯಾಗಲಿ, ಮಾರ್ಗಸೂಚಿಯಾಗಲಿ ಬಂದಿಲ್ಲ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ ಲಾಕ್ ಮೂರರ ಆದೇಶಗಳಲ್ಲಿ ಆಗಷ್ಟ ೩೧ ರವರೆಗೆ ಶಾಲೆ ಕಾಲೇಜು ಶಿಕ್ಷಣ ಸಂಸ್ಥೆ ಗಳನ್ನು ತೆರೆಯುವಂತಿಲ್ಲ ಆನ್ ಲೈನ್ ಹಾಗೂ ದೂರ ಶಿಕ್ಷಣ ಪ್ರೋತ್ಸಾಹಿಸಬೇಕು ಎಂದು ಇದೆ.

ಈ ದಿಸೆಯಲ್ಲಿ ತರಬೇತಿ ಬೋಧನೆ ಹಾಗೂ ಕಲಿಕೆಗೆ ಪೂರಕವಾಗಿ ದೂರದರ್ಶನ, ವಾಟ್ಸ್ಯಾಪ್  ವೆಬಿನಾರ್ ಆನ್ ಲೈನ್, ದೂರವಾಣಿ, ಧ್ವನಿ ಮುದ್ರಿಕೆ, ಚಿತ್ರಸುರುಳಿ,ಆನ್‌ಲೈನ್ ಚಿತ್ರ ಕಲಿಕೆ,ಸಂಭಾಷಣೆ,ಪಠ್ಯ ಪುಸ್ತಕ ಮೂಲಕ ಪರೋಕ್ಷ ಕಲಿಕೆ ಹೀಗೆ ಹಲವಾರು ಕಲಿಕಾ ಪ್ರಕ್ರಿಯೆಗಳನ್ನು ನಾವೆಲ್ಲ ನಡೆಸುತ್ತಿದ್ದೇವೆ.

ಆದಾಗ್ಯೂ ಸರ್ಕಾರದ ಸ್ಪಷ್ಟ ಅಧಿಕೃತ ಆದೇಶವಿಲ್ಲದೆ ವಠಾರ ಶಾಲೆ, ಗುಂಪು ಕಲಿಕೆ ನಡೆಸಲು ಒತ್ತಡ ಹಾಕುತ್ತಿರುವುದು ಎಷ್ಟು ಸಮಂಜಸವಾಗಿರುತ್ತದೆ ?

ಭದ್ರತೆ ಇಲ್ಲದಿರುವುದು ಹಾಗೂ ಮಳೆಗಾಲದ ವಾತಾವರಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಭೌತಿಕವಾಗಿ  ಪೂರಕ ವಾತಾವರಣ ಇಲ್ಲ ಎಂದು ದೂರಿದ್ದಾರೆ.

ಗುಂಪು ಕಲಿಕೆಯಲ್ಲಿ ಸಾಮಾಜಿಕ ಅಂತರ ಕಷ್ಟಕರವಾಗುತ್ತದೆ. ಕರ್ನಾಟಕದಲ್ಲಿ ತೀವ್ರ ಅತಿತೀವ್ರವಾಗಿ ಕೊರೋನಾ ಪ್ರಸರಿಸುತ್ತಿದ್ದು, ಈ ಪರಿಸ್ಥಿಯಲ್ಲಿ ಹೊರಾಂಗಣ ಕಲಿಕೆ ಗುಂಪು ಕಲಿಕೆ ಮಕ್ಕಳನ್ನು ಹಾಗೂ  ಶಿಕ್ಷಕರನ್ನು  ಕೊರೋನಾಕ್ಕೆ ತಳ್ಳಿದಂತಾಗಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಯಾವುದೇ ಕಾರಣಕ್ಕೂ ವಠಾರ ಶಾಲೆಗಳು, ತರಬೇತಿಗಳು ಸದ್ಯಕ್ಕೆ ಬೇಡವೇ ಬೇಡ. ಈ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ಒತ್ತಡರಹಿತ ಕಾರ್ಯಭಾರ ನೀಡಬೇಕು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರ.ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಗೌರವಾಧ್ಯಕ್ಷ ಎಲ್.ಆಯ್.ಲಕ್ಕಮ್ಮನವರ.ಕಾರ್ಯಾಧ್ಯಕ್ಷ  ಶರಣಪ್ಪಗೌಡ್ರ.ಕೋಶಾಧ್ಯಕ್ಷ  ಎಸ್.ಎಫ್.ಪಾಟೀಲ.ಉಪಾಧ್ಯಕ್ಷ  ಎಮ್.ಆಯ್.ಮುನವಳ್ಳಿ.ನಾಗರಾಜು.ಕೆ ಮನವಿ ಮಾಡಿಕೊಂಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *