ರಾಜ್ಯ

ಶಾಲೆಗಳ ಪುನರಾರಂಭ, ಪೂರ್ವಸಿದ್ಧತೆ ಸುತ್ತೋಲೆ ಪುನರ್ ಪರಿಶೀಲಿಸಲು ಶಿಕ್ಷಕಿಯರ ಆಗ್ರಹ

ಧಾರವಾಡ prajakiran.com :  ರಾಜ್ಯಾದ್ಯಂತ ಶಾಲೆಗಳ ಪುನರಾರಂಭ, ಪೂರ್ವಸಿದ್ಧತೆ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು  ಪುನರ್ ಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರ ಆಗ್ರಹಿಸಿದ್ದಾರೆ.





ಜೂನ್ ೫ ರಂದು ಶಾಲೆಯ ಪುನರಾರಂಭಕ್ಕೆ ಹಾಗೂ ಶುಚಿತ್ವಕ್ಕಾಗಿ ಆದೇಶವನ್ನು ನೀಡಿದ್ದು ಶಾಲೆಯು ಪುನರಾರಂಭಗೊಳ್ಳಬೇಕೆಂದು ನಿಗದಿಪಡಿಸಿರುವ ದಿನಗಳಲ್ಲಿ ಒಂದು ಸೂಕ್ತವಾದ ನಿರ್ಧಾರವನ್ನು, ಸರ್ಕಾರವು ಪೋಷಕರ ಕಡೆಯಿಂದ, ನುರಿತ ವೈದ್ಯರುಗಳಿಂದ,   ಪಂಡಿತರು ಗಳಿಂದ ಬಹಳಷ್ಟು  ಚರ್ಚೆಗಳು ನಡೆಯಲಿ.

ಇದು ಮಕ್ಕಳು ಹಾಗೂ ಶಿಕ್ಷಕರ ಜೀವನ್ಮರಣದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕಿಯರಲ್ಲಿ ಹಲವರು ಗರ್ಭಿಣಿಯರು, ಅಂಗವಿಕಲರಿದ್ದರೆ ಕೆಲವರು ಶಿಶು ಪಾಲನೆ ಮತ್ತು ವಯಸ್ಕ  ಪೋಷಕರನ್ನು ಹೊಂದಿದ್ದಾರೆ.



ದಿನೇ ದಿನೇ  ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಶಾಲೆಯ ಪುನರಾರಂಭದ ಆದೇಶವು ಅತ್ಯಂತ ಆಘಾತಕಾರಿಯಾಗಿ ಪರಿಣಮಿಸಿದೆ.

ಪ್ರಸ್ತುತ  ಲಾಕ್ ಡೌನ್ ಸಮಸ್ಯೆಯಲ್ಲಿ ಸಾರಿಗೆ ಸಂಚಾರದ ಅಸ್ತವ್ಯಸ್ತ,ಶಾಲೆಗಳು ಕ್ವಾರಂಟೈನ್ ಕೇಂದ್ರಗಳಾಗಿರುವುದು, ಸಿಲ್ ಡೌನ್ ಕೇಂದ್ರಗಳ ಸಮೀಪವಿರುವುದರಿಂದ ಪ್ರತಿಯೊಬ್ಬ ಶಿಕ್ಷಕಿಯರು ಶಾಲೆಗೆ ಬರುವುದು ತುಂಬಾ ತೊಂದರೆಯಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶೈಕ್ಷಣಿಕ  ವಿಚಾರಗಳಲ್ಲಿ ತಾವುಗಳು ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆ ಮಾಡಿದರೂ ನಾವು ಬರಲು ಸಿದ್ಧವಾಗಿದ್ದೇವೆ.

ಆದರೆ ಈಗ ನಮ್ಮ ವೃತ್ತಿ ಜೀವನವನ್ನು ಉಳಿಸಿಕೊಡಲು ನಾವು ಜೀವವನ್ನು ಉಳಿಸಿಕೊಳ್ಳುವ ದುಃಸ್ಥಿತಿ ಒದಗಿ ಬಂದಿದೆ ಎಂದು ವಿವರಿಸಿದ್ದಾರೆ.

ಶಿಕ್ಷಕರ ಹಾಗೂ ಮಕ್ಕಳ ಆರೋಗ್ಯಕರ ಹಾಗೂ ಶೈಕ್ಷಣಿಕ ಹಿತದೃಷ್ಟಿಯಿಂದ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಪರಮೋದ್ದೇಶದ ಸಲುವಾಗಿ, ಆದೇಶವನ್ನು ಪರಿಶೀಲನೆ ಮಾಡಿ ಎಂದು ಆಗ್ರಹಿಸಿದ್ದಾರೆ.



 ಶಾಲೆಯಲ್ಲಿ ಶಿಕ್ಷಕರ ಪ್ರಸ್ತುತತೆಯನ್ನು ಒಂದು ವಾರ ಮುಂಚಿತವಾಗಿ ಮಾತ್ರ ಮಾಡಿಕೊಡಲು ಅವಕಾಶ ಮಾಡಿಕೊಡಬೇಕೆಂದು ಎಲ್ಲ ಮಹಿಳಾ ಶಿಕ್ಷಕಿಯರ ಧ್ವನಿಯಾಗಿ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *