ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ
ಕುಂದಗೋಳ : prajakiran.com : ಪಟ್ಟಣದಲ್ಲಿ ಖೋಟಾ ನೋಟುಗಳ ಚಲಾವಣೆ ಮಾಡುತ್ತಿದ್ದ ಹೆಡೆಮುರಿಗೆ ಕಟ್ಟುವಲ್ಲಿ ಕುಂದಗೋಳ ಪಟ್ಟಣ ಪೊಲೀಸ್ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ಹಾಗೂ ಅವರ ತಂಡ ಯಶಸ್ವಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಕುಂದಗೋಳ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಆದಿತ್ಯಾ ಮಿಲ್ಕ್ ಪಾರ್ಲರ್ ಮೇಲೆ ಆ. 6 ರಂದು ದಾಳಿ ಮಾಡಿ ಒಬ್ಬ ಆರೋಪಿತನನ್ನು ದಸ್ತಗೀರ್ ಮಾಡಲಾಗಿದೆ.
ಸದರಿಯವನಿಂದ 500 ರೂ ಮುಖಬೆಲೆಯ ಒಟ್ಟು 47 ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಇವುಗಳನ್ನು ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಇಬ್ಬರು ಮತ್ತು ಶಿರಹಟ್ಟಿ ಪಟ್ಟಣದ ಒಬ್ಬನು ಸೇರಿಕೊಂಡು ಕಳೆದ ತಿಂಗಳು ತನಗೆ 50 ಸಾವಿರ ರೂ. ಖೋಟಾ ನೋಟುಗಳನ್ನು ತಂದು ಕೊಟ್ಟಿದ್ದು ಅದಕ್ಕೆ ತಾನು 18 ಸಾವಿರ ರೂ. ಮೂಲ ನೋಟುಗಳನ್ನು ಕೊಟ್ಟಿದ್ದಾಗಿ ತಿಳಿಸಿದ್ದಾನೆ.
ಆ ಪ್ರಕಾರ ಆರೋಪಿ 2 ಮತ್ತು 3 ನೇದವರಿಗೆ ಆ. 7 ರಂದು ದಸ್ತಗೀರ ಮಾಡಿದ್ದು ಇನ್ನೊರ್ವ ಆರೋಪಿತನಿಗೆ ಈ ದಿವಸ ಆ. 8ರಂದು ದಸ್ತಗೀರ ಮಾಡಿ ಸದರಿಯವನಿಂದ ಖೋಟಾ ನೋಟುಗಳನ್ನು ತಯಾರಿಸಲು ಉಪಯೋಗಿಸಿದ ಒಂದು ಕಲರ್ ಝೆರಾಕ್ಸ ಮಶೀನನ್ನು ಜಪ್ತಿ ಮಾಡಿದ್ದು ಎಲ್ಲ ಆರೋಪಿತರು ನ್ಯಾಯಾಂಗ ಬಂಧನದಲ್ಲಿರುತ್ತಾರೆ ಎಂದು ಧಾರವಾಡ ಜಿಲ್ಲಾ ಪೋಲಿಸ್ ಅಧೀಕ್ಷಕ ಲೋಕೇಶ ಜಗಲಾಸರ ತಿಳಿಸಿದ್ದಾರೆ.