ಅಮೆರಿಕದಲ್ಲಿ ಮೊಳಗಿದ ಕನ್ನಡ ಡಿಂಡಿಂಮವ
ಸೆ.1ರಿಂದ ಮೂರು ದಿನಗಳ ಕಾಲ ನಡೆದ ನಾವಿಕ ವಿಶ್ವ ಕನ್ನಡ ಹಬ್ಬ
ಆಸ್ಟಿನ್ ಟ್ಯಾಕ್ಸಸ್ ( ಅಮೆರಿಕ ) : ಹೊರನಾಡ ಕನ್ನಡಿಗರು ಮೂರು ದಿನಗಳ ಕಾಲ
ಅಮೆರಿಕದಲ್ಲಿ ಕನ್ನಡ ಡಿಂಡಿಂಮವ ಮೊಳಗಿಸಿದ್ದಾರೆ.
ಈ ಹಬ್ಬದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಸಮೇತ ಹಾಜರಾಗಿ ಅದಕ್ಕೆ ಹೆಚ್ಚಿನ ಮೆರಗು ನೀಡಿದರು.
ಈ ಹಬ್ಬದ ಇನ್ನೊಂದು ವಿಶೇಷವೆಂದರೆ ಖ್ಯಾತ ಗಾಯಕ ರಘು ದೀಕ್ಷಿತ್, ಸಂಗೀತ ಮಾಂತ್ರಿಕ ಅರ್ಜುನ ಜನ್ಯ, ಕಲಾವಿದರಾದ ಅಂಜಲಿ ಶಾನ್ ಬಾಗ್,
ರಾಘವೇಂದ್ರ ಆಚಾರ್ ಅವರು ಪಾಲ್ಗೊಂಡು ಹೆಚ್ಚಿನ ಮೆರಗು ನೀಡಿದರು.
ಧಾರವಾಡದ ಖಾನ್ ಸಹೋದರರು ದಾಸ ಸಾಹಿತ್ಯ ಹಾಗೂ ಕ್ಲಾಸಿಕಲ್ ಸಂಗೀತ ಕಾರ್ಯಕ್ರಮ ನೀಡಿ ಜೀವ ಕಳೆ ತುಂಬಿದರು.
ಇದಕ್ಕೆ ಹೊರನಾಡ ಕನ್ನಡಿಗರಾದ ಡಲ್ಲಾಸ ಸಾನ್, ಫ್ರಾನ್ಸಿಸ್ ಲಾಸ್, ಎಂಜಲೀಸ್ ನ್ಯೂಯಾರ್ಕ್, ಹೌಸ್ ಟೌನ್ ಸೀಟಲ್ ಸೇರಿದಂತೆ ಹಲವಾರು ಕನ್ನಡಿಗರು ಇದಕ್ಕೆ ಸಾಕ್ಷಿಯಾದರು.