ರಾಜ್ಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 10, 15, 19 ,21 ರಲ್ಲಿ ಬಿಜೆಪಿ, 20, 40 ರಲ್ಲಿ ಕಾಂಗ್ರೆಸ್ ಗೆಲುವು

ಹುಬ್ಬಳ್ಳಿ-ಧಾರವಾಡ prajakiran.com : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಜಯಭೇರಿ ಮುಂದುವರೆದಿದೆ.

ವಾರ್ಡ್ ನಂಬರ್ 40 ರಲ್ಲಿ
ಕಾಂಗ್ರೇಸ್ ಅಭ್ಯರ್ಥಿ ಶಿವಕುಮಾರ ರಾಯನಗೌಡರ 3544 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಈಶ್ವರಗೌಡ 2873 ಮತಗಳನ್ನು ಹಾಗೂ ಜೆಡಿಎಸ್ ಅಭ್ಯರ್ಥಿ ಖಾರದರಸಾಬ ಬಾನಿ 73 ಮತಗಳನ್ನು ಪಡೆದಿದ್ದಾರೆ. 88 ನೋಟಾ ಅಭ್ಯರ್ಥಿ ಹಾಗೂ 1 ತಿರಸ್ಕೃತ ಸೇರಿ ಒಟ್ಟು 6578 ಮತಗಳು ಚಲಾವಣೆಯಾಗಿದ್ದು, 6489 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 15 ರಲ್ಲಿ
ಬಿಜೆಪಿ ಅಭ್ಯರ್ಥಿ ವಿಷ್ಣುತೀರ್ಥ ವೇದವ್ಯಾಸ ಕೊರ್ಲಹಳ್ಳಿ 2836 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ಅನಿರುಧ ದೀಪಕ ಚಿಂಚೋರೆ 1923 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಶ್ರೀಧರ ಗೋಪಾಲರಾವ ಪಂಜೀಕರ 57 ಮತಗಳನ್ನು ಹಾಗೂ ಆಪ್
ಅಭ್ಯರ್ಥಿ ನಟರಾಜ ಶಂಕರ ನಾಶಿ 46 ಮತಗಳನ್ನು ಪಡೆದಿದ್ದಾರೆ. 65 ನೋಟಾ ಅಭ್ಯರ್ಥಿ ಒಟ್ಟು 4627 ಮತಗಳು ಚಲಾವಣೆಯಾಗಿವೆ.

ವಾರ್ಡ್ ನಂಬರ್ 10 ರಲ್ಲಿ
ಬಿಜೆಪಿ ಅಭ್ಯರ್ಥಿ ಕೊಟಬಾಗಿ ಚಂದ್ರಕಲಾ ಬಸವರಾಜ 3484 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೇಸ್ ಅಭ್ಯರ್ಥಿ ನಿರ್ಮಲಾ ಸವದಿ 1899 ಮತಗಳು, ಜೆಡಿಎಸ್ ಅಭ್ಯರ್ಥಿ ಲತಾ ಮಂಜುನಾಥ ಆರೇರ 804 ಮತಗಳು ಹಾಗೂ ಆಪ್ ಅಭ್ಯರ್ಥಿ ಹಸೀನಾಬಾನು ನಿಸಾರ ಅಹ್ಮದ ಮಮದಾಪೂರ 62 ಮತಗಳನ್ನು ಪಡೆದಿದ್ದಾರೆ. 88 ನೋಟಾ ಅಭ್ಯರ್ಥಿ ಹಾಗೂ 12 ತಿರಸ್ಕೃತ ಸೇರಿ ಒಟ್ಟು 6249 ಮತಗಳು ಚಲಾವಣೆಯಾಗಿದ್ದು, 6160 ಮತಗಳು ಸಿಂಧುವಾಗಿವೆ.

ವಾರ್ಡ್ ನಂಬರ್ 20 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕವಿತಾ ದಾನಪ್ಪ ಕಬ್ಬೇರ 3183 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗೀತಾ ಗೌಡಪ್ಪ ಪಾಟೀಲ 2504 ಮತಗಳನ್ನು, ಪಕ್ಷೇತರ ಅಭ್ಯರ್ಥಿ ಶೋಭಾರಾಣಿ ಮಲ್ಲಪ್ಪ ಮಾದರ ಮತಗಳನ್ನು ಪಡೆದಿದ್ದಾರೆ. ನೋಟಾ 97 ಮತಗಳು ಸೇರಿ ಒಟ್ಟು 5973 ಮತಗಳು ಚಲಾವಣೆಯಗಿವೆ. 5973 ಮತಗಳು ಸಿಂಧು ಆಗಿವೆ.

ವಾರ್ಡ್ ನಂಬರ್ 19* ರಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಪಾಟೀಲ‌ 2243 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರೂಪಾ ಈಶ್ವರ ಒಡ್ಡಿನ 1653 ಮತಗಳನ್ನು ಪಡೆದಿದ್ದಾರೆ. ನೋಟಾ 80 ಮತಗಳು ಸೇರಿ ಒಟ್ಟು 3976 ಮತಗಳು ಚಲಾವಣೆಯಗಿವೆ.

ವಾರ್ಡ್ ನಂಬರ್ 21* ರಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಯಾವಗಲ 3098 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಬಾನವಿ ಸಂದೀಪ 848 ಮತಗಳನ್ನು ,ಜೆಡಿಎಸ್ ಅಭ್ಯರ್ಥಿ ಸುನೀಲ ತುಳಸಪ್ಪ ಕುರಹಟ್ಟಿ 484 ಮತಗಳನ್ನು ಪಕ್ಷೇತರ ಅಭ್ಯರ್ಥಿ ಮಂಜುನಾಥ ಚವ್ಹಾನ 118 ಮತಗಳನ್ನು ಪಡೆದಿದ್ದಾರೆ. ನೋಟಾ 98 ಮತಗಳು ಸೇರಿ ಒಟ್ಟು 4646 ಮತಗಳು ಚಲಾವಣೆಯಗಿವೆ. 4548 ಮತಗಳು ಸಿಂಧು ಆಗಿವೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *