ರಾಜ್ಯ

ಧಾರವಾಡ ಜಿಲ್ಲೆಯ 84 ಕೋವಿಡ್  ಪಾಸಿಟಿವ್ ಪ್ರಕರಣಗಳ ವಿವರ

*ಒಟ್ಟು 2324 ಕ್ಕೇರಿದ ಪ್ರಕರಣಗಳ ಸಂಖ್ಯೆ*

*ಇದುವರೆಗೆ 836 ಜನ ಗುಣಮುಖ ಬಿಡುಗಡೆ*

*1415  ಸಕ್ರಿಯ ಪ್ರಕರಣಗಳು*

*ಇದುವರೆಗೆ 73 ಮರಣ*

ಧಾರವಾಡ prajakiran.com : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ 84 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .

ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2324 ಕ್ಕೆ ಏರಿದೆ. ಇದುವರೆಗೆ 836 ಗುಣಮುಖರಾಗಿ ಆಸ್ಪತ್ರೆಯಿಂದ  ಬಿಡುಗಡೆಯಾಗಿದ್ದಾರೆ.1415 ಪ್ರಕರಣಗಳು ಸಕ್ರಿಯವಾಗಿವೆ.

73 ಜನ ಮೃತಪಟ್ಟಿದ್ದಾರೆ  ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿಂದು ಪತ್ತೆಯಾಗಿರುವ 84  ಪ್ರಕರಣಗಳಲ್ಲಿ,  42 ಜನರು( ಐಎಲ್ಐ) ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ.

32 ಜನರಿಗೆ ಸೋಂಕಿತರ ಸಂಪರ್ಕದಿಂದ ಕೋವಿಡ್ ಬಂದಿದೆ.   ಒಬ್ಬರು ಅಂತರ್‌ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ.

6 ಜನರ ಸೋಂಕಿತರ ಸಂಪರ್ಕ ಪತ್ತೆಯಾಯಿತು ಹಚ್ಚಲಾಗುತ್ತಿದೆ. ಮೂವರು ( SARI) ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.

ಪ್ರಕರಣಗಳು ಪತ್ತೆಯಾದ ಸ್ಥಳಗಳು:

*ಧಾರವಾಡ ತಾಲೂಕು*  

ಜನ್ನತ್ ನಗರ ನಾಲ್ಕನೇ ಕ್ರಾಸ್, ವಿನಾಯಕ ನಗರ, ಸವದತ್ತಿ ರಸ್ತೆಯ ಗೊಲ್ಲರ ಓಣಿ, ಕಮಲಾಪುರದ ಬಾಳಗಿ ಓಣಿ, ಮಲಪ್ರಭಾ ಗ್ರಾಮೀಣ ಬ್ಯಾಂಕ್, ಕೃಷಿ ವಿ.ವಿ.ಆವರಣ,

ಮಾದರ ಮಡ್ಡಿ ತಳವಾರ ಓಣಿ, ಗರಗ ಗ್ರಾಮದ ಮಾರುಕಟ್ಟೆ ಹತ್ತಿರ,ಸೈದಾಪುರ ಎಂಟನೇ ಕ್ರಾಸ್, ಮೃತ್ಯುಂಜಯ ನಗರ, ಜಿಲ್ಲಾ ಆಸ್ಪತ್ರೆ ಸಿಬ್ಬಂದಿ, ಸಂತೋಷ ನಗರ, ಗಣೇಶನಗರ,

ಹೊಸ ಬಸ್ ನಿಲ್ದಾಣ ಹತ್ತಿರದ ಎಸ್ ಬಿ ಐ ಕಾಲನಿ, ಬನಶಂಕರಿ ನಗರ, ಬೂಸಪ್ಪ ಚೌಕ, ಗಾಂಧಿನಗರ, ಎಸ್ ಡಿ ಎಂ ಆಸ್ಪತ್ರೆ ಆವರಣ, ಕೆಲಗೇರಿ ರಸ್ತೆ ಸಂತೋಷ ನಗರ, ಶೆಟ್ಟರ್ ಕಾಲನಿ,

ಮಹಾನಗರ ಪಾಲಿಕೆಯ 12 ನೇ ವಲಯ , ಶೆಟ್ಟರ್ ಕಾಲನಿ, ಹತ್ತಿಕೊಳ್ಳ ಶ್ರೀರಾಮನಗರ ಬಾಲಮಂದಿರ ಹತ್ತಿರ,

ಮೃತ್ಯುಂಜಯ ನಗರ, ಮೆಹಬೂಬ್ ನಗರ, ಆಂಜನೇಯ ನಗರ,ರಸ್ತೆ.ಪದಕೇರಿ ಜನತಾಪ್ಲಾಟ್, ಸಪ್ತಾಪೂರ, ಮದಿಹಾಳ.

*ಹುಬ್ಬಳ್ಳಿ ತಾಲೂಕು*  

ದೇಶಪಾಂಡೆ ನಗರ,ಮಂಗಳ ಓಣಿ,   ಇಂಗಳಹಳ್ಳಿ ಗ್ರಾಮದ ತೇರಿನ ಓಣಿ, ಗೋಕುಲ ರಸ್ತೆಯ ಮಹಾಲಕ್ಷ್ಮಿ ಲೇಔಟ್, ವಿದ್ಯಾ ನಗರ, ವಿದ್ಯಾ ನಗರ ಪೊಲೀಸ್ ಠಾಣೆ,

ಕಿಮ್ಸ್ ಆಸ್ಪತ್ರೆ ಆವರಣ, ಕುಸುಗಲ್ ಗ್ರಾಮ, ಬಳ್ಳಾರಿ ಗಲ್ಲಿ,ಕರ್ಕಿಬಸವೇಶ್ವರ ನಗರ, ಆದರ್ಶ ನಗರ, ಇಎಸ್ಐ ಕ್ವಾರ್ಟರ್ಸ್, ಮಾರುತಿ ನಗರ,  ನಾಗಶೆಟ್ಟಿಕೊಪ್ಪ,

ಗದಗ ರಸ್ತೆಯ ವಿನುತಾ ಕಾಲನಿ, ಸಿದ್ಧಾರೂಢಮಠ ಮೂರನೇ ಕ್ರಾಸ್,ಗೂಡ್ಸಶೆಡ್ ರಸ್ತೆ, ಕುಸುಗಲ್ ರಸ್ತೆ, ಅಯೋಧ್ಯಾ ನಗರ ಮೂರನೇ ಕ್ರಾಸ್,  ಕಮರಿಪೇಟೆಯ ಗವಿ ಓಣಿ,ಅಂಚಟಗೇರಿ ಓಣಿ,ಶೆಟ್ಟರ್ ಲೇಔಟ್

ಎರಡನೇ ಕ್ರಾಸ್ ವಿದ್ಯಾನಗರ,  ಗುಡಿಹಾಳ ರಸ್ತೆ, ಗೋಪನಕೊಪ್ಪ, ಜಯಪ್ರಕಾಶ್ ನಗರ, ಹೊಸೂರ , ವಿಶಾಲನಗರ, ಆಜಾದ್ ರಸ್ತೆ 

*ಕುಂದಗೋಳ ತಾಲೂಕು*  ಸಂಶಿ ಗ್ರಾಮದ ಗೌಡರ ಓಣಿ, ಬೆಟದೂರಿನ‌ ವೀರಭದ್ರೇಶ್ವರ ಓಣಿ,  *ಕಲಘಟಗಿ ತಾಲೂಕು* : ಮಿಶ್ರಿಕೋಟಿ  ಗ್ರಾಮ

*ನವಲಗುಂದ ತಾಲೂಕು* :  ಭದ್ರಾಪೂರ,  ನವಲಗುಂದ ಸರ್ಕಾರಿ ಆಸ್ಪತ್ರೆ  ಹಾಗೂ  ಗದಗ ಜಿಲ್ಲೆಯ ನರಗುಂದ, ಗಜೇಂದ್ರಗಡದ ಬಸವೇಶ್ವರ ನಗರ, ಬಳ್ಳಾರಿ ಜಿಲ್ಲೆಯ ಮೈಲಾರ,

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೊಂಡದೂರ, ಉತ್ತರ ಕನ್ನಡ ಜಿಲ್ಲೆಯ ಸೋನಾರವಾಡ, ದಾಂಡೇಲಿ ಟೌನ್‌ ಶಿಪ್ ನಲ್ಲಿ ಇಂದು  ಪ್ರಕರಣಗಳು   ವರದಿಯಾಗಿವೆ.

 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *