ರಾಜ್ಯ

ಧಾರವಾಡ ತಾಲೂಕಿನ ಹನ್ನೊಂದು ಸರ್ಕಾರಿ ಶಾಲೆಗಳಿಗೆ ದತ್ತಿ ನೀಡಿದ ಬೆಂಗಳೂರಿನ ರೋಹನ್ ಕೇರ್ ಫೌಂಡೇಶನ್

ಧಾರವಾಡ prajakiran.com : ಧಾರವಾಡ ತಾಲೂಕಿನ ಹನ್ನೊಂದು ಸರ್ಕಾರಿ ಶಾಲೆಗಳಿಗೆ ಬೆಂಗಳೂರಿನ ರೋಹನ್ ಕೇರ್ ಫೌಂಡೇಶನ್ ದತ್ತಿ ನೀಡಿದೆ.

ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೇಷ್ಠ ನಿವೃತ್ತ ಶಿಕ್ಷಕಿ ಲೂಸಿ ಸಾಲ್ಡಾನರವರ ಪ್ರೇರಣೆಯಿಂದಾಗಿ ಈ ಕೆಲಸ ಮಾಡಿದೆ‌.

ದತ್ತಿ ನೀಡಿದ ಶಾಲೆಯ ವಿವರ :
1 ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹೆಬ್ಬಳ್ಳಿ,
2 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಿಕೊಪ್ಪ,
3. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕ್ಯಾರಕೊಪ್ಪ,
4. ಸರಕಾರಿ ಪ್ರೌಢಶಾಲೆ ಅಳ್ನಾವರ,
5 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಗೂರ
6 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಮಾಣಿ ತಾಂಡಾ ಮುಮ್ಮಿಗಟ್ಟಿ,
7 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿ‌ ಬಸನಕೊಪ್ಪ (ಕಲಘಟಗಿ ತಾಲೂಕು)
8 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಾಪೂರ,
9 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಗೂರ.
10 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಗಸನಹಳ್ಳಿ,
11 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಡ್ಡರ ಕಾಲನಿ,
ಈ‌ ಮೇಲಿನ ಹತ್ತು ಸರಕಾರಿ ಪ್ರಾಥಮಿಕ ಶಾಲೆಗಳು, ಒಂದು ಪ್ರೌಢಶಾಲೆಗೆ ಜೂ. 3 ರಂದು, ಧಾರವಾಡ ತಾಲೂಕಿನ ಟೀಚರ್ಸ್ ಸೊಸೈಟಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ, ದತ್ತಿನಿಧಿ ಚೆಕ್ಕನ್ನು ಲೂಸಿ ಸಾಲ್ಡಾನರವರ ಅಮೃತ ಹಸ್ತದಿಂದ ಹನ್ನೊಂದು ಶಾಲೆಗಳಿಗೆ ವಿತರಿಸಲಾಯಿತು.

ರೋಹನ್ ಕೇರ್ ಫೌಂಡೇಶನ್ ಮುಖ್ಯಸ್ಥ ಮಂಜುನಾಥ ಕೆ ಮಾತನಾಡಿ, ಪ್ರತಿ ಶಾಲೆಗೆ ಹತ್ತು ಸಾವಿರದಂತೆ ಒಟ್ಟು ಒಂದು ಲಕ್ಷ ಹತ್ತು ಸಾವಿರ ರೂಪಾಯಿಯನ್ನು ತಮ್ಮ ಮಗನ ಸ್ಮರಣಾರ್ಥವಾಗಿ ಸ್ಥಾಪಿಸಿದ ರೋಹನ್ ಕೇರ್ ಫೌಂಡೇಶನ್ ಮೂಲಕ ಬಡಮಕ್ಕಳ ಸೇವೆಯಲ್ಲಿ ಕಾಣುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಲೂಸಿ ಸಾಲ್ಡಾನಾ ಅವರು 25 ಸಾವಿರ ರೂಪಾಯಿಯ 89ನೇ ದತ್ತಿಯನ್ನು ಸ್ಥಾಪಿಸಿ ಸರಕಾರಿ ಶಾಲೆ ಗಳ ಗೌರವ ಮತ್ತಷ್ಟು ಹೆಚ್ಚಿಸಿದರು.

ಇದೇ ಸಂದರ್ಭದಲ್ಲಿ ವಿಶ್ರಾಂತ ಉಪನಿರ್ದೇಶಕ ಆರ್ ಎಸ್ ಮುಳ್ಳೂರ, ಲೂಸಿ ಅವರ ಜೊತೆ ಸೇವೆ ಮಾಡಿ ಮೇ 31 ರಂದು ನಿವೃತ್ತರಾದ ಮಲ್ಲಮ್ಮ ಪಾಟೀಲ ಹಾಗೂ ಧಾರವಾಡ ತಾಲೂಕಿನ ಹನ್ನೊಂದು ಸರಕಾರಿ ಶಾಲೆಗಳಿಗೆ ದತ್ತಿ ನೀಡಿದ ಬೆಂಗಳೂರಿನ ರೋಹನ ಕೇರ ಫೌಂಡೇಶನ ಮುಖ್ಯಸ್ಥ ಮಂಜುನಾಥ ಕೆ, ಶುಭ ಮಂಜುನಾಥ, ಇತ್ತೀಚೆಗೆ ಬೆಂಗಳೂರಿನಲ್ಲಿ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಕುಸ್ತಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ರಾಜು ಮಾಳವಾಡರನ್ನು ಸತ್ಕರಿಸಲಾಯಿತು.

ಇದಕ್ಕೆ ಧಾರವಾಡ ಗ್ರಾಮೀಣ ಬಿಇಒ ಉಮೇಶ ಬಮ್ಮಕ್ಕನವರ, ಧಾರವಾಡ ಶಹರ ಬಿಇಒ ಗಿರೀಶ್ ಪದಕಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರದಾನ ಕಾರ್ಯದರ್ಶಿ ಶಂಕರ ಹಲಗತ್ತಿ, ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾದ್ಯಕ್ಷ ಗುರು ತಿಗಡಿ, ವಲಯ ಅರಣ್ಯ ಅಧಿಕಾರಿ ಸುಜಾತಾ ಪರೋಲಿಕರ್, ಶಂಕರ ಘಟ್ಟಿ, ವೀರಣ್ಣ ಒಡ್ಡೀನ, ಭೀಮಪ್ಪ ಕಾಸಾಯಿ, ಎಲ್ ಐ ಲಕ್ಕಮ್ಮನವರ, ಮಲ್ಲಿಕಾರ್ಜುನ ಉಪ್ಪಿನ ಚಂದ್ರಶೇಖರ ತಿಗಡಿ, ಸೀತಾ ಚಾಕಲಬ್ಬಿ, ಕಲ್ಪನ ಚಂದನಕರ ಕಾಶಪ್ಪ ದೊಡವಾಡ, ಕೆ ಎಂ ಮುನವಳ್ಳಿ, ರುದ್ರೇಶ ಕುರ್ಲಿ ಸೇರಿದಂತೆ ಅನೇಕರು  ಸಾಕ್ಷಿಯಾದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *