ರಾಜ್ಯ

ಕೆ ಐ ಎ ಡಿ ಬಿ ಬಹುಕೋಟಿ ಹಗರಣದ ಸಿಐಡಿ ತನಿಖೆ ವಿರುದ್ದ ಬಸವರಾಜ ಕೊರವರ ಅಸಮಾಧಾನ

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕೆ ಐ ಎ ಡಿ ಬಿ ಬಹುಕೋಟಿ ಹಗರಣದ ಸಿಐಡಿ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ರಾಜ್ಯ ಸರಕಾರ ಉತ್ತರ ಕರ್ನಾಟಕ ಭಾಗದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಆಯೋಗ ನೇಮಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು‌.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿಐಡಿ
ಒಂಬತ್ತು ತಿಂಗಳ ಕಾಲ ತನಿಖೆ ನಡೆಸಿ, ಎರಡು ಹಂತದ ಚಾರ್ಜ್ ಶೀಟ್ ಹಾಕಿದ್ದಾರೆ. ಮೊದಲ ಚಾರ್ಜ್ ಶೀಟ್ 02-06-2023 ಹಾಗೂ ಎರಡನೇ ಚಾರ್ಜ್ ಶೀಟ್ 11-09-2023 ರಂದು ಒಟ್ಟು ಎರಡು ಸಾವಿರಕ್ಕೂ ಅಧಿಕ ಪುಟದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಅದರಲ್ಲಿ ಹಲವು ಹಿರಿಯ ಅಧಿಕಾರಿಗಳನ್ನು ಮತ್ತು ಕೆಲ‌ ಮಧ್ಯವರ್ತಿಗಳನ್ನ ಪ್ರಕರಣದಿಂದ ಬಚಾವ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ದಾಖಲೆ ಬಿಡುಗಡೆಗೊಳಿಸಿದರು.
ಇದರಲ್ಲಿ ಪ್ರಮುಖವಾಗಿ ಚಾರ್ಜ್ ಶೀಟ್ ಪ್ರಕಾರವೇ ಕೆ ಐ ಎ ಡಿ ಬಿ ಹಣಕಾಸು ನಿಯಂತ್ರಣಾಧಿಕಾರಿ ಎನ್. ವಾಣಿ ಅವರು 12-06-2023 ರಂದು ಸಿ ಐ ಡಿ ವಿಚಾರಣಾಧಿಕಾರಿ‌ ಮುಂದೆ ಹಾಜರಾಗಿ ಸಾಕ್ಷಿಧಾರ ಹೇಳಿಕೆ ನೀಡಿದ್ದಾರೆ‌. ಹೇಳಿಕೆಯಲ್ಲಿ ಹಣ ಬಿಡುಗಡೆಗೆ ಸಿ ಇ ಓ, ವಿಶೇಷ ಭೂ ಸ್ವಾಧೀನಾಧಿಕಾರಿ ದಯಾನಂದ ಬಂಡಾರಿ ಹಾಗೂ ಲೆಕ್ಕ ಪತ್ರ ವಿಭಾಗದ ಸಹಾಯಕ ಕಾರ್ಯದರ್ಶಿ ಮಂಜುನಾಥ ಮುದಕವಿ ಸೇರಿ ಹಲವು ಅಧಿಕಾರಿಗಳ ಪರಿಶೀಲನೆ ಹಾಗೂ ಸಹಿ ನಂತರ ಆರ್ ಟಿ ಜಿ ಎಸ್ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರೂ ಆಯಾ ಅಧಿಕಾರಿಗಳನ್ನು ಇವರು ಯಾಕೆ ವಿಚಾರಣೆಗೊಳಪಡಿಸಲಿಲ್ಲ. ಇದು ಹಲವು ಅನುಮಾನ ಹುಟ್ಟು ಹಾಕಿದೆ ಎಂದು ಆರೋಪಿಸಿದರು.
ಈ ಹಗರಣದಲ್ಲಿ ಶಾಮೀಲಾಗಿರುವ ಕುರಿತು ಎಲ್ಲಾ ದಾಖಲೆ ಹಾಗೂ ಸಾಕ್ಷಿಗಳಿದ್ದರೂ ಕೂಡ ಹಣಕಾಸು ನಿಯಂತ್ರಣಾಧಿಕಾರಿ ಎನ್ ವಾಣಿ ಸುಳ್ಳು ಹೇಳಿಕೆ ನೀಡಿದರೂ ಸಿಐಡಿ ಅವರನ್ನು ಹಾಗೂ ಮೇಲಾಧಿಕಾರಿಗಳನ್ನ ಬಚಾವ್ ಮಾಡಿದ್ದು ಯಾಕೆ‌ ಎಂದು ಕಿಡಿಕಾರಿದರು.
30-04-2022ರಂದು ನಿವೃತ್ತಿ ಹೊಂದಿದ ದಿನವೇ ಎಸ್ ಎಲ್ ಓ ವಿ. ಡಿ. ಸಜ್ಜನ ಅವರು 20 ಕೋಟಿಗೂ ಅಧಿಕ ಹಣವನ್ನು ರೈತರಿಗೆ ಮಧ್ಯರಾತ್ರಿ ವರೆಗೆ ಆರ್ ಟಿ ಜಿ ಎಸ್ ಮಾಡಿದ ಮಾಹಿತಿ ಇದೆ.
ಅದರಲ್ಲಿ ಒಂದು ಸೀತಾಬಾಯಿ ಯಲ್ಲಾ ನಾಯ್ಕ‌ ಪಾಟೀಲ ಹಾಗೂ ಇನ್ನೊಂದು ಮಾಹಿತಿಯನ್ನು ನಾವೇ ದೂರಿನಲ್ಲಿ ಉಲ್ಲೇಖಿಸಿದ್ದೇವು. ಅನುದಾನ ಕೊರತೆ ಅಂತ ಹೇಳಿ‌ ನಾಲ್ಕು ತಿಂಗಳ ನಂತರ ಸೀತಾಬಾಯಿ ಯಲ್ಲಾ ನಾಯ್ಕ ಅವರ
ಐಡಿಬಿಐ ಬ್ಯಾಂಕ್ ಖಾತೆಗೆ 5 ಕೋಟಿ 22 ಲಕ್ಷ ಹಣ ಜಮಾ ಆಗಿದೆ. ಎನ್. ವಾಣಿ ಅವರ ಕಾಲಾವಧಿಯಲ್ಲಿಯೇ ಅನುದಾನ ಕೊರತೆಯಿದ್ದಾಗಲೂ ಯಾವ ಯೋಜನೆ ಅಡಿ ಹಣ ಬಿಡುಗಡೆ ಮಾಡಿದ್ದಾರೆ ಎಂಬುದು ಸಿಐಡಿ ವಿಚಾರಿಸಿಲ್ಲ.
ಕೆ ಐ ಎ ಡಿ ಬಿ ವಿಶೇಷ ಜಿಲ್ಲಾಧಿಕಾರಿ ದಯಾನಂದ ಬಂಡಾರಿ, ಲೆಕ್ಕಪತ್ರ ವಿಭಾಗದ ಸಹಾಯಕ ಕಾರ್ಯದರ್ಶಿ ಮಂಜುನಾಥ ಮುದಕವಿ ಹಾಗೂ ಹಣಕಾಸು ನಿಯಂತ್ರಣಾಧಿಕಾರಿ ಎನ್ ವಾಣಿ ಅವರನ್ನು ಬಚಾವ್ ಮಾಡಿರುವುದು ಯಾವ ಒತ್ತಡಕ್ಕೆ ಮಣಿದು, ಯಾವ ರಾಜಕಾರಣಿಯ ಪ್ರಭಾವ ಇದರ ಹಿಂದೆ ಇದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಬಸವರಾಜ ಕೊರವರ ಅಸಮಾಧಾನ ವ್ಯಕ್ತಪಡಿಸಿದರು.
ಈ ಹಗರಣಕ್ಕೆ ಪ್ರಮುಖವಾಗಿ
ಖೊಟ್ಟಿ ಆಧಾರ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಖೊಟ್ಟಿ ಬಾಂಡ್ ಪೇಪರ್ ಯಾರು ತಂದರೂ, ಹೇಗೆ ತಯಾರಿಸಿದರೂ ಇದರ ಕಿಂಗ್ ಪಿನ್ ಗಳನ್ನು ಯಾಕೆ ಇವರೆಗೆ ಯಾಕೆ ಬಂಧಿಸಿಲ್ಲ ಎಂಬುದು ಸಿಐಡಿ ತನಿಖೆಯಲ್ಲಿ ನಿಗೂಢವಾಗಿದೆ ಎಂದು ಕಿಡಿಕಾರಿದರು.
ಇದಕ್ಕೆ ಸ್ಪಷ್ಡ ನಿರ್ದಶನವೆಂದರೆ ನಮ್ಮ ಶಾಲ್ಮಲಾ ಸೂಸೈಟಿ ನಲ್ಲಿ ಹತ್ತಾರು ಬಾಂಡ್ ಪೇಪರ್ ಖರೀದಿಸಲಾಗಿದೆ. ಹಗರಣದ ಕಿಂಗ್ ಪಿನ್ ಹಾಗೂ ಎಜೆಂಟ್ ರವಿ ಕುರಬೆಟ್ಟನೇ ಎಲ್ಲಾ ಬಾಂಡ್ ಪೇಪರ್ ಖರೀದಿಸಿದ್ದಾನೆ. ಅವನ ಹಸ್ತಾಕ್ಷರ ಹಾಗೂ ದೂರವಾಣಿ ಸಂಖ್ಯೆ ಖರೀದಿಸುವ ಸಂದರ್ಭದಲ್ಲಿ ನಮೂದಿಸಲಾಗಿದೆ. ಜೊತೆಗೆ ಇತನೇ ಕೆ ಐ ಡಿ ಎ ಬಿ ಕಚೇರಿಯಲ್ಲಿ ಕುಳಿತು ಹಲವು ಕಡತಗಳನ್ನು ಬರೆದಿದ್ದಾನೆ ಎಂಬುದು ಹಸ್ತಾಕ್ಷರಗಳೇ ತೋರಿಸಿದರೂ. ಸಿಐಡಿ ಅವನ ಯಾಕೆ ಬಂಧಿಸಿಲ್ಲ
ಎಂಬುದು ನಮಗೆ ಕಾಡುವ ಬಹು ದೊಡ್ಡ ಪ್ರಶ್ನೆಯಾಗಿದೆ.
ಇದರೊಂದಿಗೆ ನೋಟರಿ ವಕೀಲರಾದ ಬಸವರಾಜ ನಿಂಗಪ್ಪ ಸೋಮಣ್ಣವರ ಹೇಳಿಕೆಯಲ್ಲಿ ಮಡಿವಾಳಪ್ಪ ಗುಗ್ಗರಿ ವಕೀಲರು ಗಡಿಬಿಡಿಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ರಜಿಸ್ಟರ್ ನಲ್ಲಿ ನಮೂದಿಸಿಲ್ಲ ಎಂದು ಹೇಳಿದರೆ, ಮಡಿವಾಳಪ್ಪ ಗುಗ್ಗರಿ ವಕೀಲರ ಹೇಳಿಕೆಯಲ್ಲಿ ಬಾಂಡ್ ನಲ್ಲಿ ಮಾಡಿದ ಸಹಿ ಸೀಲ್ ನನ್ನದಲ್ಲ ಎಂದು ಹೇಳಿದಲ್ಲದೆ, ಸೀತಾಬಾಯಿ ಎಲ್ಲಾ ನಾಯ್ಕ ಪರಿಚಯಸ್ಥರಲ್ಲ ಎಂದು ಹೇಳಿದ್ದಾರೆ.
ಅಚ್ಚರಿ ಹಾಗೂ ಆತಂಕದ ಸಂಗತಿಯೆಂದರೆ 2012 ರಲ್ಲಿ ಪ್ರಕರಣ ರಾಜಿ ಸಂಧಾನ ಆದಾಗ ಮಡಿವಾಳಪ್ಪ ಗುಗ್ಗರಿ ವಕೀಲರು ಇದ್ದರು ಎಂಬುದು ದಾಖಲೆಗಳಿವೆ. ಆದರೂ ಸಿಐಡಿ ಅಧಿಕಾರಿಗಳು ಈ ಪ್ರಕರಣದ ಸಮಗ್ರವಾದ ತನಿಖೆ ನಡೆಸದೆ ಇಂತಹ ಹತ್ತು ಹಲವು ಯಡವಟ್ಟು ಮಾಡಿರುವುದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಹೀಗಾಗಿ ಹಲವು ಅನುಮಾನಗಳು ಕಂಡು ಬಂದ ಹಿನ್ನಲೆಯಲ್ಲಿ ಈ ಕುರಿತು ಸಿಎಂ, ಕೈಗಾರಿಕಾ ಸಚಿವರು ಹಾಗೂ ಸಿಐಡಿ ಡಿಜಿಪಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಪ್ರಕರಣದ ಕುರಿತು ಕೂಲಂಕುಷವಾಗಿ ತನಿಖೆ ನಡೆಸುವಂತೆ ಈಗಾಗಲೇ ದೂರು ನೀಡಲಾಗಿದೆ. ಇದರ ಜೊತೆಗೆ ಮೆಹಬೂಬ್ ಸುಬಾನಿ ಶಿರೂರ ಅವರಿಗೆ 30-04-2022ರಂದು ಆರ್ ಟಿ ಜಿ ಎಸ್ ಮಾಡಿದ ಎರಡು ದಿನದ ನಂತರ ಇ ಸ್ಟಾಂಪ್ ಪೇಪರ್ ತಂದು ಹಾಕುತ್ತಾರೆ. ಆದರೂ ಅದರ ವಿಚಾರಣೆ ನಡೆಸಿಲ್ಲ.
ಕೆ ಐ ಎ ಡಿ ಬಿ ಲೆಕ್ಕಪತ್ರ ವಿಭಾಗದ ಸಹಾಯಕ ಕಾರ್ಯದರ್ಶಿ
ಮಂಜುನಾಥ ಮುದಕವಿ ಈ ಕಚೇರಿಯಲ್ಲಿಯೇ ಹಲವು ವರ್ಷಗಳಿಂದ ಇದ್ದರೂ ಎರಡು ಬಾರಿ ಹಣ ಪಾವತಿಸಿದ ಕುರಿತು ಯಾಕೆ ಮೌನ ಮುರಿದಿಲ್ಲ. ಈ ಹಿಂದೆ ಇವರೇ ಹಣ ಪಾವತಿ ಮಾಡಿಲ್ಲ ಅಂತ ಸಹಿ‌ ಕೂಡ ಮಾಡಿದ್ದಾರೆ. ಮತ್ತೆ ಎರಡನೇ ಬಾರಿ ಹಣ ಪಾವತಿಸಿರುವುದು ಯಾಕೆ.
ಸಿಐಡಿ ಹೇಳಿಕೆಯಲ್ಲಿ ಎಜೆಂಟ್ ಗಳು ಪರಿಚಯವಿಲ್ಲ. ಯಾರಿಂದಲೂ ತಾವು ಹಣ ಪಡೆದಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಅವರ ಕಾಲ್ ಹಿಸ್ಟರಿ ತೆಗಿಸಿದರೆ ಈ ಬಗ್ಗೆ ಸತ್ಯಾಂಶ ಹೊರಗಡೆ ಬರುತ್ತದೆ ಎಂದು ಆಗ್ರಹಿಸಿದರು.
ಇದಲ್ಲದೆ,
ವೀರನಗೌಡ ಪಾಟೀಲ ಬಸನಗೌಡ ಪಾಟೀಲ ಶ್ರೀಕಾಂತ್ ಪಾಟೀಲ ಇವರು ಸೀತಾಬಾಯಿ ಯಲ್ಲಾ ನಾಯ್ಕ ಹಾಗೂ ಮೃತ ರೈತ ಶಿವನಗೌಡ ವೆಂಕನಗೌಡ ಪಾಟೀಲ ಅವರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಎಂಟು ಕೋಟಿ ದುಡ್ಡು ಹೊಡೆದಿದ್ದಾರೆ.
ಇವರು ಬ್ಯಾಂಕ್ ವಿತ್ ಡ್ರಾವಲ್ ಸಾಕ್ಷಿ, ಕೆ ಐ ಎ ಡಿಬಿ ಕಚೇರಿ ಸಾಕ್ಷಿಯಾಗಿ ಸಹಿ ಮಾಡಿದ್ದು ಇದ್ದು ಇವರನ್ನು ಈ ಪ್ರಕರಣದಲ್ಲಿ ಆರೋಪಿತರನ್ನಾಗಿ ಮಾಡಬಹುದಿತ್ತು. ಆದರೆ ಇವರನ್ನು ಪ್ರಕರಣದ ಹಲವು ವಿಚಾರಣೆ ಕಡೆ ಪಂಚರನ್ನಾಗಿಸಿರುವುದು ಚಾರ್ಜ್ ಶೀಟ್ ನಲ್ಲಿ ಕಂಡು ಬಂದಿರುವುದು ವಿಪಯಾರ್ಸದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳಾದ ಅಶ್ಪಕ್ ದುಂಡಸಿ, ವೀರನಗೌಡ ಪಾಟೀಲ ಬಸನಗೌಡ ಪಾಟೀಲ ಶ್ರೀಕಾಂತ್ ಪಾಟೀಲ ಹಾಗೂ
ರವಿ ಕುರಬೆಟ್ಟ ಇವರು 2022ರಲ್ಲಿ ಧಾರವಾಡ ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಖರೀದಿಸಿದ ಕೋಟ್ಯಾಂತರ ರೂಪಾಯಿ ಆಸ್ತಿ ಸಂಪಾದಿಸಿದ ಕುರಿತು ಸಮಗ್ರವಾಗಿ ಮಾಹಿತಿ ಸಂಗ್ರಹಿಸಿಲ್ಲ. ಮತ್ತು ಅವರ ಆಸ್ತಿ ಮುಟ್ಟು ಗೋಲು ಹಾಕಿಕೊಂಡು ಸರಕಾರದ ನಷ್ಟ ಭರಿಸುವ ಕುರಿತು ಯಾವುದೇ ರೀತಿಯ ಪ್ರಸ್ತಾವನೆ ಚಾರ್ಜ್ ಶೀಟ್ ನಲ್ಲಿ ನಮೂದಿಸದಿರುವುದು ಯಾಕೆ ಎಂಬ ಯಕ್ಷಪ್ರಶ್ನೆ ಧಾರವಾಡದ ಜನತೆಗೆ ಕಾಡುತ್ತಿದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ವಿವರಿಸಿದರು. ಇದಕ್ಕೆ ಸಹಕಾರ ನೀಡಿದ
ಐಡಿಬಿಐ ಬ್ಯಾಂಕ್ ಮ್ಯಾನೇಜರ್ ನನ್ನು ಕೂಡ ಯಾಕೆ ಬಂಧಿಸಿಲ್ಲ. ಸಂಜಯ ಅಪ್ಪಾಸಾಬ ದೇಸಾಯಿ ಬ್ಯಾಂಕ್ ಖಾತೆಗೆ ಬಸವರಾಜ ಕೋರಿ ನಾಮಿನಿ ಆಗಿದ್ದರೆ, ಶಿವನಗೌಡ ವೆಂಕನಗೌಡ ಪಾಟೀಲ ಬ್ಯಾಂಕ್ ಖಾತೆಗೆ ಶ್ರೀಕಾಂತಗೌಡ ಪಾಟೀಲ ನಾಮಿನಿ ಆಗಿದ್ದಾರೆ. ಬಸವರಾಜ ಕೋರಿಯನ್ನು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ನಕಲಿ ಆಧಾರ್ ಕಾರ್ಡ್ ಪ್ರಕರಣದಲ್ಲಿ ಬಂಧನ ಆಗಿದ್ದಾನೆ. ಆದರೆ ಸಿಐಡಿ ತನಿಖೆಯಲ್ಲಿ ಬಚಾವ್ ಆಗಿರುವುದು ಹೇಗೆ ಮತ್ತು ಶ್ರೀಕಾಂತಗೌಡ ಪಾಟೀಲ ಸಿಐಡಿ ತನಿಖೆಯಲ್ಲಿ ಪಂಚನಾಗಿರುವುದು ನೋಡಿದರೆ ಸಿ ಐ ಡಿ ತನಿಖಾಧಿಕಾರಿ ಎಲ್. ಆರ್. ಅಗ್ನಿ ಸಂಪೂರ್ಣವಾಗಿ ದಾರಿ ತಪ್ಪಿರುವುದು ಮೇಲ್ನೋಟಕ್ಕೆ ತೋರಿಸುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆರೋಪಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ಸರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *