ರಾಜ್ಯ

ಧಾರವಾಡ ಗ್ರಾಮೀಣದಲ್ಲಿ ಹಾಲಿ- ಮಾಜಿ ಶಾಸಕರಿಗೆ ಬರೋಬ್ಬರಿ ಟಕ್ಕರ್ ನೀಡಿದ ಪಕ್ಷೇತರ, ಬಂಡಾಯ ಅಭ್ಯರ್ಥಿಗಳು….!

ಧಾರವಾಡ prajakiran.com :
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತ ರೂಢ ಹಾಲಿ ಬಿಜೆಪಿ ಹಾಗೂ ಕಾಂಗ್ರೆಸ್ ನ ಮಾಜಿ ಶಾಸಕರಿಗೆ ಪಕ್ಷೇತರ ಹಾಗೂ ಬಂಡಾಯ ಅಭ್ಯರ್ಥಿಗಳು ಬರೋಬ್ಬರಿ ಟಕ್ಕರ್ ನೀಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಧಾರವಾಡ ಗ್ರಾಮೀಣ ಶಾಸಕ ವಾಸವಿರುವ
ವಾರ್ಡ್ ನಂಬರ್ 1 ರಲ್ಲಿಯೇ ಬಿಜೆಪಿ ಅಭ್ಯರ್ಥಿ ಅನಿತಾ ಚಳಗೇರಿ 2231 ಮತಗಳನ್ನು ಪಡೆದರೆ, ಬಸವರಾಜ ಕೊರವರ ಗೆಳೆಯರ ಬಳಗದ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯಶ್ರೀ ಪವಾರ ನಾಯಕವಾಡ 2165 ಪಡೆದಿದ್ದಾರೆ.

ಆ ಮೂಲಕ ಕೇವಲ 66 ಮತಗಳ ಅಂತರದಿಂದ ಸೋತರೂ ಹಾಲಿ ಮಾಜಿ ಶಾಸಕರಿಗೆ ಕೊನೆ ಸುತ್ತಿನವರೆಗೆ ತೀವ್ರ ಪೈಪೋಟಿ ನೀಡಿದ್ದಾರೆ.

ಅಚ್ಚರಿ ಸಂಗತಿಯೆಂದರೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪ್ರಭಾವವಿರುವ ಈ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ನಿರ್ಮಲಾ ಹೊಂಗಲ 1124 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಬೂತ್ ನಂಬರ 1ರಿಂದ 12 ರವರೆಗೆ ಕೊನೆ ಸುತ್ತಿನ ವರೆಗೆ ಎರಡು ನೂರಕ್ಕೂ ಹೆಚ್ಚಿನ ಲೀಡ್ ಕಾಯ್ದು ಕೊಂಡ ಪಕ್ಷೇತರ ಅಭ್ಯರ್ಥಿ  ಕೊನೆ ಬೂತ್ ನಲ್ಲಿ ಕೇವಲ 66 ಮತಗಳ ಅಂತರದಲ್ಲಿ ಸೋಲು ಕಂಡರು.

ಆ ಮೂಲಕ ಹಾಲಿ‌-ಮಾಜಿ ಶಾಸಕರ ನಿದ್ದೆಗೆಡಿಸಿದ್ದು ಬಸವರಾಜ ಕೊರವರ ಗೆಳೆಯರ ಬಳಗ ಎಂದರೆ ತಪ್ಪಾಗಲಾರದು.

ವಾರ್ಡ್ ನಂಬರ್ 2 ರಲ್ಲಿ ಕಾಂಗ್ರೇಸ್ ಅಭ್ಯರ್ಥಿ 2085 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಎರಡನೇ ಸ್ಥಾನಕ್ಕೆ ಕುಸಿದು 1996, ಜೆಡಿಎಸ್ ಅಭ್ಯರ್ಥಿ ಹೇಮಾವತಿ ಪಾಟೀಲ 767 ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ/ ಪಕ್ಷೇತರರಾಗಿ ಅಖಾಡಕ್ಕೆ ಇಳಿದ ದೀಪಾ ಮನೋಹರ ನಾಯಕ 540 ಮತಗಳನ್ನು ಪಡೆದು ಬಿಜೆಪಿಗೆ ಸೋಲಿನ ರುಚಿ ತೋರಿಸಿದ್ದಾರೆ. 

ವಾರ್ಡ್ ನಂಬರ್ 3 ರಲ್ಲಿ ಬಿಜೆಪಿ ಅಭ್ಯರ್ಥಿ ಈರೇಶ ಅಂಚಟಗೇರಿ 3209 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶಾಹೀದ ಅಹ್ಮದ ನದಾಫ 182, ಕಾಂಗ್ರೆಸ್‌ ಅಭ್ಯರ್ಥಿ ಅಶೋಕ ಹೂಗಾರ 1140 ಮತ ಪಡೆದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ,  ಬಿಜೆಪಿ ಬಂಡಾಯ ಅಭ್ಯರ್ಥಿ ಮಂಜುನಾಥ ಬಾಳಪ್ಪ ನಡಟ್ಟಿ 209 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಬಂದಿದ್ದಾರೆ. 

ವಾರ್ಡ್ ನಂಬರ್ 4 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಕಮತಿ 3123 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿ ಬಸವರಾಜ ಪಳೋಟಿ 2274 ಎರಡನೇ ಸ್ಥಾನಕ್ಕೆ ಕುಸಿದರೆ,
ಜೆಡಿಎಸ್ ಅಭ್ಯರ್ಥಿ ಮುಸ್ತಾಕ ಅಹ್ಮದ ಶೇತಸನದಿ 619, ಬಿಜೆಪಿ ಬಂಡಾಯ ಅಭ್ಯರ್ಥಿ ರಾಕೇಶ ದೊಡ್ಡಮನಿ 229  ಮತಗಳನ್ನು ಪಡೆದಿದ್ದಾರೆ. 

ವಾರ್ಡ್ ನಂಬರ್ 5 ರಲ್ಲಿ ಬಿಜೆಪಿ ಅಭ್ಯರ್ಥಿ ನಿತಿನ ಇಂಡಿ 2477 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿಠ್ಠಲ ಚವ್ಹಾಣ 343 , ಕಾಂಗ್ರೆಸ್ ಅಭ್ಯರ್ಥಿ ಶಿವಪ್ಪ ಚನ್ನಗೌಡರ 1424, ಪಕ್ಷೇತರ ಅಭ್ಯರ್ಥಿ ಗಿರೀಶ ಸದಾಶಿವ ಗೋಡಿ 43, ಎಎಪಿ ಅಭ್ಯರ್ಥಿ ನಜಿರ ಅಹಮ್ಮದ ಕುಂದಗೋಳ 34 , ಭೀಮಪ್ಪ ರೆಡ್ಡಿ 17, ಬಿಜೆಪಿ ಬಂಡಾಯ ಅಭ್ಯರ್ಥಿ ಸುರಜ ಮಲ್ಲಿಕಾರ್ಜುನ ಪುಡಕಲಕಟ್ಟಿ 1311 ಮತಗಳನ್ನು ಪಡೆದಿದ್ದಾರೆ. 

ವಾರ್ಡ್ ನಂಬರ್ 6 ರಲ್ಲಿ
ಕಾಂಗ್ರೇಸ್ ಅಭ್ಯರ್ಥಿ ದಿಲಷಾದ ಬೇಗಂ ನಧಾಫ 2737 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 2539, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಾಹೀನ ಹಾವೇರಿಪೇಟ 1261 ಮತ್ತು ಯಲ್ಲಮ್ಮ ಕಡೇಮನಿ 241 ಮತಗಳು ಹಾಗೂ ಜೆಡಿಎಸ್ ಅಭ್ಯರ್ಥಿ 161 ಮತಗಳನ್ನು ಪಡೆದಿದ್ದಾರೆ. 

ವಾರ್ಡ್ ನಂಬರ್ 7 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೀಪಾ ನೀರಲಕಟ್ಟಿ 2864 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮುಕ್ತುಮ್ ಹುಸೇನ ಮಸ್ತಾನ ವಾಲೆ 187 ಮತಗಳನ್ನು ಹಾಗೂ‌ ಪಕ್ಷೇತರ ಅಭ್ಯರ್ಥಿ ಮೊಹಮ್ಮದ ಮೊಯಿನ ಬಿಡಿವಾಲೆ 108 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ರವಿ ಯಲಿಗಾರ 2588 ಮತಗಳನ್ನು ಪಡೆದು ಸೋಲಿನ ರುಚಿ ಅನುಭವಿಸಿದ್ದಾರೆ‌. 

ವಾರ್ಡ್ ನಂಬರ್ 8 ರಲ್ಲಿ ಬಿಜೆಪಿ ಅಭ್ಯರ್ಥಿ ಶಂಕರ ಶೇಳಕೆ 2114 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 1518 ಮತಗಳನ್ನು ,ಜೆಡಿಎಸ್ ಅಭ್ಯರ್ಥಿ ಬಸವರಾಜ ಕುರಟ್ಟಿಮಠ 97, ಪಕ್ಷೇತರ ಅಭ್ಯರ್ಥಿ ಮಹಾಂತೇಶ್ ಕೊಡ್ಲಣ್ಣವರ 39 , ಎಎಪಿ ಶರೀಫಸಾಬ ಮಡಕೇಶ್ವರ 52, ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಪ್ರಕಾಶ ಬಾಬುರಾವ್ ಘಾಟಿಗೆ 1938 , ಪ್ರಮೋದ ಚಿದಂಬರ ಹಂದಿಗೋಳ 51, ಭರತ ವಿಶ್ವಾಸರಾವ್ ಸಾವಂತ 77, ಮಂಜುನಾಥ ಕದಂ 238 , ರವಿಕುಮಾರ ನೀಲಕಂಠಪ್ಪ ಹೆಗಡಿ 85, ಹಾಗೂ ಶಕುಂತಲಾ ಕೇಶವ ಕಟ್ಟಿ 43 ಮತಗಳನ್ನು ಪಡೆದಿದ್ದಾರೆ.

ವಾರ್ಡ್ ನಂಬರ್ 9 ರಲ್ಲಿ ಬಿಜೆಪಿ ಅಭ್ಯರ್ಥಿ ನಾಝರೆ ರತ್ನಬಾಯು ಏಕನಾಥ 1488 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಸುನೀತಾ ಆ ಅಂಕೋಲೆಕರ 1467, ಜೆಡಿಎಸ್ ಅಭ್ಯರ್ಥಿ ಮೇಘದರ್ಶಿನಿ ಈಶ್ವರ ಸಾಣಿಕೊಪ್ಪ 522 ಮತಗಳನ್ನು ಪಡೆದಿದ್ದಾರೆ‌. ಪಕ್ಷೇತರ ಅಭ್ಯರ್ಥಿಗಳಾದ ಆರತಿ ಮಹೇಶ ಬೆಳಗಾಂವಕರ 327, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸವಿತಾ ಬಸವರಾಜ ಕಟಗಿ 765, ಜ್ಯೋತಿ ಮೋಹನ ಮೇಲಿನಮನಿ 381, ನಾಗಮ್ಮ ವಿಜಯ ಕುಂದಗೋಳ 88, ಶಾಂತವ್ವ ಬಸಪ್ಪ ಬೂದಿಹಾಳ 146 ಮತಗಳನ್ನು ಪಡೆದಿದ್ದಾರೆ. 

ಹೀಗೆ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ 9 ವಾರ್ಡ್ ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷೇತರರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *