ಜಿಲ್ಲೆ

ಧಾರವಾಡದ ಸಾಧನ ಕೇರಿ, ಕೆಲಗೇರಿ ಕೆರೆಯಲ್ಲಿ 92 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ತೆಗೆದ ಎನ್ ಸಿಸಿ

 ಧಾರವಾಡ prajakiran. com ಜೂ.4:
24 ಕರ್ನಾಟಕ ಎನ್ ಸಿ ಸಿ ಶಿಬಿರ ದಿಂದ ಪುನೀತ್ ಸಾಗರ್ ಅಭಿಯಾನದ ಅಂಗವಾಗಿ ಕೆರೆಗಳ ಸ್ವಚ್ಛತೆ ಆರಂಭಿಸಲಾಗಿದೆ.

ಈ ಅಭಿಯಾನವು, ಮೇ30 ರಿಂದ ಪ್ರಾರಂಭಗೂಂಡು 5 ಜೂನ್ ರ ವರೆಗೆ ನಡೆಯಲಿದೆ.

ಶನಿವಾರ ಧಾರವಾಡದ ಸಾಧನ ಕೇರಿ ಹಾಗೂ ಕೆಲಗೇರಿ ಕೆರೆಯ ತ್ಯಾಜ್ಯ ವಸ್ತುಗಳನ್ನು ಹೂರತೆಗೆಯಲಾಯಿತು..

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಗೆ ಅನುಗುಣವಾಗಿ, NCC ಯು ಸಮುದ್ರ ತೀರ/ಕಡಲತೀರಗಳು/ಮತ್ತು ಇತರ ಜಲಮೂಲಗಳನ್ನು ಸ್ವಚ್ಛಗೊಳಿಸಲು ಪ್ಲ್ಯಾಸ್ಟಿಕ್/ಇತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕಲು ಸರೋವರಗಳನ್ನು ಒಳಗೊಂಡಿರುವ ರಾಷ್ಟ್ರವ್ಯಾಪಿ ಪ್ರಮುಖ ಅಭಿಯಾನ ‘ಪುನೀತ್ ಸಾಗರ್ ಅಭಿಯಾನ’ವನ್ನು ಆರಂಭಿಸಿದೆ.

ಧಾರವಾಡದ 24 ಕರ್ನಾಟಕ ಬಟಾಲಿಯನ್ ಧಾರವಾಡದಲ್ಲಿ 239 ಎನ್‌ಸಿಸಿ ಕೆಡೆಟ್‌ಗಳು, 8 ಎಎನ್‌ಒಗಳು, 6 ಪಿಐ ಸಿಬ್ಬಂದಿಗಳೊಂದಿಗೆ ಸಾಧನಕೇರಿ ಕೆರೆಯನ್ನು ಸ್ವಚ್ಛಗೊಳಿಸುವ  ಕಾರ್ಯವನ್ನು ಕೈಗೊಂಡರು

92 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಇತರ ಜೈವಿಕ ವಿಘಟನೀಯವಲ್ಲದ ತ್ಯಾಜ್ಯವನ್ನು ತೆಗೆದುಹಾಕಲಾಯಿತು.

ಈ ಸಂದರ್ಭದಲ್ಲಿ
ಕೆಡೆಟ್‌ಗಳು ಸ್ಥಳೀಯ ಜನರೊಂದಿಗೆ ಸಂವಹನ ನಡೆಸಿದರು ಮತ್ತು ಮಾಲಿನ್ಯ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

ಉತ್ಸಾಹಿ ಕೆಡೆಟ್‌ಗಳು ಮಾಲಿನ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಬ್ಯಾನರ್‌ಗಳೊಂದಿಗೆ ಘೋಷಣೆ ಜಾಥಾ ಕಾಯ೯ಕ್ರಮ ನಡೆಸಿದರು.

ಲೆಫ್ಟಿನೆಂಟ್ ಕರ್ನಲ್ A K ವೈದ್ಯ, ಕಮಾಂಡಿಂಗ್ ಆಫೀಸರ್ ಮತ್ತು ಧಾರವಾಡದ ಎನ್ ಸಿ ಸಿ ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *