ರಾಜ್ಯ

ಧಾರವಾಡದ ಸಂಚಾರ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ಗೆ ಕರೊನಾ ಪಾಸಿಟಿವ್  ….!?

ಪ್ರಜಾಕಿರಣ Big Exclusive  

ಧಾರವಾಡ prajakiran.com : ರಾಜ್ಯದ ರಾಜಧಾನಿ ಬೆಂಗಳೂರಿನ ನೂರಾರು ಪೊಲೀಸರಿಗೆ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೋನಾ ಭಾನುವಾರ ವಿದ್ಯಾನಗರಿ ಧಾರವಾಡದ ಪೊಲೀಸಗೂ ವಕ್ಕರಿಸಿದೆ.

ಧಾರವಾಡದ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಗೆ ಕರೊನಾ ಪಾಸಿಟಿವ್ ಇರುವುದು ಪ್ರಜಾಕಿರಣ.ಕಾಮ್ ಗೆ ದೃಢ ಪಟ್ಟಿದೆ.

ಇವರು ಕಳೆದ ಹಲವು ದಿನಗಳ ಹಿಂದೆ ಧಾರವಾಡದಿಂದ ಗೋಕರ್ಣಕ್ಕೆ ತೆರಳಿ, ಅಲ್ಲಿಯ ತೀರ್ಥಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದರು.



ಅಲ್ಲಿಂದ ಬಂದ ನಂತರ ಅವರಿಗೆ ನೆಗಡಿ, ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರಿಂದಾಗಿ  ಆಗ ಅವರೇ ಸ್ವಯಂ ಪ್ರೇರಿತರಾಗಿ ಕೋವಿಡ್ 19 ತಪಾಸಣೆ ಮಾಡಿಸಿಕೊಂಡಿದ್ದರು.

ಭಾನುವಾರ ಸಂಜೆ ಅವರಿಗೆ ರೋಗ ಲಕ್ಷಣಗಳು ಕಂಡ ಬಂದ ಹಿನ್ನಲೆಯಲ್ಲಿ ಅವರನ್ನು ನಿಯೋಜಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



ಕಳೆದ ಎರಡು ದಿನದ ಹಿಂದೆ ಟೆಸ್ಟ ಮಾಡಿಸಿಕೊಂಡಿದ್ದ ಪೊಲೀಸ್ ಆನಂತರ ಕೂಡ ಕೆಲಸಕ್ಕೆ ಹಾಜರಾಗಿದ್ದ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿದ ಧಾರವಾಡದ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗೂ ಎದೆಯಲ್ಲಿ ಢವ ಢವ ಶುರುವಾಗಿದೆ.

ಭಾನುವಾರ ಸಂಜೆ ವರದಿ ಖಚಿತಗೊಳ್ಳುತ್ತಿದ್ದಂತೆ ಪೇದೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಧಾರವಾಡದ 20ಕ್ಕೂ ಹೆಚ್ಚು ಪೊಲೀಸರಿಗೆ ಆತಂಕ ಕಾಡುತ್ತಿದೆ.

ಧಾರವಾಡ ಸಂಚಾರ ಪೋಲಿಸ್ ಠಾಣೆಯಲ್ಲಿ 80ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.  ಹೀಗಾಗಿ ಧಾರವಾಡ ಸಂಚಾರ ಪೊಲೀಸ್ ಠಾಣೆ ಸೀಲ್ ಡೌನ್ ಆಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. 



ಅಲ್ಲದೆ, ಅವರೊಂದಿಗೆ ಕೆಲಸ ನಿರ್ವಹಿಸಿದ ಧಾರವಾಡ ಸಂಚಾರ ಠಾಣೆ, ಶಹರ ಪೊಲೀಸ್ ಠಾಣೆ ಹಾಗೂ ಸಂಚಾರ ಪೊಲೀಸ್ ಠಾಣೆ ಮೇಲ್ಗಡೆಯಿರುವ ಎಸಿಪಿ ಕಚೇರಿ ಕಾನ್ಸಟೇಬಲ, ಹೆಡ್ ಕಾನ್ಸಟೇಬಲ್ ಹಾಗೂ ಎ ಎಸ್ ಐಗಳ ಕೋವಿಡ್ ಟೆಸ್ಟ ಮಾಡಿಸಿಕೊಳ್ಳಲು ಸಜ್ಜಾಗಿದ್ದಾರೆ.

 ಇವರ ಜೊತೆಗೆ ಸಂಪರ್ಕ ಹೊಂದಿದ್ದ ಎಲ್ಲ ಪೊಲೀಸರಿಗೂ ಧಾರವಾಡ ಜಿಲ್ಲಾಡಳಿತ ಕ್ವಾರೆಂಟೈನ್ ಮಾಡ್ತಾರಾ..? ಎಂಬುದು ಕಾದು ನೋಡಬೇಕಿದೆ.




PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *