ರಾಜ್ಯ

ರಾಜ್ಯದಲ್ಲಿ ಭಾನುವಾರ 5938 ಕರೋನಾ, 68 ಸಾವು

ರಾಜ್ಯದಲ್ಲಿ 4996 ಜನ ಬಿಡುಗಡೆ

ಬೆಂಗಳೂರು prajakiran.com : ರಾಜ್ಯದಲ್ಲಿ ಭಾನುವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 68 ಜನ ಸಾವನ್ನಪ್ಪಿದ್ದಾರೆ.

ಮತ್ತೆ ಹೊಸದಾಗಿ 5938 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ   2,77,814  ಕ್ಕೆ  ಏರಿಕೆಯಾಗಿದೆ.

 ಇಂದು ರಾಜ್ಯದಲ್ಲಿ 4996 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,89,564 ಜನ ಗುಣಮುಖರಾಗಿದ್ದು,  83,551 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  787 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ  ಭಾನುವಾರವೂ 68 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 4683ಕ್ಕೆ ಏರಿಕೆಯಾದಂತಾಗಿದೆ.

ಭಾನುವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

ಬೆಂಗಳೂರಿನಲ್ಲಿ ಬರೋಬ್ಬರಿ 2126 ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.

ಇನ್ನೂಳಿದಂತೆ ಬಾಗಲಕೋಟೆ 139, ಬಳ್ಳಾರಿ 406, ಬೆಳಗಾವಿ 136, ಬೆಂಗಳೂರು ಗ್ರಾಮಾಂತರ 35, ಬೀದರ 38, ಚಾಮರಾಜನಗರ 23, ಚಿಕ್ಕಬಳ್ಳಾಪುರ 81, ಚಿಕ್ಕಮಗಳೂರು 126, ಚಿತ್ರದುರ್ಗ 71, ದಕ್ಷಿಣ ಕನ್ನಡ 193, ದಾವಣಗೆರೆ 265, ಧಾರವಾಡ 194, ಗದಗ 182, ಹಾಸನ, 196, ಹಾವೇರಿ 150, ಕಲಬುರಗಿ 203, ಕೊಡಗು 15, ಕೋಲಾರ 47, ಕೊಪ್ಪಳ 256, ಮಂಡ್ಯ 51, ಮೈಸೂರು 92, ರಾಯಚೂರು 81, ರಾಮನಗರ 42, ಶಿವಮೊಗ್ಗ 246, ತುಮಕೂರು 112, ಉಡುಪಿ 117, ಉತ್ತರಕನ್ನಡ 108, ವಿಜಯಪುರ 134, ಯಾದಗಿರಿ 73 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಾವಿನ ರಣಕೇಕೆ ರಾಜ್ಯದಲ್ಲಿ ಭಾನುವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತುಮಕೂರು, ದಕ್ಷಿಣ ಕನ್ನಡ ಹಾಗೂ ಕೊಪ್ಪಳದಲ್ಲಿ ತಲಾ 5 ಜನ ಸಾವನ್ನಪ್ಪಿದ್ದಾರೆ. 

ಬಳ್ಳಾರಿ 7, ವಿಜಯಪುರ, ಶಿವಮೊಗ್ಗ, ಹಾವೇರಿ ತಲಾ 4, ಚಿತ್ರದುರ್ಗ, ಧಾರವಾಡ, ಹಾಸನ ತಲಾ 3, ಬೆಳಗಾವಿ, ಚಿಕ್ಕಬಳ್ಳಾಪುರ, ದಾವಣಗೆರೆ, ಕಲಬುರ್ಗಿ, ಕೋಲಾರ, ಮಂಡ್ಯ, ರಾಯಚೂರು ಹಾಗೂ ಉಡುಪಿ ತಲಾ 2, ಬಾಗಲಕೋಟೆ, ಚಾಮರಾಜನಗರ, ಉತ್ತರಕನ್ನಡ ಹಾಗೂ ಯಾದಗಿರಿ  ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *