ಅಂತಾರಾಷ್ಟ್ರೀಯ

ಭಾರತೀಯ ಜೀವ ವಿಮಾ ನಿಗಮ ೨೮.೯೨ ಕೋಟಿ ಪಾಲಸಿ

ಧಾರವಾಡ prajakiran.com : ಭಾರತೀಯ ಜೀವ ವಿಮಾ ನಿಗಮ  ಕಳೆದ ಆರ್ಥಿಕ ವರ್ಷದಲ್ಲಿ (೨೦೧೯-೨೦) ಅಖಿಲ ಭಾರತ ಮಟ್ಟದಲ್ಲಿ ೨೮.೯೨ ಕೋಟಿ ಚಾಲ್ತಿಯಲ್ಲಿರುವ ಪಾಲಸಿಗಳನ್ನು ಹೊಂದಿದ್ದರೆ, ೧೧.೩೬ ಕೋಟಿ ಸಮೂಹ ವಿಮಾ ಪಾಲಸಿಗಳಿವೆ.

೬,೧೫,೮೮೨.೯೪ ಕೋಟಿ ಒಟ್ಟು ಗಳಿಸಿದ ವಾ಼ರ್ಷಿಕ ಆದಾಯವಾಗಿದೆ. ೩,೭೯,೦೬೨.೫೬ ಕೋಟಿ ಒಟ್ಟು ಪ್ರೀಮಿಯಂ ಆದಾಯವಾದರೆ ೨,೫೪,೨೨೨.೨೭ ಕೋಟಿ ಪಾಲಸಿದಾರರಿಗೆ ಸಂದಾಯವಾದ ಮೊತ್ತವಾಗಿದೆ.

ಅದೇ ರೀತಿ ಜನ ಕಲ್ಯಾಣಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ೨೪,೦೧,೪೫೭ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಸಾಮಾಜಿಕ ಕ್ಷೇತ್ರದಲ್ಲಿ : ರೂ.೨,೮೨,೧೧೯ ಕೋಟಿ, ಕೇಂದ್ರ ಸರಕಾರದ ಸೆಕ್ಯೂರಿಟಿಗಳಲ್ಲಿ ೧೧,೯೦,೨೮೮ ಕೋಟಿ, ಗೃಹ ನಿರ್ಮಾಣ ಸಂಸ್ಥೆಗಳಲ್ಲಿ ೫೮,೪೭೪ ಕೋಟಿ, ಇಂಧನ ಮತ್ತು ವಿದ್ಯುಚ್ಛಕ್ತಿ ಕ್ಷೇತ್ರಗಳಲ್ಲಿ  :  ೧,೧೧,೦೮೨ ಕೋಟಿ, ನೀರಾವರಿ ಮತ್ತು ಜಲಸಂಪನ್ಮೂಲಗಳಲ್ಲಿ ೧೨೯೭ ಕೋಟಿ, ರಸ್ತೆ ನಿರ್ಮಾಣ ಮತ್ತು ರೇಲ್ವೆ ಅಭಿವೃದ್ಧಿ ೭೬,೬೭೯ ಕೋಟಿ, ಇತರ ಕ್ಷೇತ್ರಗಳಲ್ಲಿ ೩೪,೫೮೭ ಕೋಟಿ ಹೂಡಿದೆ ಎಂದು ವಿವರಿಸಲಾಗಿದೆ.

೨೦೧೯-೨೦ರಲ್ಲಿ  ಸರಿ ಸುಮಾರು ೧೯ ಪ್ರಶಸ್ತಿಗಳು ಗಳಿಸಿರುವ ಎಲ್ ಐಸಿ ದೇಶದ್ಯಾಂತ ೬೦೦೦  ಗ್ರಾಹಕ ಸೇವಕ ಕೇಂದ್ರಗಳನ್ನು ಪ್ರಾರಂಭಿಸಿದೆ.

ಇನ್ನೂ ಧಾರವಾಡ ವಿಭಾಗದಲ್ಲಿ ೨೫ ಲಕ್ಷ ಗ್ರಾಹಕರಿದ್ದಾರೆ. ೨೦೧೯-೨೦ರಲ್ಲಿ  ಒಟ್ಟು ೧,೫೬,೩೨೨    ಪಾಲಿಸಿ ಮಾರಾಟ ಮಾಡಿದ್ದು, ಮೊದಲ ಪ್ರೀಮಿಯಂ ಸಂಗ್ರಹಣೆ ೨೪೭.೧೩  ಕೋಟಿ, ಸಂಗ್ರಹಣೆಯಾದ ಒಟ್ಟು ಆದಾಯ ೨೧೯೪.೬೭ ಕೋಟಿ, ಸಂಗ್ರಹಣೆಯಾದ ಒಟ್ಟು  ಪ್ರೀಮಿಯಂ  ಆದಾಯ ೨೦೯೦.೧೮ಕೋಟಿಯಷ್ಟಾಗಿದೆ ಎಂದು ಹಿರಿಯ ವಿಭಾಗಾಧಿಕಾರಿಗಳು ವಿವರಿಸಿದ್ದಾರೆ.

ಮ್ಯಾಚ್ಯುರಿಟಿ ಬೆನಿಫಿಟ್ ಪಾಲಸಿಗಳ ಸಂಖ್ಯೆ                : ೭೭೪೩೩

ಸಂದಾಯವಾದ ಹಣ                                                    : ರೂ.೫೬೦.೯೪ ಕೋಟಿ.

ಸರ್ವೈವಲ್ ಬೆನಿಫಿಟ್ ಪಾಲಿಸಿಗಳ ಸಂಖ್ಯೆ                   : ೭೫,೩೯೮. ರೂ ೧೯೭.೪೬ ಕೋಟಿ

ಡೆತ್ ಕ್ಲೇಮ್ ಪಾಲಿಸಿಗಳ ಸಂಖ್ಯೆ                                   : ೮೩೯೬ 

ಸಂದಾಯವಾದ ಹಣ                                                   : ರೂ.೯೯.೩೭ ಕೋಟಿ.

ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿದ ಸರ್‌ಪ್ಲಸ್ ಹಣ    : ರೂ.೪೮೪.೪೮ ಕೋಟಿ.

ಧಾರವಾಡದ ಹಣಕಾಸು ಮತ್ತು ಲೆಕ್ಕ ಪತ್ರ ವಿಭಾಗದಿಂದ ಕಳೆದ ವರ್ಷದ ಆರ್ಥಿಕ ಲೆಕ್ಕ ಪತ್ರಗಳನ್ನು ಉನ್ನತ ಅಧಿಕಾರಿಗಳಿಗೆ ಸಮರ್ಪಿಸುವಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮತ್ತು ವಲಯ ಮಟ್ಟದಲ್ಲಿ ದ್ವಿತಿಯ ಸ್ಥಾನ ಗಳಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಆರ್ಥಿಕ ವರ್ಷದಲ್ಲಿ ೫ವಿಮಾ ಗ್ರಾಮ ಮತ್ತು ೮ ವಿಮಾ ಶಾಖೆಗಳನ್ನು ಘೋಷಿಸಲಾಗಿದೆ. ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶಿರಸಿಗೆ ಸ್ಕೂಲ್ ಬಸ್ ಹಾಗೂ ಲಾಯನ್ಸ ಬ್ಲಡ್ ಬ್ಯಾಂಕ್, ಹುಬ್ಬಳ್ಳಿಗೆ ಡಯಾಲಿಸಸ್ ಯಂತ್ರವನ್ನು ಪಡೆಯಲು ಧನಸಹಾಯ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ದೇಶದೆಲ್ಲೆಡೆ ಆತಂಕದ ಕ್ಷಣಗಳಿದ್ದರೂ ಕ್ಲೇಮ ಹಣ ಸಂದಾಯ, ಬಡ್ಡಿಯಿಲ್ಲದೇ ಪ್ರೀಮಿಯಂ ತುಂಬಲು ಅವಧಿ ವಿಸ್ತರಣೆ, ಬಡ್ಡಿಯಲ್ಲಿ ರಿಯಾಯತಿಯನ್ನು ನೀಡಿ ಸೇವೆಗಳನ್ನು ನಿರಂತರವಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *