ರಾಜ್ಯ

ಸಂಕಷ್ಟಕ್ಕೆ ಸಿಲುಕಿದ ರೋಗ ಲಕ್ಷಣವಿಲ್ಲದ ಧಾರವಾಡದ ಕೆ ಎಸ್ ಆರ್ ಟಿಸಿ ನೌಕರ ….!

ಧಾರವಾಡ prajakiran.com : ರೋಗ ಲಕ್ಷಣವಿಲ್ಲದ ಧಾರವಾಡದ ಕೆ ಎಸ್ ಆರ್ ಟಿಸಿ ನೌಕರನೊಬ್ಬ ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಬೇಸತ್ತು ಹೊಲದ ಮನೆಯಲ್ಲಿ ವಾಸವಿದ್ದಾನೆ.

ಆತ ಬಾಗೇಪಲ್ಲಿಯಲ್ಲಿ  ಕೆ ಎಸ್ ಆರ್ ಟಿ ಸಿ ಚಾಲಕನಾಗಿದ್ದು, ಲಾಕ್ ಡೌನ್ ಮುಗಿದ ಮೇಲೆ ಕರ್ತ್ಯವಕ್ಕೆ ಜು. 14ರಂದು ಹೋಗಿದ್ದಾನೆ.

ಆದರೆ ಅಂತರ್ ಜಿಲ್ಲಾ ಪ್ರವಾಸದ ಹಿನ್ನಲೆಯಲ್ಲಿ ಆತನ ಗಂಟಲು ದ್ರವ ತಪಾಸಣೆಗೆ ಒಳಪಡಿಸಲಾಗಿತ್ತು.

ವರದಿ ಬರುವ ಮುನ್ನವೇ ಮತ್ತೇ ಲಾಕ್ ಡೌನ್ ಆದ ಮೇಲೆ ಮತ್ತೇ ಊರಿಗೆ ಬಂದ ಮೇಲೆ ಅಲ್ಲಿಯ ವೈದ್ಯರು ಪೋನ್ ಮಾಡಿ ನಿಮಗೆ ಪಾಸಿಟಿವ್ ಅಂತ  ಹೇಳಿದ್ದಾರೆ.

ಹೀಗಾಗಿ ಆತ ಸಂಕಷ್ಟಕ್ಕೆ ಸಿಲುಕಿದ್ದಾನೆ. ವರದಿ ಮಾಹಿತಿ ನೀಡಿ ಮೂರು ದಿನಗಳು ಕಳೆದರೂ ಆತನನ್ನು ಧಾರವಾಡ ತಾಲೂಕಿನ ವನಹಳ್ಳಿ ಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ.

ರೋಗ ಲಕ್ಷಣಗಳಿಲ್ಲ. ಅಂತಹ ರೋಗಿಗಳಿಗೆ ಮನೆಯಲ್ಲಿಏ ಕ್ವಾರಂಟಿನ್ ಆಗಬೇಕು ಎಂಬ ನಿಯಮವಿದೆ ಎಂದು ಹೇಳಿ ಆರೋಗ್ಯ ಇಲಾಖೆ ಕೈ ತೊಳೆದುಕೊಂಡಿದೆ.

ಆದರೆ ಆತನಿಗೆ ಚಿಕಿತ್ಸೆ ನೀಡದಿದ್ದರೂ ಮನೆಯಲ್ಲಿ ಯಾವ ಗುಳಿಗೆ ತೆಗೆದುಕೊಳ್ಳಬೇಕು. ಹೇಗೆ ಆರೈಕೆ ಮಾಡಿಕೊಳ್ಳಬೇಕು ಎಂಬ ಕುರಿತು ಈವರೆಗೆ ಮಾಹಿತಿ ನೀಡಿಲ್ಲ.

ವೈದ್ಯರಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಆತನೇ ಸ್ವಯಂ ಪ್ರೇರಿತವಾಗಿ ಹೊರವಲಯದಲ್ಲಿರುವ ಹೊಲದ ಮನೆಗೆ ಸ್ಥಳಾಂತರಗೊಂಡಿದ್ದಾನೆ.

ಈ ಬಗ್ಗೆ ಧಾರವಾಡ ತಹಸೀಲ್ದಾರ್ ಹಾಗೂ ಆರೋಗ್ಯ ಇಲಾಖೆಗೆ ನಿನ್ನೇಯೇ ಮಾಹಿತಿ ನೀಡಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ. ಆತನಿಗೆ  ಗುಳಿಗೆ ನೀಡಿಲ್ಲ.

ಯಾವುದೇ ಮಾಹಿತಿ ನೀಡಿಲ್ಲ. ಮೂರು ದಿನಗಳಾದರೂ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ ಎಂದು ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ಆಪಾದಿಸಿದ್ದಾರೆ.

ಈಗಲಾದರೂ ಧಾರವಾಡ  ಜಿಲ್ಲಾಡಳಿತ ಸಕರಾತ್ಮಕವಾಗಿ ಸ್ಪಂದಿಸುತ್ತಾ ಇಲ್ಲವೇ ಎಂಬುದು ಕಾದುನೋಡಬೇಕಿದೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *