ರಾಜ್ಯ

ಕೆಸಿಸಿ ಬ್ಯಾಂಕ್ ಗೆ ದೀರ್ಘ ಕಾಲದಿಂದ ಕಟಬಾಕಿಯಾಗಿದ್ದ ೨೬ ಕೋಟಿ ಸಾಲ ವಸೂಲು

ಕೆಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢ

ಧಾರವಾಡ prajakiran.com: ದೀರ್ಘ ಕಾಲದಿಂದ ಕಟಬಾಕಿಯಾಗಿದ್ದ ದೊಡ್ಡ ಸಾಲಗಳ ವಸೂಲಾತಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ತಮ್ಮ ಅವಧಿಯಲ್ಲಿ ಕೈಕೊಳ್ಳಲಾಯಿತು ಎಂದು ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಉತ್ತಮ ಲಾಭ ಗಳಿಸುವಂತೆ ಮಾಡಿರುವುದಾಗಿ ವಿವರಿಸಿದರು.

ಬ್ಯಾಂಕ್‌ನಲ್ಲಿ ಕಳೆದ ಎರಡು ದಶಕಗಳ ಮೇಲ್ಪಟ್ಟು ವಸೂಲಾಗದೆ ಬಾಕಿ ಉಳಿದಿರುವ ವಿವಿಧ ಸಂಸ್ಕರಣ ಘಟಕಗಳ ಸಾಲ ವಸೂಲಾತಿಗೆ ವಿಶೇಷ ಯೋಜನೆ ಜಾರಿಗೆ ತಂದು ಸುಮಾರು ೨೬ ಕೋಟಿ ರೂ. ಅಸಲು, ಬಡ್ಡಿ ಮೊತ್ತವನ್ನು ವಸೂಲು ಮಾಡಲಾಗಿದೆ ಎಂದರು.

ಅಧ್ಯಕ್ಷ ನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದ್ದು, ಕರೊನಾ ಸಂಕಷ್ಟದಲ್ಲಿ ವಿಶೇಷವಾಗಿ ೬೦ ಕೋಟಿ ರೂ.ಗಳಷ್ಟು ಕೃಷಿ ಬೆಳೆ ಸಾಲ ವಿತರಣೆ ಮಾಡಿರುವುದು ನನ್ನ ಅವಧಿಯ ಸಾಧನೆಯಾಗಿದೆ.

ಇದಲ್ಲದೆ ಕಿಸಾನ್ ಬಳಕೆ ಸಾಲದ ಯೋಜನೆ, ೧೬ ಸಾವಿರ ರೈತ ಸದಸ್ಯರಿಗೆ ೪೩ ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಕೃಷಿ ಸಾಲ ಮಾತ್ರವಲ್ಲದೇ ಕೃಷಿಯೇತರ ಉದ್ದೇಶಗಳಿಗೂ ಸಾಲ ವಿತರಿಸುವ ಮುಖಾಂತರ ಬ್ಯಾಂಕ್ ವ್ಯವಹಾರವನ್ನು ವಿಸ್ತರಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳನ್ನು ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸಲಾಗಿದೆ. ಸಧ್ಯ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು,

ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸಲು ಆಡಳಿತ ಮಂಡಳಿ ಸಿದ್ಧವಿದೆ. ಬ್ಯಾಂಕಿನ ಆಡಳಿತ ಮಂಡಳಿ ಸಹಕಾರದಿಂದ ಈ ಸಾಧನೆ ಮಾಡಿದ್ದೆನೆ ಎಂದರು.

ಅಧ್ಯಕ್ಷ ಸ್ಥಾನದ ಚುನಾವಣೆ ಪೂರ್ವ ನಿರ್ಧರಿತ. ಹಾಗೂ ಹಿರಿಯರ ಮಾರ್ಗದರ್ಶನದಂತೆ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮೇ ೧೦ ರಂದು ರಾಜೀನಾಮೆ ನೀಡಿದ್ದೆನೆ.

೨೦೧೮ರಲ್ಲಿ ನಡೆದ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ನವಲಗುಂದ ತಾಲೂಕು ಪ್ರತಿನಿಧಿಸಿ ನಿರ್ದೇಶಕನಾಗಿ ಆಯ್ಕೆಯಾದೆ.

ನಂತರ ರಾಜಕೀಯ ಹಿತೈಷಿಗಳ ಸಹಕಾರದಿಂದ ನಿರ್ದೇಶಕರು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದರು. ನನಗೆ ನೀಡಿದ ೩೦ ತಿಂಗಳ ಅವಧಿ ಪೂರ್ಣಗೊಂಡಿದ್ದರಿಂದ ರಾಜೀನಾಮೆ ನೀಡಿರುವುದಾಗಿ ತಿಳಿಸಿದರುು.

ನಾನು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ. ಬ್ಯಾಂಕ್ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಎಫ್.ಅರ್.ಕಲ್ಲನಗೌಡರ, ಪಿ.ಪಿ.ಗಾಯಕವಾಡ ಸುದ್ದಿಗೋಷಿಯಲ್ಲಿದ್ದರು.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *