ರಾಜ್ಯ

ಪಶ್ಚಿಮ ಪದವೀಧರ ಮತಕ್ಷೇತ್ರದ 52,068 ಮತಗಳ ಏಣಿಕೆ

ಧಾರವಾಡ prajakiran.com :  ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಅಕ್ಟೋಬರ್ 28 ರಂದು ಚುನಾವಣೆ ಜರುಗಿದ್ದು, ಒಟ್ಟು 52,067 ಜನ ಮತ ಚಲಾಯಿಸಿದ್ದು ಒಂದು ಅಂಚೆ ಮತಪತ್ರವಿದ್ದು ಒಟ್ಟು 52,068 ಮತಗಳ ಏಣಿಕೆ ನಾಳೆ (ನವೆಂಬರ್ 10 ರಂದು) ಬೆಳಿಗ್ಗೆ  8 ಗಂಟೆಯಿಂದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ  ಜರುಗಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುವ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

ಅವರು ಇಂದು ಸಂಜೆ ಮತ ಏಣಿಕೆ ಕೇಂದ್ರವಾಗಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಿರುವ ಮಾದ್ಯಮ ಕೇಂದ್ರದಲ್ಲಿ ಮಾದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ಪಶ್ಚಿಮ ಪದವೀಧರ ಮತ ತ್ರವೂ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 74,268 ನೋಂದಾಯಿತ ಮತದಾರರನ್ನು ಹೊಂದಿದೆ.

ಈ ಪೈಕಿ ಅಕ್ಟೋಬರ್ 28 ರಂದು ಜರುಗಿದ ಚುನಾವಣೆಯಲ್ಲಿ  35,660 ಪುರುಷ, 16,406 ಮಹಿಳೆಯರು ಮತ್ತು ಇತರೆ ಒಂದು  ಹಾಗೂ ಒಂದು ಅಂಚೆ ಮತಪತ್ರ ಸೇರಿದಂತೆ ಒಟ್ಟು 52,068 ಜನ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ. 70.11 ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಹೇಳಿದರು.

ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಪ್ರಸ್ತುತ ಮತ ಏಣಿಕೆ ಎರಡು ಕೊಠಡಿಗಳನ್ನು ನಿಗದಿಗೊಳಿಸಿದ್ದು, 14 ಟೇಬಲ್‍ಗಳಲ್ಲಿ ಮತ ಏಣಿಕೆ ಕೈಗೊಳ್ಳಲಾಗುತ್ತಿದೆ.

ಮತ ಏಣಿಕೆ ಕಾರ್ಯಕ್ಕಾಗಿ ಒರ್ವ ಚುನಾವಣಾಧಿಕಾರಿ, 4 ಜನ ಸಹಾಯಕ ಚುನಾವಣಾಧಿಕಾರಿ ಮತ್ತು ಹೆಚ್ಚುವರಿಯಾಗಿ 4 ಜನ ಮತ ಏಣಿಕೆ ಚುನಾವಣಾಧಿಕಾರಿಗಳು ಸೇರಿದಂತೆ  ವಿವಿಧ ಕಾರ್ಯಗಳಿಗಾಗಿ ಒಟ್ಟು 64 ಸಿಬ್ಬಂದಿಗಳನ್ನು ನೆಮಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದ್ದು, ಮತ ಏಣಿಕೆ ಕೇಂದ್ರಕ್ಕೆ ಬರುವ ಪ್ರತಿಯೋಬ್ಬರು ಕಡ್ಡಾಯಾಗಿ ಮಾಸ್ಕ್ ಧರಿಸಿರಬೇಕು.

ಮತ್ತು ಸಾಮಾಜಿಕ ಅಂತರ ಪಾಲನೆಯೋಂದಿಗೆ ಮತ ಏಣಿಕಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವ ಸ್ಯಾನಿಟೈಸರ್ ಪ್ರತಿ ಗಂಟೆಗೊಮ್ಮೆ ಬಳಸಬೇಕು ಎಂದು ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ ಭದ್ರತೆ ವ್ಯವಸ್ಥೆ: ಕೃಷಿ ವಿಶ್ವವಿದ್ಯಾಲಯದ ಮತ ಕೇಂದ್ರದಲ್ಲಿ ಮತ ಪೆಟ್ಟಿಕೆಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು ಎಸಿ ಹಾಗೂ ಎಸಿಪಿ ನೇತೃತ್ವದಲ್ಲಿ  ಭದ್ರತೆಯನ್ನು ಒದಗಿಸಲಾಗಿದೆ.

ಮತಏಣಿಕೆ ಕೇಂದ್ರಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ದಿನದ 24 ಗಂಟೆ ಪೊಲೀಸ್ ತಂಡ ಇದರ ನಿಗಾವಹಿಸಿದೆ. ಭದ್ರತಾ ಕೊಠಡಿಗೆ ಒಂದೆ ಪ್ರವೇಶ ದ್ವಾರವಿದ್ದು, ಅಭ್ಯರ್ಥಿಗಳು ಭದ್ರತಾ ಕೊಠಡಿಯನ್ನು ಹೊರಗಿನಿಂದ ತಪಾಸಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಶುಷ್ಕ ದಿನ: ಮತ ಏಣಿಕೆಗೆ ಸಂಬಂದಿಸಿದಂತೆ ಧಾರವಾಡ ಜಿಲ್ಲಾಧಿಕಾರಿಗಳು ನವೆಂಬರ್ 10, 2020ರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಿ ನವೆಂಬರ್ 11 ಬೆಳಿಗ್ಗೆ 8 ಗಂಟೆಯವರೆಗೆ ಮಧ್ಯಪಾನ, ಮಧ್ಯಮಾರಾಟ, ಮಧ್ಯಸಾಗಾಣಿಕೆ ಮತ್ತು ಮಧ್ಯ ಸಂಗ್ರಹಣೆಯನ್ನು  ನಿಷೇಧಿಸಿ ಸದರಿ ದಿನಗಳಂದು ಶುಷ್ಕ ದಿವಸಗಳೆಂದು ಘೋಷಿಸಿ, ಆದೇಶಿಸಿದ್ದಾರೆ.

ಮತ ಏಣಿಕಾ ಕಾರ್ಯಕ್ಕೆ 274 ಪೊಲೀಸ್ ಅಧಿಕಾರಿಗಳ, ಸಿಬ್ಬಂಧಿಗಳ ನಿಯೋಜನೆ: ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಉಪ ಪೊಲೀಸ್ ಆಯುಕ್ತ ಪಿ.ಕೃಷ್ಣಕಾಂತ ಅವರು ಮಾತನಾಡಿ, ಮತ ಏಣಿಕಾ ಕಾರ್ಯದ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ.

4 ಸಹಾಯಕ ಪೊಲೀಸ್ ಆಯುಕ್ತರು, 12 ಪೊಲೀಸ್ ಇನ್ಸಪೆಕ್ಟರ್, 16 ಪೊಲೀಸ್ ಸಬ್ ಇನ್ಸಪೇಕ್ಟರ್, 31 ಸಹಾಯಕ ಸಬ್ ಇನ್ಸಪೇಕ್ಟರ್, 71 ಹೆಡ್ ಕಾನ್ಸಟೆಬಲ್, 126 ಪೊಲೀಸ್ ಪೇದೆ, 14 ಜನ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 274 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಮೂರು ಹಂತದ ಭದ್ರತಾ ವ್ಯವಸ್ತೆಯನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಮತಪೆಟ್ಟಿಗೆಗಳನ್ನು ಇಟ್ಟಿರುವ ಭದ್ರತಾ ಕೊಠಡಿಗೆ ನಿರಂತರವಾದ ಪೊಲೀಸ್ ಭದ್ರತೆ ನೀಡಲಾಗಿದ್ದು ಸಿಸಿಟಿವಿ ಮೂಲಕ ನಿರಂತರ ನಿಗಾ ಇಡಲಾಗಿದೆ.

ನಾಳೆ ಜರುಗುವ ಮತ ಏಣಿಕೆ ಕಾರ್ಯಕ್ಕೆ ಆಗಮಿಸುವ ಸಿಬ್ಬಂದಿ, ರಾಜಕೀಯ ಪಕ್ಷಗಳ ಮತ ಏಣಿಕೆ ಏಜೆಂಟರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಆಗಮಿಸುವ ಎಲ್ಲರೂ ಚುನಾವಣಾಧಿಕಾರಿಗಳು ನೀಡಿರುವ ಚುನಾವಣಾ ಕಾರ್ಯದ ಗುರುತಿನ ಪತ್ರ (ಪಾಸ್)ವನ್ನು  ಕಡ್ಡಾಯವಾಗಿ ಧರಿಸಿರಬೇಕು ಎಂದು ಅವರು ತಿಳಿಸಿದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *