ಅಪರಾಧ

ಕ್ಷೀರಭಾಗ್ಯ ಪ್ರಕರಣ ಮುಚ್ಚಿ ಹಾಕಲು 10 ಲಕ್ಷ ಪಡೆದಿದ್ದ ಕಿರಣ ಮತ್ತೆ 6 ದಿನ ಕಸ್ಟಡಿಗೆ

ಭ್ರಷ್ಟಾಚಾರ ನಡೆಸಿರುವ ಬಗ್ಗೆ ತನಿಖೆ

ಬೆಳಗಾವಿ prajakiran. com : ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿನ ಕಾರಿನ ಚಿನ್ನ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡ ಕಿಂಗ್‌ಪಿನ್ ಕಿರಣನನ್ನು ಜಮಖಂಡಿಯ ಕ್ಷೀರಭಾಗ್ಯ ಹಾಲಿನ ಪುಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತನಿಖೆಗಾಗಿ ಮತ್ತೆ ಆರು ದಿನ ಕಸ್ಟಡಿಗೆ ಪಡೆದಿದೆ.

ಬೆಳಗಾವಿ ಜಿಲ್ಲೆಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ನಿನ್ನೆ ಯಷ್ಟೇ “ಹಾಲಿನ ಪುಡಿ ಪ್ರಕರಣ ಮುಚ್ಚಿಹಾಕಲು ಭ್ರಷ್ಟಾಚಾರ” ನಡೆಸಿರುವ ಬಗ್ಗೆ ಪ್ರಕರಣ ದಾಖಲು ಆಗಿತ್ತು.

ಹೀಗಾಗಿ ಬೆಳಗಾವಿಯ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿ, ಉನ್ನತ ತನಿಖೆಗೆ ಕಸ್ಟಡಿಗೆ  ನೀಡುವಂತೆ ಕೋರಿದ್ದರು. ಸಿಐಡಿ ಅಧಿಕಾರಿಗ ಮನವಿಗೆ ಸ್ಪಂದಿಸಿ ನ್ಯಾಯಾಲಯ ಮತ್ತೆ ಆರು ದಿನ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಇದೇ ವೇಳೆ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿರುವ ನಕಲಿ ಪೊಲೀಸ್ ಗುರುತಿನ ಚೀಟಿ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ 5ನೇ ಜೆಎಂಎಫ್‌ಸಿ ಹಾಗೂ ಮುನ್ಸಿಫ್ ನ್ಯಾಯಾಲಯವು ಕಿರಣವೀರನಗೌಡಗೆ ಶನಿವಾರ ಜಾಮೀನು ಮಂಜೂರು ಮಾಡಿದೆ.

ಈವರೆಗೆ ಕಿರಣ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕು ಪ್ರಕರಣ ದಾಖಲು ಆಗಿದ್ದು, ಸಿಐಡಿ ತನಿಖೆ ಚುರುಕು ಗೊಂಡಿದೆ. ಮತ್ಯಾವ ಪ್ರಕರಣ ದಾಖಲು ಆಗಲಿದೆ ಎಂಬುದು ಕಾದು ನೋಡಬೇಕು

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *